CONNECT WITH US  

ನಾಳೆ ಶಾಶ್ವತ ನೀರಿಗಾಗಿ ಜಾನುವಾರು ಸಮೇತ ಹೆದ್ದಾರಿ ಬಂದ್‌

ಚಿಂತಾಮಣಿ: ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಹಾಗು ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ 179 ಹಾಲು ಉತ್ಪಾದಕರ ಸಂಘಗಳ ಸದಸ್ಯರಿಂದ ತಮ್ಮ ಜಾನುವಾರುಗಳ ಸಮೇತ ನ.7ರಂದು ರಾಷ್ಟ್ರೀಯ ಹೆ¨ªಾರಿ-7 ರಲ್ಲಿ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಕೋಚಿಮುಲ್‌ ನಿದೇಶಕ ಕೆ.ವಿ.ನಾಗರಾಜ್‌ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರ್ಕ್‌ಟ್ನಲ್ಲಿರುವ ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿದೊದ್ಧೇಶ ಸಹಕಾರ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿದ ಈ ವಿಷಯ ತಿಳಿಸಿದರು.

ಕೆಇಬಿ ಕಛೇರಿಗೆ ಮುತ್ತಿಗೆ: ಎÇÉಾ ಹಾಲು ಉತ್ಪಾದಕ ಸಂಘಗಳು ಸದಸ್ಯರು ಒಟ್ಟಾಗಿ ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನ ಆವರಣದಲ್ಲಿ ಜಮಾಯಿಸಿ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕೆಇಬಿ ಇಲಾಖೆಗೆ ಮುತ್ತಿಗೆ ಹಾಕಿ ಕನಿಷ್ಠ ಬೆಳಿಗಿನ ಜಾವ 4 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿದ್ಯಾರ್ಥಿಗಳು ಓದಿಕೊಳ್ಳುಲು ಮತ್ತು ಹೈನುಗಾರಿಕೆಯ ದಿನನಿತ್ಯತ ಕೆಲಸಗಳು ಪೂರೈಸಲು ವಿದ್ಯುತ್‌ನ್ನು ನೀಡಲೇಬೇಕೆಂದು ಆಗ್ರಹಿಸಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದರು.

ರಾಷ್ಟ್ರೀಯ ಹೆ¨ªಾರಿ ತಡೆ: ಶಾಶ್ವತ ನೀರಾವರಿ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆಯನ್ನು ಮುಂದುವರೆಸಿವೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚದುಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯನ್ನು ಬೆಂಬಲಿಸಿ ನ.7 ರಂದು ಶನಿವಾರ ತಾಲೂಕಿನ 179 ಎಂಪಿಸಿಎಸ್‌ಗಳಿÉನ 8 ಸಾವಿರ ಮಂದಿ ಹಾಲು ಉತ್ಪಾ$ದಕರು ತಮ್ಮ ಜಾನುವಾರುಗಳ ಸಮೇತ ನಗರದಿಂದ ಮೆರವಣಿಗೆ ಮೂಲಕ ಚದುಪುರಕ್ಕೆ ಬಂದು ಧರಣಿ ನಡೆಸುತತೇವೆಂದು ಕೆ.ವಿ.ನಾಗರಾಜ್‌ ಎಚ್ಚರಿಸಿದರು.

ಹೆ¨ªಾರಿ ತಡೆ ವಾಪಸಿಲ್ಲ: ಧರಣಿ ಸ್ಥಳಕ್ಕೆ ಜಿÇÉಾ ಉಸ್ತುವಾರಿ ಸಚಿವರು ಬರುವವರೆಗೂ ನಾವು ಹೆ¨ªಾರಿ ಬಂದ್‌ನ್ನು ವಾಪಸ್ಸು ಪಡೆಯುವುದಿಲ್ಲ. ಜೊತೆಗೆ ವಾಹನಗಳ ಸಂಚರಿಸುವ ಹೆ¨ªಾರಿಯಲ್ಲಿನ ಎÇÉಾ ಸಂಪರ್ಕ ರಸ್ತೆಗಳಲ್ಲಿ ಜಾನುವಾರುಗಳನ್ನು ನಿಲ್ಲಿಸಿ ಅಂದು ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ನಗರದ ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿದೊದ್ಧೇಶ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಉಪಾಧ್ಯಕ್ಷ ಜಿ.ಬಿ.ನಾರಾಯಣಸ್ವಾಮಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್‌.ಪಾಪಣ್ಣ ಹಾಜರಿದ್ದರು. ಅಲ್ಲದೆ ಜಿÇÉೆಯ ವಿವಿಧ ತಾಲೂಕುಗಳ ಹಾಲು ಉತ್ಪಾ$ದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದರು.
 


Trending videos

Back to Top