CONNECT WITH US  

ರಷ್ಯಾ ವಿಮಾನ ಪತನಕ್ಕೆ ಬಾಂಬ್‌ ಸ್ಫೋಟ ಕಾರಣ?

ಮಾಸ್ಕೋ: ಈಜಿಪ್ಟ್ ನ ಸಿನಾಯ್‌ ಪರ್ವತ ಪ್ರದೇಶದಲ್ಲಿ ಶನಿವಾರ ರಷ್ಯಾದ ನಾಗರಿಕ ವಿಮಾನ ಪತನಗೊಂಡ ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ. 224 ಮಂದಿ ಇದ್ದ ಈ ವಿಮಾನವನ್ನು ಹೊಡೆದುರುಳಿಸಿದ್ದು ತಾನೇ ಎಂಬ ಐಸಿಸ್‌ ಉಗ್ರರ ವಾದವನ್ನು ಈಜಿಪ್ಟ್ ನಿರಾಕರಿಸಿದ ಬೆನ್ನಲ್ಲೇ, ವಿಮಾನದೊಳಗೆ ಬಾಂಬ್‌ ಇಟ್ಟು ಸ್ಫೋಟಿಸಿರುವುದರಿಂದ ಈ ದುರಂತ ಸಂಭವಿಸಿರಬಹುದು ಎಂದು ಭಯೋತ್ಪಾದನೆ ಹಾಗೂ ವೈಮಾನಿಕ ಕ್ಷೇತ್ರದ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. 

ವಿಮಾನದ ಹೊರಭಾಗದ ಕವಚದ ಹೊದಿಕೆ ಒಳಭಾಗದಿಂದ ಹೊರಭಾಗಕ್ಕೆ ಚಾಚಿಕೊಂಡಿರುವುದನ್ನು ಅವರು ತಮ್ಮ ವಾದಕ್ಕೆ ಸಾಕ್ಷ್ಯವಾಗಿ ನೀಡಿದ್ದಾರೆ. ಈ ನಡುವೆ, ವಿಮಾನ ಪತನಕ್ಕೆ ತಾಂತ್ರಿಕ ವೈಫ‌ಲ್ಯವೇನು ಕಾರಣವಲ್ಲ. ವಿಮಾನ ಆಗಸದಲ್ಲೇ ಮುರಿದು ಬೀಳುತ್ತಿರುವುದನ್ನು ಗಮನಿಸಿದರೆ ಇದಕ್ಕೆ ಬಾಹ್ಯ ಕಾರಣಗಳು ಇರಬಹುದು ಎಂದು ದುರಂತಕ್ಕೀಡಾದ ವಿಮಾನದ ಮಾಲೀಕತ್ವ ಹೊಂದಿದ್ದ ಕೊಗಾಲಿಮೇವಿಯಾ ವಿಮಾನ ಕಂಪನಿ  ನಿರ್ದೇಶಕ  ಸ್ಮಿರೊ°ವ್‌ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

Trending videos

Back to Top