CONNECT WITH US  

ಬರಡು ಜಿಲ್ಲೆಗೆ ಹೈನುಗಾರಿಕೆ ವರದಾನ

ಚಿಂತಾಮಣಿ: ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳ ರೈತರ ಆರ್ಥಿಕ ಸ್ವಾವಲಂಬನೆಯಲ್ಲಿ ಹೈನುಗಾರಿಕೆ ಪ್ರಧಾನ ಪಾತ್ರ ವಹಿಸುತ್ತಿದೆ. ಜಿÇÉೆಯ ರೈತರು ಬರದ ನಡುವೆಯೇ ಹಾಲು ಉತ್ಪಾದನೆಯಲ್ಲಿರಾಜ್ಯದಲ್ಲಿಯೇ ಮಂಚೂಣಿಯಲ್ಲಿರುವುದು ಗಮರ್ನಾಹ ಸಂಗತಿ ಎಂದು ಜಿÇÉಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಲಕ್ಷಿ¾àದೇವನಕೋಟೆಯಲ್ಲಿ ಮಂಗಳವಾರ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಪಿಟಿಎಸ್‌ ಯೋಜನೆಯಡಿ ಹಮ್ಮಿಕೊಂಡಿದ್ದ
ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿನ ಶೇ.70 ರಷ್ಟು ಕುಟುಂಬಗಳು ಕೃಷಿ ಮೇಲೆ ಅವಲಂಬಿತವಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂಬುದನ್ನು ಅರಿತು ರೈತರು ಹೈನುಗಾರಿಕೆಯನ್ನು ಹೆಚ್ಚಾಗಿ ನಿರ್ವಹಿಸುತ್ತಿ¨ªಾರೆ. ಇಂದಿನ ಬಡ ಕೂಲಿ ಕಾರ್ಮಿಕರ ಜೀವನಮಟ್ಟ ಸುಧಾರಣೆಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಕ್ಷೀರ ಕ್ರಾಂತಿಯ ಹರಿಕಾರ ಕುರಿಯನ್‌ ಹೈನುಗಾರಿಕೆಯಲ್ಲಿ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಇಂದು ಅಸಂಖ್ಯಾತ ಬಡ ಕುಟುಂಬಗಳ ಆರ್ಥಿಕ ಮಟ್ಟ ಉತ್ತಮಗೊಂಡಿದ್ದು, ರೈತರ ಬದುಕಿನಲ್ಲಿ
ಬೆಳಕು ಕಂಡಿದೆ. ರೈತರು ಕಾಲಕಾಲಕ್ಕೆ ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರಗಳ ಮಿಶ್ರ ತಳಿಗಳನ್ನು ಸಾಕುವ ಮೂಲಕ ಹೆಚ್ಚಿನ ಹಾಲು ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.

ರೋಗದ ಬಗ್ಗೆ ಎಚ್ಚರಿಕೆ ಅಗತ್ಯ: ಇತ್ತೀಚೆಗೆ ಜಿÇÉೆಯಲ್ಲಿ ರೈತರ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಮತ್ತಿತರ ರೋಗಗಳು ಹರಡಿ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಇಂತಹ ಪರಿಸ್ಥಿತಿ ಮತ್ತೆ ಎಂದೂ ಬಾರದಂತೆ ರೈತರು ಮುನ್ನೆಚ್ಚರಿಕೆ ವಹಿಸಿ ಜಾನುವಾರುಗಳನ್ನು ರೋಗಮುಕ್ತವಾಗಿಸಬೇಕು.ಕೋಚಿಮುಲ್‌ ಈ ನಿಟ್ಟಿನಲ್ಲಿ ಜಾನುವಾರುಗಳಿಗೆವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನುನಡೆಸಬೇಕೆಂದರು.

