CONNECT WITH US  

​ಜೀವ ಜಲಕ್ಕಾಗಿ ರಕ್ತಕ್ರಾಂತಿ ನಡೆದೀತು!

ಚಿಂತಾಮಣಿ: ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಸರ್ಕಾರಗಳು ಶೀಘ್ರಗತಿಯಲ್ಲಿ ಜಾರಿಗೊಳಿಸದಿದ್ದರೆ ಜಿÇÉೆಯ ಶಾಸಕರು, ಸಂಸದರ ಮನೆಗಳ ಮುಂದೆ ಧರಣಿ ನಡೆಸಬೇಕೆಂದು ಅವಳಿ ಜಿÇÉೆಯ ಜನತೆಗೆ ಕರೆ ನೀಡಿದ ಹಿರಿಯ ಸ್ವಾತಂತ್ರÂ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ನೀರಾವರಿ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಅವಳಿ ಜಿÇÉೆಯಲ್ಲಿ ಜೀವ ಜಲಕ್ಕಾಗಿ ರಕ್ತಕ್ರಾಂತಿ ನಡೆಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಬಯಲು ಸೀಮೆಯ ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಜಿÇÉಾ ಕೇಂದ್ರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬೃಹತ್‌ ಪಾದಯಾತ್ರೆಗೆ ನಗರದ ಪ್ರವಾಸಿ ಮಂದಿರದ ಬಳಿ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಅವಳಿ ಜಿÇÉೆಯಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆ ಬೃಹದಕಾರವಾಗಿ ಬೆಳೆದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ದಶಕಗಳಿಂದಲೂ ಎರಡೂ ಜಿÇÉೆಗಳಲ್ಲಿ ಶಾಶ್ವತ ನೀರಾವರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಸಮಸ್ಯೆಯ ಗಂಭೀರತೆಯನ್ನು ಅರಿಯದೇ ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ತೀವ್ರಗೊಳ್ಳಲಿ: ಜಿÇÉೆಯಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಳ್ಳಬೇಕು. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟವನ್ನು ಪûಾತೀತವಾಗಿ ನಡೆಸಬೇಕೆಂದ ಅವರು, ಜಿÇÉೆಯಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ ಸಾಲುತ್ತಿಲ್ಲ. ಸಾಮೂಹಿಕವಾಗಿ ಪಕ್ಷಭೇದ ಮರೆತು ಎÇÉಾ ಜನಸಮುದಾಯುಗಳು ಒಂದೇ ವೇದಿಕೆಯಡಿ ಹೋರಾಟ ನಡೆಸಬೇಕು. ಇಲ್ಲದಿದ್ದರೆ ಸರ್ಕಾರಗಳು ಸಮಸ್ಯೆಯನ್ನು ಜೀವಂತವಾಗಿಡಲು ಹವಣಿಸುತ್ತವೆ. ಇದಕ್ಕೆ ಅವಕಾಶ ಕೊಡದೇ ನೀರಾವರಿ ಹೋರಾಟವನ್ನು ಜನಾಂದೋಲನವಾಗಿ ರೂಪಿಸಬೇಕು. ಇದಕ್ಕೆ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳ ಶಾಸಕರು, ಸಂಸದರು ಒಟ್ಟಾಗಿ ಹೋರಾಟಕ್ಕೆ ಇಳಿಯಬೇಕೆಂದರು.

ಪೈಪೋಟಿಗಿಳಿದು ಹೋರಾಟ ಮಾಡಬೇಡಿ: ಜಿÇÉೆಯ ನೀರಾವರಿ ಹೋರಾಟವನ್ನು ಯಾವುದೇ ಕಾರಣಕ್ಕೂ ಪೈಪೋಟಿಗೆ ಇಳಿದು ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾಡಿಕೊಳ್ಳಬಾರದೆಂದು ಜಿÇÉೆಯ ರಾಜಕೀಯ ಪಕ್ಷಗಳಿಗೆ ದೊರೆಸ್ವಾಮಿ ಕಿವಿಮಾತು ಹೇಳಿದರು.  

