CONNECT WITH US  

ಗಾಧೀಜಿ ಸರಳ ಜೀವನ ಪಾಲಿಸಿ: ಚಂದ್ರಪ್ಪ

ಗುಂಡ್ಲುಪೇಟೆ: ಗಾಂಧೀಜಿ ಅವರ ಆದರ್ಶ, ಮೌಲ್ಯ, ಸರಳ ಜೀವನ ಪಾಲಿಸಿದರೆ ಮಾತ್ರ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಪುರಸಭಾಧ್ಯಕ್ಷ ಪಿ.ಚಂದ್ರಪ್ಪ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ದೇಶಕ್ಕೆ ಗಾಂಧೀಜಿ ಅವರು ಸ್ವಾತಂತ್ರ ತರಲು ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಸ್ವಾತಂತ್ರÂ ನಂತರ ಯಾವುದೇ ಅಧಿಕಾರವನ್ನೂ ಹೊಂದದೆ, ಇತರರಿಗೆ ಅವಕಾಶ ಮಾಡಿಕೊಟ್ಟ ಆದರ್ಶ ಪುರುಷರು. ಆದರೆ, ಜಾಗತೀಕರಣ, ಉದಾರೀಕರಣ ನೀತಿಯಿಂದ ವಿದೇಶಿ ಕಂಪನಿಗಳು ಹಿಂಬಾಗಿಲಿನಿಂದ ಪ್ರವೇಶಿಸಿದ್ದು, ದೇಶವು ಮತ್ತೂಮ್ಮೆ ದಾಸ್ಯಕ್ಕೊಳಗಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಅನ್ನಪೂರ್ಣ ಹಿಂದೂ ಧರ್ಮದ ಭಗವದ್ಗೀತೆಯ ವಾಚನ, ಶಿಕ್ಷಕ ಜಾನ್‌ ಅಮೃತ್‌ ಕ್ರೆ„ಸ್ತ ಧರ್ಮದ ಬಗ್ಗೆ ಹಾಗೂ ಶಿಕ್ಷಕ ಇರ್ಫಾನ್‌ ಇಸ್ಲಾಂ ಧರ್ಮದ ಉಕ್ತಿಗಳ ವಾಚನ ನಡೆಸಿ ಅವುಗಳ ಸಾರಾಂಶಗಳನ್ನು ವಿವರಿಸಿದರು. ತಹಶೀಲ್ದಾರ್‌ ಕೆ.ಸಿದ್ದು, ವೃತ್ತ ನಿರೀಕ್ಷಕ ಪ್ರಮೋದ್‌ಕುಮಾರ್‌, ಪಿಎಸ್‌ಐ ಬಿ.ಎನ್‌.ಸಂದೀಪ್‌ಕುಮಾರ್‌, ಬಿಇಒ ಸಿ.ಎನ್‌.ರಾಜು, ತಾಪಂ ಸದಸ್ಯೆ ಕೋಮಲಾ, ಶಿಶು ಅಭಿವೃದ್ಧಿ ಅಧಿಕಾರಿ ಕಮಲಾ ಬಸರ್ಗಿ, ಪಿಡಬ್ಲೂéಡಿ ಎಇಇ ಕೆ.ಎಸ್‌.ವಿಜಯಸಾರಥಿ, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರಬಾಬು, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ , ಬಿಇಒ ಸಿ.ಎನ್‌.ರಾಜು ಉಪಸ್ಥಿತರಿದ್ದರು.

 


Trending videos

Back to Top