CONNECT WITH US  

ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ

ಕೋಲಾರ: ದೇಶದಲ್ಲಿನ ಎಲ್ಲಾ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶ್ರೀರಾಮಸೇನಾ ಸಂಘಟನೆಯ ಮುಖಂಡರು ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಅರ್ಪಿಸಿದರು. 

ಘನತೆವೆತ್ತ ಸುಪ್ರಿಂ ಕೋರ್ಟ್‌ ನಿರ್ದೇಶನದ ಮೇರೆಗೆ ಅಸ್ಸಾಂ ರಾಜ್ಯದಲ್ಲಿ ನಡೆದ ನೋಂದಣಿ ಪೌರತ್ವ ಅಭಿಯಾನದಲ್ಲಿ 40 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರು ಇರುವ ಬಗ್ಗೆ ಅಘಾತಕಾರಿ ಸತ್ಯ ಹೊರಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೀಗ ಇಡೀ ದೇಶದಲ್ಲಿ ಇಂತಹ ಬಾಂಗ್ಲಾ ನುಸುಳುಕೋರರು ಪರಸರಿಸಿರುವುದರಿಂದ ದೇಶಾದ್ಯಂತ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ದೇಶದ ಭದ್ರತೆ, ಸಾಮಾಜಿಕ, ಆರ್ಥಿಕ , ರಾಜಕೀಯ ಮತ್ತು ನೈತಿಕತೆ, ಜನಸಂಖ್ಯಾ, ವ್ಯಾಪಾರ, ನಮ್ಮ ದೇಶದ ಜನತೆಯ ಉದ್ಯೋಗ ಮತ್ತು ದೇಶದ ಕರ ಇನ್ನಿತರೆ ವಿಚಾರಗಳಿಗೆ ಕಂಟಕರಾಗಿರುವ ಬಾಂಗ್ಲಾ ನುಸುಳುಕೋರರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗೆ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಘೋಷಿಸಿದರು.

ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು, ವಿಳಂಬ ಮಾಡದೇ ನುಸುಳುಕೋರರನ್ನು ದೇಶದಿಂದ ಹೊರ ಹಾಕಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ ಎಂದು ಶ್ರೀರಾಮಸೇನೆ ಮುಖಂಡರು ಎಚ್ಚರಿಸಿದರು.

ನುಸುಳುಕೋರರ ಪತ್ತೆ ಮತ್ತು ಅವರನ್ನು ದೇಶದಿಂದ ಹೊರ ಹಾಕುವ ನಿರ್ಧಾರವನ್ನು ವಿರೋಸುವ ಕೆಲವು ಗೋಸುಂಬೆ ರಾಜಕಾರಣಿಗಳು ಇನ್ನಾದರೂ ತಮ್ಮತನ ಪ್ರದರ್ಶಿಸಲಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಿಂತ ಮೊದಲು ದೇಶ ಮುಖ್ಯ ಎಂಬ ಸತ್ಯವನ್ನಾದರೂ ಅರಿಯಲಿ ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ರಮೇಶ್‌ರಾಜ್‌, ನಗರ ಅಧ್ಯಕ್ಷ ಪ್ರಭಾಕರ್‌, ತಾಲೂಕು ಅಧ್ಯಕ್ಷ ವೇಣು, ಪ್ರಧಾನ ಕಾರ್ಯದರ್ಶಿ ವಾಸುದೇವಾನಂದ ಸ್ವಾಮಿ, ಮುಖಂಡರಾದ ಭಾರ್ಗವ್‌, ಆನಂದ್‌, ಡಿ.ಸಿ. ಮುರಳಿ, ರಾಮಮಹೇಶ್‌, ಪ್ರವೀಣ್‌, ನಾಗರಾಜ್‌ ಮತ್ತಿತರರು ನೇತƒತ್ವ ವಹಿಸಿದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top