CONNECT WITH US  

ಬ್ರಾಹ್ಮಣ ಸಮುದಾಯಕ್ಕೆ ಒಗ್ಗಟ್ಟು ಅತ್ಯಗತ್ಯ

ಚಾಮರಾಜನಗರ: ಬ್ರಾಹ್ಮಣ ಸಮುದಾಯದಲ್ಲಿ ಶಾಸ್ತ್ರ, ವೇದ, ಆಗಮ, ಉಪನಿಷತ್ತು ಎಲ್ಲವೂ ಇದೆ. ಎಲ್ಲದರ ಬಗ್ಗೆ ಜ್ಞಾನ ಹೊಂದಿದ್ದೇವೆ ಆದರೆ ಒಗ್ಗಟ್ಟಿನ ಕೊರತೆ ಕಾಡುತ್ತಿದೆ ಎಂದು ಜಿಲ್ಲಾ ಬ್ರಾಹ್ಮಣ ಪ್ರಥಮ ಸಮ್ಮೇಳನದ ಅಧ್ಯಕ್ಷ, ಉದ್ಯಮಿ ಎರ್ನಾಕುಲಂ ಕೆ.ಎನ್‌. ಸೂರ್ಯನಾರಾಯಣ ಹೇಳಿದರು.

ನಗರದ ನಂದಿಭವನದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಒಳ್ಳೆಯ ಚಿಂತನೆ ಮಾಡಲು ಪ್ರೇರೇಪಿಸಬೇಕು. ಜತೆಗೆ ಬ್ರಾಹ್ಮಣರು ಭೇದ ಭಾವ ಬದಿಗೊತ್ತಿ ತಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಬ್ರಾಹ್ಮಣರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದಿದ್ದಾರೆ. ಶೈಕ್ಷಣಿಕವಾಗಿ ಉನ್ನತ ಸ್ಥಾನಗಳಿಸಿದ್ದಾರೆ. ಇಂಥವರು ಸಮಾಜದಲ್ಲಿ ಅಶಕ್ತರು, ನೊಂದವರು, ಅಸಹಾಯಕರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡಿದರೆ, ನಮಗೆ ಮತ್ತಷ್ಟು ಗೌರವ ಸಿಗುತ್ತದೆ ಎಂದರು.

ಸಮ್ಮೇಳನ ಉದ್ಘಾಟಿಸಿದ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ವೆಂಕಟನಾರಾಯಣ ಮಾತನಾಡಿ, ಬ್ರಾಹ್ಮಣ ಸಂಘಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದಾರೆ. ಯಾವುದೇ ನೆರವಿಲ್ಲದೇ ತಮ್ಮ ಸ್ವಂತ ಪ್ರತಿಭೆಯಿಂದ ಮೇಲೆ ಬಂದಿದ್ದಾರೆ. ಆದರೆ ದೇಶದ 7 ರಾಜ್ಯಗಳಲ್ಲಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಅವರಿಗೆ ನಮ್ಮ ಸಂಘಗಳಿಂದ ಸಹಾಯಹಸ್ತ ಚಾಚಬೇಕು ಎಂದರು. 

ಅಖೀಲ ಕರ್ನಾಟಕ ಬ್ರಾಹ್ಮಣಮಹಾಸಭೆ ರಾಜ್ಯಸಂಘಟನಾಕಾರ್ಯದರ್ಶಿ ಎನ್‌.ಶ್ರೀಕಂಠಕುಮಾರ್‌ ಚಾಮರಾಜನಗರ ಜಿಲ್ಲಾ ಪ್ರೇಕ್ಷಣೀಯ ಸ್ಥಳಗಳು ಕುರಿತ ಕಿರುಪುಸ್ತಕ ಬಿಡುಗಡೆಮಾಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿ ಐಎನ್‌ಎ ರಾಮರಾವ್‌ ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಪಡೆದು ತವರಿಗೆ ಮರಳಿದ ಸಂತೇಮರಹಳ್ಳಿಯ ಸುರೇಶ್‌ ಅವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಲಾ 2500 ರೂ. ನಗದು, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಬ್ರಾಹ್ಮಣಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಮಾಜಿ ಅಧ್ಯಕ್ಷ ಡಾ.ಕೆ.ಪಿ.ಪುತ್ತೂರಾಯ, ಮೈಸೂರು ನಗರ ಮತ್ತು ಜಿಲ್ಲಾಧ್ಯಕ್ಷ ಡಿ.ಟಿ.ಜಿ.ಆರ್‌.ನಾಗರಾಜ್‌,

ಹಿರಿಯ ಉಪಾಧ್ಯಕ್ಷ ಆರ್‌.ಲಕ್ಷ್ಮಿಕಾಂತ್‌, ಉಪಾಧ್ಯಕ್ಷ ಕೆ.ಇ.ರಾಧಾಕೃಷ್ಣ, ರಾಜ್ಯಉಪಾಧ್ಯಕ್ಷ ಎಚ್‌.ವಿ.ರಾಜೀವ್‌, ಬ್ರಾಹ್ಮಿಮಹಿಳಾಸಂಘದ ನಂದಿನಿ, ಕೊಳ್ಳೇಗಾಲ ಘಟಕ ವಿಜೇತ, ಕಾರ್ಯದರ್ಶಿ ಸುರೇಶ್‌ ಎನ್‌.ಋಗ್ವೇದಿ, ಖಜಾಂಚಿ ಎಸ್‌.ಬಾಲಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಎಸ್‌.ಲಕ್ಷ್ಮಿನರಸಿಂಹ, ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top