CONNECT WITH US  

ಹಳಬರಿಗೆ ಸೋಲು, ಹೊಸಬರಿಗೆ ಮಣೆ

ಚಳ್ಳಕೆರೆ: ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಹೊಸಬರೇ ಹೆಚ್ಚು ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸಿದವರ ಪೈಕಿ ಮೂವರು ಮಾತ್ರ ಪುನರಾಯ್ಕೆಯಾಗಿದ್ದಾರೆ. ಇನ್ನುಳಿದ 13 ಜನರನ್ನು ಸಾರಾಸಗಟಾಗಿ ತಿರಸ್ಕರಿಸುವ ಮತದಾರರು, ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ.

ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದ ಜೆಡಿಎಸ್‌ನ ಸಿ. ಶ್ರೀನಿವಾಸ್‌, ವಿ.ವೈ. ಪ್ರಮೋದ್‌ ಎರಡನೇ ಬಾರಿಗೆ ಆಯ್ಕೆಯಾದರೆ, ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿ ಐದನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಹಿರಿಯ ಸದಸ್ಯ
ಪೊಲೀಸ್‌ ವೀರಣ್ಣ ಅವರು ಬಿ.ಟಿ. ರಮೇಶ್‌ ಗೌಡ ಎದುರು ಸೋಲಿನ ರುಚಿ ಕಂಡಿದ್ದಾರೆ. 

ಇನ್ನುಳಿದಂತೆ ಲಕ್ಷ್ಮೀದೇವಿ, ನಾಗವೇಣಮ್ಮ, ಜೆ.ಕೆ. ರವಿ, ಟಿ.ಜೆ. ವೆಂಕಟೇಶ್‌, ವಿ. ರಾಮು, ಎಂ. ಮಂಜುನಾಥ, ರವಿಕುಮಾರ್‌, ಪರಿಮಳಾ, ಟಿ. ವಿಜಯಕುಮಾರ್‌, ರೇಷ್ಮಾಭಾನು, ಮಹದೇವಮ್ಮ ಮತ್ತಿತರರು ಪರಾಭವಗೊಂಡಿದ್ದಾರೆ.

9, 26 ಮತ್ತು 27 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಹಾಲಿ ಸದಸ್ಯರಾದ ಸಿ. ಶ್ರೀನಿವಾಸ್‌, ವಿ.ವೈ. ಪ್ರಮೋದ್‌, ಬಿ.ಟಿ. ರಮೇಶ್‌ ಗೌಡ ಮಾತ್ರ ಪುನರಾಯ್ಕೆಯಾಗಿದ್ದಾರೆ. 1ನೇ ವಾರ್ಡನ ಸಾಕಮ್ಮ, 2ನೇ ವಾರ್ಡ್‌ನ ವೈ.ಪ್ರಕಾಶ್‌, 3ನೇ ವಾರ್ಡ್‌ನ ಆರ್‌. ರುದ್ರನಾಯಕ, 4ನೇ ವಾರ್ಡ್‌ನ ಕೆ.ಸಿ. ನಾಗರಾಜು, 5ನೇ ವಾರ್ಡನ ಟಿ. ಮಲ್ಲಿಕಾರ್ಜುನ, 6ನೇ ವಾರ್ಡ್‌ನ ಕವಿತಾ, 7ನೇ ವಾರ್ಡ್‌ನ ಟಿ. ಶಿವಕುಮಾರ್‌, 8ನೇ ವಾರ್ಡ್‌ನ ಸುಜಾತಾ, 10ನೇ ವಾರ್ಡನ ಸುಮಾ, 11 ವಾರ್ಡ್‌ನ ಜಯಣ್ಣ, 12ನೇ ವಾರ್ಡ್‌ನ ವಿಶುಕುಮಾರ್‌, 13ನೇ ವಾರ್ಡನ ಕವಿತಾ ನಾಯಕಿ, 14ನೇ ವಾರ್ಡ್‌ನ ಜಿ. ಗೋವಿಂದ, 15ನೇ ವಾರ್ಡ್‌ನ ಜಯಲಕ್ಷ್ಮೀ ಇದೇ ಮೊದಲ ಬಾರಿ ನಗರಸಭೆಗೆ ಪ್ರವೇಶ ಮಾಡಿದ್ದಾರೆ. 16ನೇ ವಾರ್ಡ್‌ನ ನಾಗಮಣಿ, 17ನೇ ವಾರ್ಡ್‌ನ ಸುಮಕ್ಕ, 18ನೇ ವಾರ್ಡ್‌ನ ಎಂ.ಜೆ. ರಾಘವೇಂದ್ರ, 19 ವಾರ್ಡ್‌ನ ಕವಿತಾ, 20ನೇ ವಾರ್ಡ್‌ನ ನಿರ್ಮಲ, 21 ವಾರ್ಡ್‌ನ ಎಂ. ಸಾವಿತ್ರಿ, 22ನೇ ವಾರ್ಡ್‌ನ ತಿಪ್ಪಮ್ಮ, 23ನೇ ವಾರ್ಡ್‌ನ ವಿರೂಪಾಕ್ಷ, 24ನೇ ವಾರ್ಡ್‌ನ ಆರ್‌. ಮಂಜುಳಾ, 25ನೇ ವಾರ್ಡ್‌ನ ಚಳ್ಳಕೇರಪ್ಪ, 28ನೇ ವಾರ್ಡ್‌ನ ಕೆ. ವೀರಭದ್ರಯ್ಯ, 29ನೇ ವಾರ್ಡನ ಎಚ್‌. ಪ್ರಶಾಂತ್‌ಕುಮಾರ್‌, 30 ವಾರ್ಡ್‌ನ ಪಾಲಮ್ಮ, ಮತ್ತು 31ನೇ ವಾರ್ಡ್‌ ಜೈತುನಬಿ ಮೊದಲ ಬಾರಿ ಸದಸ್ಯರಾದ ಖುಷಿಯಲ್ಲಿದ್ದಾರೆ.

ನಾನು ಗುಜರಿ ಅಂಗಡಿ ನಡೆಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಇದ್ದಿರಲಿಲ್ಲ. ಆದರೆ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನ ಇದ್ದಾಗ ನನಗೆ ಕಾಂಗ್ರೆಸ್‌ ಪಕ್ಷ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತು. ವಾರ್ಡ್‌ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
 ಜೈತುನಬಿ, 31ನೇ ವಾರ್ಡ್‌ ಸದಸ್ಯೆ.

„ಕೆ.ಎಸ್‌. ರಾಘವೇಂದ್ರ


Trending videos

Back to Top