CONNECT WITH US  

eclipse online: ಅಪರೂಪದ ಬ್ಲಡ್ ಮೂನ್ ಕೌತುಕದ ವಿಡಿಯೋ ನೋಡಿ

ನ್ಯೂಯಾರ್ಕ್: ಭಾನುವಾರ ರಾತ್ರಿ ಅಮೇರಿಕಾ, ಯೂರೋಪ್, ಆಫ್ರಿಕಾದ ನಭೋಮಂಡಲದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಬ್ಲಡ್ ಮೂನ್ ಕೌತುಕ ಗೋಚರಿಸಿತ್ತು. ಖಗ್ರಾಸ ಚಂದ್ರಗ್ರಹಣದ ಜೊತೆಗಿನ ಅಪರೂಪದ ಈ ಬ್ಲಡ್ ಮೂನ್ ಕೌತುಕ ಭಾರತದಲ್ಲಿ ಗೋಚರಿಸಿಲ್ಲವಾಗಿತ್ತು. ಆದರೆ ನೀವು ನಿರಾಶರಾಗಬೇಕಿಲ್ಲ, ನಿನ್ನೆ ಆಕಾಶದಲ್ಲಿ ನಡೆದ ಬ್ಲಡ್ ಮೂನ್ ಕೌತುಕವನ್ನು ಯೂಟ್ಯೂಬ್ ನಲ್ಲಿ (ಕೆಲ್ಲೈ ವಿಲಿಯಮ್ಸನ್ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ) ನೋಡಿ ಕಣ್ತುಂಬಿಕೊಳ್ಳಬಹುದು.

ಭಾನುವಾರ ರಾತ್ರಿ 8.11ನಿಮಿಷಕ್ಕೆ ನಿಧಾನಕ್ಕೆ ಸೂಪರ್ ಮೂನ್ ಆರಂಭವಾಗಿತ್ತು. ಸುಮಾರು 9ಗಂಟೆ 7ನಿಮಿಷಕ್ಕೆ ಚಂದ್ರಗ್ರಹಣದ ಶುರುವಾಗಿತ್ತು. ಬಳಿಕ 10ಗಂಟೆ 11 ನಿಮಿಷಕ್ಕೆ ಖಗ್ರಾಸ ಚಂದ್ರಗ್ರಹಣ ಆರಂಭವಾಗಿತ್ತು ಎಂದು ನಾಸಾ ತಿಳಿಸಿದೆ.

1982ರಲ್ಲಿ ರಕ್ತಚಂದಿರನಾಗಿ ಕಾಣಿಸಿಕೊಂಡಿದ್ದ, ಆ ನಂತರ ಈಗ 2015ರಲ್ಲಿ ಬ್ಲಡ್ ಮೂನ್ ಪ್ರಕಾಶಮಾನವಾಗಿ ಕಾಣಿಸಲಿದೆ. ಇನ್ನು ಈ ಅವಕಾಶಕ್ಕೆ 2033ರವರೆಗೆ ಕಾಯಬೇಕು!

Video credit: Kelley Williamson/YouTube

Trending videos

Back to Top