CONNECT WITH US  

ಅಶಿಸ್ತಿನ ಬದುಕು ಅಪಾಯಕಾರಿ: ಸುನೀತಾ

ಚಿತ್ರದುರ್ಗ: ಜೀವನದಲ್ಲಿ ಬದ್ಧತೆ, ಯಶಸ್ಸು ರೂಢಿಸಿಕೊಂಡು ಆದರ್ಶ ಜೀವನ ಮಾಡಿದರೆ ಯಶಸ್ಸು ಖಚಿತ ಎಂದು ಜಿಲ್ಲಾ ಗೈಡ್ಸ್‌ ಆಯುಕ್ತೆ ಸುನೀತಾ ಮಲ್ಲಿಕಾರ್ಜುನ್‌ ಹೇಳಿದರು. ನಗರದ ಡಾನ್‌ಬಾಸ್ಕೋ ಶಾಲೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಶಿಸ್ತಿನ ಬದುಕು ವಿನಾಶಕ್ಕೆ ಕೊಂಡೊಯ್ಯುತ್ತದೆ. ಶಿಸ್ತಿನ ಜೀವನ ಮನುಷ್ಯನನ್ನು ಸದಾ ಲವಲವಿಕೆಯಿಂದ ಇರಿಸಿ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಕಿರಿಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಕ್ಷಣ ಪಡೆದು ಸತ್ಪಜೆಗಳಾಗಬೇಕು ಎಂದು ಕರೆ ನೀಡಿದರು.

ಮಾನವೀಯ ಮೌಲ್ಯ ಮತ್ತು ದೇಶಪ್ರೇಮ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಸಂಸ್ಕಾರ ಬಿತ್ತುವ ಕೆಲಸ ಮಾಡುತ್ತಿದೆ. ದೀಕ್ಷೆ ಪಡೆದ ವಿದ್ಯಾರ್ಥಿಗಳು ಸಂಸ್ಥೆಯ ಎಲ್ಲಾ ರೀತಿಯ ತರಬೇತಿಗಳನ್ನು ಪಡೆದು ತಂದೆ-ತಾಯಿ,
ಗುರು-ಹಿರಿಯರು ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ಜಿಲ್ಲಾ ಸ್ಕೌಟ್ಸ್‌ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ, ಮಾನವ ಪರಾವಲಂಬಿ ಬದುಕು ಸಾಗಿಸುತ್ತ ಸೋಮಾರಿಯಾಗುತ್ತಿದ್ದಾನೆ. 

ಸ್ಕೌಟ್ಸ್‌ ಮತ್ತು ಗೈಡ್ಸ್‌ ಣ ಪಡೆದವರು ಸ್ವಾವಲಂಬಿ, ಶಿಸ್ತು, ಸಂಯಮ ಹಾಗೂ ಸ್ವಾಭಿಮಾನದ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಇಂತಹ ಶ್ರೇಷ್ಠ ಸಂಸ್ಥೆಯ ದೀಕ್ಷೆ ಪಡೆದ ವಿದ್ಯಾರ್ಥಿಗಳಾದ ನೀವು ನಿಜವಾಗಿಯೂ ಅದೃಷ್ಟಶಾಲಿಗಳು. ಮುಂದೆ ಹೆಚ್ಚಿನ ತರಬೇತಿ ಪಡೆದು ರಾಜ್ಯಪಾಲರು ಮತ್ತು ರಾಷ್ಟ್ರಪತಿ ಪದಕ ಪಡೆಯುವಂತಾಗಬೇಕು ಎಂದು ಆಶಿಸಿದರು. ಡಾನ್‌ಬಾಸ್ಕೋ ಶಾಲೆ ಪ್ರಾಂಶುಪಾಲ ಸಜ್ಜಿ ಜಾರ್ಜ್‌ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ. ದೇವರಾಜ್‌ಪ್ರಸಾದ್‌, ಹಿರಿಯ ನಾಯಕ ತರಬೇತುದಾರ ಡಿ. ಬಸವರಾಜ್‌ ಹಾಗೂ ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಇದ್ದರು. 140 ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಲಾಯಿತು.


Trending videos

Back to Top