CONNECT WITH US  

ಗಣತಿಯಲ್ಲಿ ಹಿಂದೂ ಮಡಿವಾಳರ ನಮೂದಿಸಿ

ಗದಗ: ಸರಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ಏ.11 ರಿಂದ 30 ರವರೆಗೆ ನಡೆಯುವ ಜಾತಿ ಜನಗಣತಿಯಲ್ಲಿ ಹಿಂದೂ ಮಡಿವಾಳರ ಎಂದು ಮತ್ತು ಕುಲಕಸಬು ಬಟ್ಟೆ ಮಡಿ ಮಾಡುವುದು ಎಂದು ನಮೂದಿಸಬೇಕು ಎಂದು ಜಿಲ್ಲಾ ಮಡಿವಾಳರ ಸಂಘದಿಂದ ರಾಜ್ಯದಲ್ಲಿರುವ ಮಡಿವಾಳ ಸಮಾಜದ ಬಾಂಧವರಲ್ಲಿ ನಗರಸಭೆ ಸದಸ್ಯ ರಮೇಶ ಮಡಿವಾಳರ ವಿನಂತಿಸಿದ್ದಾರೆ.

ಮಡಿವಾಳರ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳು ಅತ್ಯಂತ ಕಡಿಮೆಯಾಗಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ ಕೆಲವೇ ಕೆಲವು ವರ್ಗಗಳ ಸಮಾಜದವರು ಹೆಚ್ಚಿನ ಸೌಲಭ್ಯಗಳನ್ನು ಪಡೆದು ಕೆಲವು ಸಮಾಜಗಳಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೌಲಭ್ಯಗಳು ಸಿಗುವಂತೆ ಷಡ್ಯಂತ್ರಗಳು ನಡೆಯುತ್ತಲೇ ಬಂದಿವೆ. ಪ್ರಸ್ತುತ ಜನಗಣತಿಯಿಂದ ಪ್ರತಿಯೊಂದು ಸಮಾಜದ ಅಂಕಿ ಅಂಶಗಳು ಮತ್ತು ಅವರ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳು ಮಾಹಿತಿ ದೊರೆಯುವುದರಿಂದ ಎಲ್ಲ ಸಮಾಜದವರಿಗೆ ಸಮಾನ ಅವಕಾಶಗಳು ದೊರೆಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸರಕಾರದ ಆದೇಶದ ಪ್ರಕಾರ ಜಾತಿಗಳ ಪಟ್ಟಿಯಲ್ಲಿ ಮಡಿವಾಳ ಜಾತಿಗೆ ಇರುವ ಇನ್ನಿತರ ಹೆಸರುಗಳು ಅಗಸ, ದೋಬ, ಮಡಿವಾಳರ, ಮಡಿವಾಳ, ಲಿಂಗವಂತ ಮಡಿವಾಳ, ಪರೀಟ, ಹಲವು ರೀತಿಯಾಗಿ ಬೇರೆ ಬೇರೆ ಹೆಸರುಗಳನ್ನು ಸೂಚಿಸಿರುವುದರಿಂದ ಸಿಗಬೇಕಾದ ಸೌಲಭ್ಯಗಳಿಂದ ನಾವು ವಂಚಿತರಾಗಿರುತ್ತೇವೆ. ಈ ಎಲ್ಲಾ ಕಾರಣಗಳಿಂದ ಮಡಿವಾಳರ ಸಮಾಜ ಬಾಂಧವರು ಜಾತಿ ಜನಗಣತಿಯಲ್ಲಿ ಹಿಂದೂ ಮಡಿವಾಳ ಎಂದು ನಮೂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Trending videos

Back to Top