CONNECT WITH US  

ಮಗನಿಗೆ ತಕ್ಕ ಅಮ್ಮ: ಸುಮಲತಾ

ರೂಪತಾರಾ

ಸುಮಲತಾ ಅವರು "ಭೂಪತಿ' ಚಿತ್ರದಲ್ಲಿ ದರ್ಶನ್‌ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಮತ್ತೂಂದಿಷ್ಟು ವರ್ಷಗಳ ಕಾಲ ಬಣ್ಣ ಹಚ್ಚಿರಲಿಲ್ಲ. ಆ ನಂತರ "ವಿರಾಟ್‌', "ಭಲೇ ಜೋಡಿ', "ಜೆಸ್ಸಿ', "ದೊಡ್ಮನೆ ಹುಡುಗ', "ಜಾಗ್ವಾರ್‌' ಮುಂತಾದ ಚಿತ್ರಗಳಲ್ಲಿ ಸತತವಾಗಿ ನಟಿಸುತ್ತಲೇ ಬಂದಿದ್ದಾರೆ. ಈಗ ಅವರು ಈ ವರ್ಷ ಇನ್ನಷ್ಟು ಬಿಝಿಯಾಗಿದ್ದಾರೆ. ಒಂದು ಕಡೆ ಮಗ ಅಭಿಷೇಕ್‌ನ ಮೊದಲ ಚಿತ್ರದ ತಯಾರಿಗಳಲ್ಲಿ ಭಾಗಿಯಾಗುತ್ತಲೇ, ಎರಡು ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಶೇಷವೆಂದರೆ, ಎರಡೂ ಚಿತ್ರಗಳು ಅವರ ಸುತ್ತಲೇ ಸುತ್ತುವುದು. ಅಷ್ಟೇ ಅಲ್ಲ, ಆ ಎರಡೂ ಚಿತ್ರಗಳ ಟೈಟಲ್‌ಗ‌ಳು ಅವರ ಪಾತ್ರಗಳನ್ನು ಬಿಂಬಿಸುತ್ತವೆ. ಒಂದು, ಶಶಾಂಕ್‌ ನಿರ್ದೇಶನದ "ತಾಯಿಗೆ ತಕ್ಕ ಮಗ'ವಾದರೆ, ಇನ್ನೊಂದು ಹರಿಪ್ರಿಯಾ ಅಭಿನಯದ 25ನೇ ಚಿತ್ರವಾದ "ಡಾಟರ್‌ ಆಫ್ ಪಾರ್ವತಮ್ಮ'. ಈ ಎರಡೂ ಹೆಸರುಗಳಲ್ಲಿ ಸುಮಲತಾ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇದ್ದಾರೆ ಎನ್ನುವುದು ವಿಶೇಷ. "ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅವರು ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, "ಡಾಟರ್‌ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಪಾರ್ವತಮ್ಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಈಗಾಗಲೇ ಎರಡೂ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನು ಅಂಬರೀಶ್‌ ಅವರು ಅಭಿನಯಿಸುತ್ತಿರುವ "ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲೂ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಈಗ ಆ ಪಾತ್ರವನ್ನು ಸುಹಾಸಿನಿ ಮಾಡುತ್ತಿದ್ದಾರೆ. ಮುಂಚೆ ಈ ಪಾತ್ರಕ್ಕೆ ಸುಹಾಸಿನಿ ಅವರನ್ನೇ ಕೇಳಲಾಗಿತ್ತು. ಅವರ ಡೇಟ್ಸ್‌ ಕ್ಲಾಶ್‌ ಆದ ಕಾರಣ, ನಂತರ ರಮ್ಯ ಕೃಷ್ಣ, ಸುಮಲತಾ, ಖುಷ್ಬೂ ಮುಂತಾದವರ ಹೆಸರುಗಳು ಕೇಳಿ ಬಂದಿತ್ತು.

ಆದರೆ, ಅಂತಿಮವಾಗಿ ಸುಹಾಸಿನಿ ಆ ಪಾತ್ರವನ್ನು ಮಾಡುತ್ತಿದ್ದಾರೆ. ಈ ಮೂಲಕ ಅಂಬರೀಶ್‌ ಮತ್ತು ಸುಹಾಸಿನಿ ಅವರನ್ನು ಪ್ರೇಮಿಗಳಾಗಿ ನೋಡುವ ಅವಕಾಶ, ಅಭಿಮಾನಿಗಳಿಗೆ ಮಿಸ್‌ ಆಗಿದೆ. ಈ ಮಧ್ಯೆ, ಅಂಬರೀಶ್‌ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್‌ರ ಮೊದಲ ಚಿತ್ರ "ಅಮರ್‌' ಈ ತಿಂಗಳು ಶುರುವಾಗುವ ಸಾಧ್ಯತೆ ಇದೆ. ಈ ಚಿತ್ರದಲ್ಲೂ ತಮ್ಮ ಮಗನಿಗೆ ಸಾಥ್‌ ಕೊಡುವುದಕ್ಕೆ ಸುಮಲತಾ ಅವರು ಸಹ ಬಣ್ಣ ಹಚ್ಚಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯದಲ್ಲೇ ಆ ಕುತೂಹಲಕ್ಕೆ ಉತ್ತರ ಸಿಗಲಿದೆ.

Trending videos

Back to Top