ಎತ್ತಿನಹೊಳೆ ತೋರಿಸಿ ಕೂರಬೇಡಿ: ಅವಳಿ ಜಿÇÉೆಯ ಜನರ ನೀರಿನ ಸಮಸ್ಯೆ ನೀಗಿಸಲು ನೀವು ಎತ್ತಿನಹೊಳೆ ಯೋಜನೆ ತೋರಿಸಿ ಸಮ್ನೆ ಕೂರಬೇಡಿ. ಅದರ ಸಾಧಕ ಭಾಧಕಗಳ ಬಗ್ಗೆ ಅರಿಯಿರಿ, ತಕ್ಷಣಕ್ಕೆ ನೀರು ಕೊಟ್ಟರೆ ಸಾಲದು. ನೀರಾವರಿ ಸಮಸ್ಯೆ ಬಗೆಹರಿಸಲು ಅಗತ್ಯ ಯೋಜನೆಗಳನ್ನು ಜಾರಿಗೊಳಿಸಬೇಕು, ಜಿÇÉೆಯ ಅಂತರ್ಜಲ ವೃದ್ಧಿಸಲು ಕೆರೆ, ಕುಂಟೆಗಳ ಅಭಿವೃದ್ಧಿಗೆ ಆದತೆ ನೀಡಬೇಕು. ಮಳೆ ನೀರಿನ ಸಂರಕ್ಷಣೆಗೆ ಜನರಲ್ಲಿ ಅರಿವು ಮೂಡಿಸಬೇಕು. ನೀರಾವರಿ ಸಮಸ್ಯೆಯನ್ನು ಇದೇ ರೀತಿ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಅವಳಿ ಜಿÇÉೆಯಲ್ಲಿ ಜೀವ ಜಲಕ್ಕಾಗಿ ರಕ್ತಕ್ರಾಂತಿ ನಡೆಯಬಹುದು ಎಂದು ಎಚ್‌.ಎಸ್‌.ದೊರೆಸ್ವಾಮಿ ಎಚ್ಚರಿಸಿದರು.

 ಕುಡಿಯುವ ನೀರು ಕೊಡಿ: ಸರ್ಕಾರಗಳಿಗೆ ಕನಿಷ್ಠ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ ದೊರೆಸ್ವಾಮಿ, ಅವಳಿ ಜಿÇÉೆಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಗಳು ಮಾನವೀಯ ನೆಲೆಯÇÉಾದರೂ ಕುಡಿಯುವ ನೀರನ್ನು ಒದಗಿಸಬೇಕು. ಈ ವಿಚಾರದಲ್ಲಿ ವಿಳಂಬ ಧೋರಣೆ ಸರಿಯಲ್ಲ. ಸರ್ಕಾರಗಳು ಜನರ ತಾಳ್ಮೆಯನ್ನು ಪರೀಕ್ಷಿಸಬಾರದು. ಜನ ತಿರುಗಿಬಿದ್ದರೆ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆರೆ, ಕುಂಟೆ ಅಭಿವೃದ್ಧಿಪಡಿಸಿ: ಜಿÇÉೆಯ ನೀರಾವರಿ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಮಳೆ ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಜಿÇÉೆಯ ಕೆರೆ, ಕುಂಟೆಗಳನ್ನು ಮೊದಲು ಅಭಿವೃದ್ಧಿಪಡಿಸಬೇಕೆಂದರು. 

 ಈ ಸಂದರ್ಭದಲ್ಲಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಪಾರ ಸಂಖ್ಯೆಯ ರೈತರು, ಕೂಲಿ ಕಾರ್ಮಿಕರು, ಶಾಶ್ವತ ನೀರಾವರಿ ಹೋರಾಟಗಾರರು, ಯುವ ಶಕ್ತಿ ಪದಾಧಿಕಾರಿಗಳು, ಮಹಿಳೆಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.


Trending videos

Back to Top