CONNECT WITH US  

ಕೋಲಾರ, ಚಿಕ್ಕಬಳ್ಳಾಪುರ ಬರಪೀಡಿತ ಘೋಷಣೆಗೆ ಆಗ್ರಹ

ಕೋಲಾರ: ಅಂತರ್ಜಲ 1200 ಅಡಿ ದಾಟಿ ಸಂಕಷ್ಟದಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳನ್ನು ಸಂಪೂರ್ಣವಾಗಿ ಬರಪೀಡಿತ ಜಿಲೆಗಳೆಂದು ಘೋಷಿಸುವಂತೆ ಸರ್ಕಾರವನ್ನು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಕೆ.ಎಚ್‌.ಮುನಿಯಪ್ಪ ಆಗ್ರಹಿಸಿದರು.
ನಗರದ ತೋಟಗಾರಿಕಾ ನರ್ಸರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಫ‌ಲಪುಷ್ಪ$ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬರ ಪಟ್ಟಿಯಲ್ಲಿ ಮಾಲೂರು, ಗೌರಿಬಿದನೂರು ಸೇರಿಸಿ:
ಸರ್ಕಾರ ಘೋಷಿಸಿರುವ 98 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲೆಯ ಮಾಲೂರು ಹಾಗೂ ಚಿಕ್ಕಬಳ್ಳಾಪುರ ಜಿಲೆಯ ಗೌರಿಬಿದನೂರನ್ನು ಕೈಬಿಡಲಾಗಿದೆ, ಇದು ಸರಿಯಾದ ಕ್ರಮವಲ್ಲ ಎಂದರು.

ಈ ಎರಡು ಜಿಲೆಗಳು ಯಾವುದೇ ನೀರಿನ ಮೂಲಗಳಿಲ್ಲದೇ ಸಂಕಷ್ಟದಲ್ಲಿದ್ದು, ಇದನ್ನು ವಿಶೇಷವಾಗಿ ಪರಿಗಣಿಸುವಂತೆ ಮನವಿ ಮಾಡಿದರು.
20 ವರ್ಷಗಳ ಹಿಂದೆ ಚೆನ್ನೈಗೆ ತರಕಾರಿ ನೀಡುತ್ತಿದ್ದ ದಕ್ಷಿಣ ಭಾರತದಲ್ಲೆ ಖ್ಯಾತಿ ಪಡೆದ ಜಿಲ್ಲೆ ಕೋಲಾರವಾಗಿತ್ತು, ಇದೀಗ ಇಲ್ಲಿನ ಜನರ ಬದುಕು ಕಷ್ಟಕ್ಕೆ ಸಿಲುಕಿದೆ ಎಂದರು.
ಕೆಸಿವ್ಯಾಲಿ ಕಾಮಗಾರಿ 2-3 ತಿಂಗಳಲ್ಲಿಆರಂಭ:
ಚಲ್ಲಘಟ್ಟ ತ್ಯಾಜ್ಯ ನೀರು ಕೋಲಾರಕ್ಕೆ ಹರಿಸುವ ಸಂಬಂಧದ ಕೆಸಿ ವ್ಯಾಲಿ ಕಾಮಗಾರಿಯ ಡಿಪಿಆರ್‌ ಸಿದ್ಧಗೊಂಡಿದೆ, ಮುಂದಿನ 2-3 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Trending videos

Back to Top