CONNECT WITH US  

ಮುಂಗಾರು ಹಂಗಾಮಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆ

ಚಾಮರಾಜನಗರ: ಜಿಲ್ಲೆಯಲ್ಲಿ 2015ರ ಮುಂಗಾರು ಹಂಗಾಮಿಗೆ ಸರ್ಕಾರ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಹೋಬಳಿ ಮಟ್ಟದಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಸಜ್ಜೆ, ಜೋಳ, ಸೂರ್ಯಕಾಂತಿ ಹಾಗೂ ಮಳೆ ಆಶ್ರಯದಲ್ಲಿ ಬೆಳೆಯುವ ಜೋಳ, ರಾಗಿ, ಮುಸುಕಿನ ಜೋಳ, ತೊಗರಿ, ಹೆಸರು, ಉದ್ದು, ಹುರುಳಿ, ಎಳ್ಳು, ಹರಳು, ಸೂರ್ಯಕಾಂತಿ ಮತ್ತು ನೆಲಗಡಲೆ (ಶೇಂಗಾ) ಬೆಳೆಯನ್ನು ವಿಮೆಗೆ ಒಳಪಡಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಬೆಳೆಯುವ ಮಳೆಯಾಶ್ರಿತ ಮುಸುಕಿನ ಜೋಳ, ಗುಂಡ್ಲುಪೇಟೆ ತಾಲೂಕಿನಲ್ಲಿ ಬೆಳೆಯುವ ಜೋಳ, ಸೂರ್ಯಕಾಂತಿ (ಮಳೆಯಾಶ್ರಿತ), ಕೊಳ್ಳೇಗಾಲ ತಾಲೂಕಿನಲ್ಲಿ ಮುಸುಕಿನ ಜೋಳ, ರಾಗಿ (ಮಳೆಯಾಶ್ರಿತ) ಹಾಗೂ ಯಳಂದೂರು ತಾಲೂಕಿನಲ್ಲಿ ಬೆಳೆಯಲಾಗುವ ಭತ್ತ (ನೀರಾವರಿ) ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಲಾಗಿದೆ.

ಈ ಯೋಜನೆಗೆ ಒಳಪಡಲು ವಿವಿಧ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಜೋಳ, ಉದ್ದು, ಹೆಸರು ಮತ್ತು ಎಳ್ಳು (ಮಳೆಯಾಶ್ರಿತ) ಬೆಳೆಗಳಿಗೆ ಸಂಬಂಧಿಸಿದಂತೆ ಜುಲೈ 31 ಕಡೆಯ ದಿನವಾಗಿದೆ.

ನೀರಾವರಿ ಆಶ್ರಿತ ಭತ್ತ, ಮುಸುಕಿನ ಜೋಳ, ಜೋಳ, ರಾಗಿ, ಸಜ್ಜೆ, ಸೂರ್ಯಕಾಂತಿ, ಮಳೆಯಾಶ್ರಿತ ಮುಸುಕಿನ ಜೋಳ, ರಾಗಿ, ತೊಗರಿ, ಹುರುಳಿ, ಹರಳು, ಸೂರ್ಯಕಾಂತಿ, ನೆಲಗಡಲೆ (ಶೇಂಗಾ) ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಆಗಸ್ಟ್‌ 31 ಅಂತಿಮ ದಿನವಾಗಿದೆ.

ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ, ನಾಟಿ ಮಾಡಿದ ನಂತರ 30 ದಿವಸದೊಳಗೆ ಅಥವಾ ನಿಗದಿಪಡಿಸಿದ ದಿನಾಂಕದೊಳಗೆ ಯಾವುದು ಮುಂಚೆಯೋ ಅವಧಿಯೊಳಗೆ ಘೋಷಣೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್‌ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆ ನೀಡಬೇಕು.

ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ಯಾವುದೇ ಯೋಜನೆಯ ಫ‌ಲಾನು¸‌ವಿ ರೈತರು (ಬೆಳೆ ಸಾಲ ಪಡೆಯದ ರೈತರು) ಅಂದಾಜು ಬೆಳೆ ಬಿತ್ತನೆ ಆಧಾರದ ಮೇಲೆ ಯೋಜನೆ ಅಡಿ ಪಾಲ್ಗೊಳ್ಳಬಹುದು. ಹೋಬಳಿ, ತಾಲೂಕು ವ್ಯಾಪ್ತಿಯ ಇಲಾಖೆ ಅಧಿಕಾರಿಯಿಂದ ಬೆಳೆ ವಿಮೆ ಯೋಜನೆಯ ಅರ್ಜಿಯನ್ನು ದೃಢೀಕರಿಸಿ ಜಮೀನು ಹೊಂದಿರುವ ದಾಖಲೆಗಾಗಿ ಪಹಣೆಯನ್ನು ನೀಡಿ ಬ್ಯಾಂಕಿನಲ್ಲಿ ವಿಮಾ ಕಂತು ಕಟ್ಟಿ ಅರ್ಜಿ ಸಲ್ಲಿಸಬೇಕು.

ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಬಿತ್ತನೆಯಾದ 30 ದಿವಸದೊಳಗೆ ಅಥವಾ ನೊಂದಾಯಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ (ಯಾವುದು ಮೊದಲೋ ಅದು) ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಿಕೊಳ್ಳಬೇಕು. ಅಲ್ಲದೆ ಅಂಥಹ ಸಂದ¸‌ìದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸಬೇಕು.

ಬೆಳೆ ವಿಮೆ ಯೋಜನೆಗೆ ಒಳಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈತರಿಗೆ ವಿಮಾ ಕಂತಿನಲ್ಲಿ ಶೇಕಡ 90ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ರಿಯಾಯಿತಿಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಶೇ 5ರ ಸಹಾಯ ಧನವೂ ಸಹ ಸೇರಿದೆ. ಸಣ್ಣ ಅತಿಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ. 10ರ ಸಹಾಯಧನ ಲಭ‌ವಿದೆ.

ಅಧಿಸೂಚಿತ ಹೋಬಳಿ, ಗ್ರಾಮ ಪಂಚಾಯಿತಿ, ಬೆಳೆಗಳ ಪಟ್ಟಿ, ವಿವಿಧ ಬೆಳೆಗಳಿಗೆ ನಿಗದಿಪಡಿಸಲಾಗಿರುವ ಇಂಡೆಮ್ನಿಟಿ ಮಟ್ಟ, ವಿಮಾ ಮೊತ್ತ ಹಾಗೂ ಕಂತಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್‌ ಕಲ್ಲೆಣ್ಣನವರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Trending videos

Back to Top