CONNECT WITH US  

ಇಂಧನ ಅಭಾವ: ತುರ್ತು ಕ್ರಮಕ್ಕೆ ಆಗ್ರಹ

ಗದಗ: ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್‌ ಹಾಗೂ ಡಿಸೇಲ್‌ ಅಭಾವದಿಂದ
ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಜಿಲ್ಲಾಧಿಕಾರಿಗೆ ಮನವಿ
ಸಲ್ಲಿಸಿತು. 

ಅಸಮರ್ಪಕ ಪೂರೈಕೆಯಿಂದ ಪ್ರತಿ ಬಂಕ್‌ನಲ್ಲಿ ನೋಸ್ಟಾಕ್‌ ಎಂಬ ನಾಮಫಲಕಗಳು ಕಂಡು ಬರುತ್ತಿದ್ದು, ಇದರಿಂದ ಜನರು ಪರದಾಡುವಂತಾಗಿದೆ. ಜಿಲ್ಲಾದ್ಯಂತ ಪೆಟ್ರೋಲ್‌ ಮತ್ತು ಡಿಸೇಲ್‌  ಕೊರತೆಯಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಮನಗೌಡ ದಾನಪ್ಪಗೌಡ್ರ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನಕುಮಾರ ಮಾತನಾಡಿ, ಈಗಾಗಲೇ ಈ ಕುರಿತು ಚರ್ಚಿಸಲಾಗಿದ್ದು, ಆದಷ್ಟು ಬೇಗನೆ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷ ಬಾಬಣ್ಣ ಶಾಬಾದಿಮಠ, ಸದಸ್ಯರಾದ ಎಸ್‌.ಆರ್‌. ನಾಲತ್ವವಾಡಮಠ, ಬಸವರಾಜ ಬಂಗಾರಶೆಟ್ಟರ, ವಿ.ಎಚ್‌. ದೇಸಾಯಿಗೌಡ್ರ ಇದ್ದರು.

Trending videos

Back to Top