CONNECT WITH US  

ಮರಳು ದಂಧೆ: 11 ಮಂದಿ ಬಂಧನ

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಕಾವೇರಿ ನದಿಯಲ್ಲಿ ಸೋಮವಾರ ಅಕ್ರಮ ಮರಳು ತೆಗೆಯುತ್ತಿದ್ದವರ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ 11 ಎತ್ತಿನಗಾಡಿ, 22 ಎತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗ್ರಾಮದ ಮಹದೇವಪ್ಪ, ಶಿವರಾಜು, ಮಹೇಶ್‌, ಪ್ರಭು, ಮಹದೇವ, ರಾಜೇಶ್‌, ದೊರೆಸ್ವಾಮಿ, ಮಹದೇವಸ್ವಾಮಿ, ಲಿಂಗಪ್ಪ, ಲಿಂಗರಾಜು, ಚಂದ್ರಶೇಖರ್‌ ಬಂಧಿತರು. ಇವರೆಲ್ಲರೂ ಕಾವೇರಿ ನದಿಯಿಂದ ಅಕ್ರಮ ಮರಳನ್ನು ಎತ್ತಿನ ಗಾಡಿಗಳ ಮೂಲಕ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಪೊಲೀಸರು ದಾಳಿ ನಡೆಸಿದರು. 

ನ್ಯಾಯಾಲಯ ಕಾವೇರಿ ನದಿಯಲ್ಲಿ ಮರಳು ಎತ್ತುವಳಿ ಮಾಡದಂತೆ ಆದೇಶ ನೀಡಿ ನದಿ ತೀರದಲ್ಲಿ ಸೆಕ್ಷೆನ್‌ 144 ಜಾರಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ  ಮರಳು ತೆಗೆಯದಂತೆ ಸೂಚನೆ ನೀಡಿದ್ದರೂ ಗ್ರಾಮಸ್ಥರು ಕಾನೂನು ಉಲ್ಲಂ ಸಿ ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಐ ವನರಾಜು ಪ್ರಕರಣ ದಾಖಲಿಸಿಕೊಂಡು ಎತ್ತಿನಗಾಡಿ, ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 


Trending videos

Back to Top