ಅಜೋಲ ಬೆಳೆಯಿರಿ: ಜಿÇÉೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸತತ ಬರಗಾಲ ಆವರಿಸಿದ್ದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ.ಹಾಗಾಗಿ, ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಮೇವು ಬೆಳೆಯುವುದರ ಕಡೆಗೆ ಗಮನ ಹರಿಸಬೇಕು. ಜಾನುವಾರುಗಳಿಗೆ ಪೌಷ್ಟಿಕಾಂಶವುಳ್ಳ ಹಾಗೂ ಹಾಲಿನ ಪ್ರಮಾಣ ಹೆಚ್ಚಿಸುವ ಅಜೋಲ ಮೇವು ಬೆಳೆಯಲು ಆಸಕ್ತಿ ತೋರಬೇಕೆಂದರು.

ಹಾಲಿನ ದರ ಹೆಚ್ಚಿಸಿ: ಕೋಚಿಮುಲ್‌ ನಿರ್ದೇಶಕ ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್‌ ಮಾತನಾಡಿ, ಸರ್ಕಾರ ಕೆಎಂಎಫ್ ಸಲ್ಲಿಸಿರುವ ಹಾಲಿನ ದರದ ಪ್ರಸ್ತಾವನೆಯನ್ನು ಒಪ್ಪಿಕೊಂಡು ಕೂಡಲೇ ಹಾಲಿನ ದರ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಹಾಲು ಒಕ್ಕೂಟಗಳು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ಕೋಚಿಮುಲ್‌ ನಿರ್ದೇಶಕ ಊಲವಾಡಿ ಬಾಬು ಮಾತನಾಡಿ, ಹಾಲು ಉತ್ಪಾದಕರ ಹಿತ ಕಾಯುವಲ್ಲಿ ಕೆಎಂಎಫ್ ಬದ್ಧ ಎಂದರು.

ಬಹುಮಾನ ವಿತರಣೆ: ಪಿಟಿಎಸ್‌ ಯೋಜನೆಯ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿತೀರ್ಪುಗಾರರ ಗಮನ ಸೆಳೆದ ಕರುಗಳಿಗೆ 3 ವಿಭಾಗಳಲ್ಲಿತಲಾ 3 ಬಹುಮಾನಗಳನ್ನು ಕುರುಗಳ ಮಾಲಿಕರಿಗೆ ವಿತರಿಸಲಾಯಿತು. ಚಾಂಪಿಯನ್‌ ಪ್ರಶಸ್ತಿಯನ್ನು ರೈತ ಎಲ್‌.ಜಿ.ರಮೇಶ್‌ರ ಕರು ಪಡೆಯಿತು.ಸ್ಕೂಲ್‌ ಸುಬ್ಟಾರೆಡ್ಡಿ, ಡಿ.ಗೋಪಾಲರೆಡ್ಡಿ, ಸಂತೇಕಲ್ಲಹಳ್ಳಿ ಗೋವಿಂದಪ್ಪ, ಹನುಮಂತರೆಡ್ಡಿ, ಕೆ.ಅಶ್ವತ್ಥರೆಡ್ಡಿ, ಕೆ.ವಿ.ನಾಗರಾಜ್‌, ಬಂಕ್‌ ಮುನಿಯಪ್ಪ, ರಾಮಕೃಷ್ಣೇಗೌಡ, ಸುನಂದಮ್ಮ, ಡಾ.ಮಧುಸೂದನರೆಡ್ಡಿ, ನಾರಾಯಣಮ್ಮ, ಡಾ.ಮಾಧವ, ಎ.ವಿ.ಶಂಕರರೆಡ್ಡಿ, ಡಾ.ಎಲ್‌. ರಾಘವೇಂದ್ರ, ಡಾ.ರವಿಶಂಕರ್‌ ಹೆಗ್ಗಡೆ, ಡಾ.ಎ.ಬಿ.ಲೋಕೇಶ್‌, ಡಾ.ಎನ್‌.ನಾಗೇಶ್ವರರೆಡ್ಡಿ, ಡಾ.ಕೆ.ಸಿ.ಗುರ್ರಪ್ಪ, ಟಿ.ಎಂ.ಮಂಜುನಾಥ, ಕೆಂಪರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 250 ಕ್ಕೂಹೆಚ್ಚು ಮಿಶ್ರತಳಿ ಹೆಣ್ಣು ಕರುಗಳು ಭಾಗವಹಿಸಿದ್ದವು.

Trending videos

Back to Top