CONNECT WITH US  

"ಸುದ್ದಿ ಬೇಗ ಕಳುಹಿಸುವ ಭರದಲ್ಲಿ ಸುದ್ದಿ ಮಹತ್ವ ಮರೆದಿರಿ'

ಗುಂಡ್ಲುಪೇಟೆ: ಮಾಧ್ಯಮಗಳು ಸಮಾಜದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು, ವಸ್ತುನಿಷ್ಠ ವರದಿ ಮಾಡಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಸಲಹೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ, ಟಿಆರ್‌ಪಿಗಾಗಿ ಸುದ್ದಿ ಬೇಗ ಕಳುಹಿಸುವ ಭರದಲ್ಲಿ ಸುದ್ದಿಯ ಮಹತ್ವವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ಮೇಲೆ ಸಮಾಜದ ಎಲ್ಲಾ ವರ್ಗದ ಜನರ ಕಣ್ಣು ಇರುತ್ತದೆ. ಪ್ರತಿನಿತ್ಯ ದೇಶದಲ್ಲಿ ನಡೆಯುವ ಹಾಗೂ ಹೋಗುಗಳ ಚಿತ್ರಣವನ್ನು ನೀಡುವ ಪತ್ರಕರ್ತರು ನಿಖರತೆಗೆ ಹೆಚ್ಚು ಒತ್ತು ನೀಡಿದರೆ ಸಮಾಜಕ್ಕೆ ಒಳಿತು. ಹಿಂದಿನ ದಿನಗಳಲ್ಲಿ ಪತ್ರಿಕೆಗಳು ಹಲವು ಕ್ರಾಂತಿ ಮಾಡಿದ್ದನ್ನು ಸ್ಮರಿಸಿದ ಅವರು, ಪರ್ತಕರ್ತರು ಕೃಷ್ಣವಟ್ಟಂ ಅಂತಹ ಹಿರಿಯ ಪತ್ರಕರ್ತರ ಸರಳ-ಸಜ್ಜನಿಕೆ ಮತ್ತು ಆದರ್ಶ ಪ್ರಾಯ ಗುಣಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗ ಅನುಸರಿಸುವಂತೆ ಕಿವಿಮಾತು ಹೇಳಿದರು.

ಇದೇ ಸಂದ¸‌ìದಲ್ಲಿ ಸಂಘದ ಬೇಡಿಕೆಯಂತೆ ಪ್ರತಿಕಾಭವನವನ್ನು ನಿರ್ಮಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಸಿ.ಕೆ.ಮಹೇಂದ್ರ ಮಾತನಾಡಿ, ಗ್ರಾಮೀಣ ಪತ್ರಕರ್ತರಲ್ಲಿ ಹೆಚ್ಚು ಶ್ರಮ ಮತ್ತು ನಿಖರ ಸುದ್ದಿಜಾಲಾಡುವ ಶಕ್ತಿ ಇದ್ದರೂ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗದೆ ವೃತ್ತಿಯ ಅಭದ್ರತೆ ಕಾಡುತ್ತಿದೆ. ಪತ್ರಕರ್ತರಿಗೆ ಯಾವ ಬ್ಯಾಂಕೂ ಸಾಲ ನೀಡುವುದಿಲ್ಲ. ಏನಾದರೂ ಸಾಲ ನೀಡಿದ್ದರೆ ಅದೆಷ್ಟೊ ಪತ್ರಕರ್ತರರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದರು ಎಂದರು. ಇದರಿಂದ ವಿಚಲಿತರಾಗದೆ ಸುದ್ದಿಯ ಮಹತ್ವಕ್ಕೆ ಹೆಚ್ಚು ಒತ್ತು ನೀಡಿ ಮತ್ತು ಒಗ್ಗಟ್ಟಿನಿಂದ ಸಂಘಟಿತರಾಗುವಂತೆ ಹೇಳಿದರು.

ಪತ್ರಕರ್ತರ ಸಂಘದವರು ಮಧ್ಯಮ ಅಕಾಡೆಮಿಯ ಸಹಾಯದಿಂದ ಗ್ರಾಮೀಣ ಪತ್ರಕರ್ತರಿಗೆ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಬೇಕು. ಪ್ರಸ್ತುತ ದಿನಗಳಲ್ಲಿ ಜಗತ್ತಿನ ಯಾವ ಮೂಲೆಗಾದರೂ ಸುದ್ದಿಯನ್ನು ಕ್ಷಣಮಾತ್ರದಲ್ಲಿ ಕಳಿಸುವ ವ್ಯವಸ್ಥೆಯಿಂದ ಪತ್ರಿಕೋದ್ಯಮ ಬೆಳೆಯುತ್ತಿದೆ ಇಂದಿನ ತಂತ್ರಜಾnನವನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ಉತ್ತಮ ಗುಣಮಟ್ಟದ ಸುದ್ದಿ ನೀಡುವಂತೆ ಹೇಳಿದರು.

ಜಿಪಂ ಅಧ್ಯಕ್ಷೆ ದೇವಮ್ಮಣ್ಣಿ ಸುಬ್ಬಣ್ಣ, ತಾಪಂ ಅಧ್ಯಕ್ಷ ಎನ್‌.ಎಸ್‌.ನಾಗಮಲ್ಲಪ್ಪ, ಪುರಸಭೆ ಅಧ್ಯಕ್ಷ ಪಿ.ಚಂದ್ರಪ್ಪ, ಉಪಾಧ್ಯಕ್ಷ ಸುರೇಶ್‌ ಕಾರYಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಂ.ನಂದೀಶ್‌, ತಾಲೂಕು ಅಧ್ಯಕ್ಷ ಶಿವಕುಮಾರ್‌, ಉಪಾಧ್ಯಕ್ಷರಾದ ವೀರಭದ್ರಪ್ಪ, ದೇವಯ್ಯ, ಖಜಾಂಚಿ ಬೇಗೂರುನಾಗೇಶ ಇತರರಿದ್ದರು.
 

Trending videos

Back to Top