CONNECT WITH US  

​ಚೀನದಲ್ಲಿ ನಿತ್ಯ 10000 ಸ್ಟಾರ್ಟ್‌ಅಪ್‌ಗಳ ಆರಂಭ!

ಬೀಜಿಂಗ್‌: ಕೆಲ ವರ್ಷಗಳ ಹಿಂದಷ್ಟೇ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೀನಾದಲ್ಲಿ ಪರಿಸ್ಥಿತಿ ಇದೀಗ ಪೂರ್ಣ ಉಲ್ಟಾ. ಅಲ್ಲಿ ಆರ್ಥಿಕತೆ ಕುಸಿದು ಹೋಗಿದ್ದು, ಅದನ್ನು ಸರಿಪಡಿಸಲು ಸರ್ಕಾರ ಇನ್ನಿಲ್ಲದ ಹರಸಾಹಸಗಳನ್ನೆಲ್ಲಾ ಮಾಡುತ್ತಿದೆ.

ಚೀನಾ ಸರ್ಕಾರದ ಇಂಥ ಹೊಸ ಸಾಹಸಗಳ ಪೈಕಿ ವಿನೂತನವಾದುದೆಂದರೆ ನಿತ್ಯ 10000 ಸ್ಟಾರ್ಟ್‌ಅಪ್‌ (ವಿನೂತನ ಕಲ್ಪನೆಯ ಉದ್ಯಮ)ಗಳ ಆರಂಭ. ಹೌದು  135 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಉದ್ಯೋಗ ಸೃಷ್ಟಿ ಬಹುದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಜೊತೆಗೆ ಜಾಗತಿಕ ಆರ್ಥಿಕ ಕುಸಿತದಿಂದ ರಫ್ತು ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಸಣ್ಣ ಸಣ್ಣ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಉದ್ಯೋಗ ನೀಡುವ ಮತ್ತು ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ನಿತ್ಯ  10000 ಸ್ಟಾರ್ಟ್‌ಅಪ್‌ ಯೋಜನೆಯೊಂದಕ್ಕೆ  ಚಾಲನೆ ನೀಡಲಾಗಿದೆ. ಕಳೆದ ಕೆಲ ವಾರಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಇಂಥ ಉದ್ಯಮಗಳನ್ನು ಸ್ಥಾಪಿಸಲಾಗಿದೆ.

Trending videos

Back to Top