CONNECT WITH US  

ಷರೀಫ್, ಪುತ್ರಿ ಮತ್ತು ಅಳಿಯನಿಗೆ ಪೆರೋಲ್‌: ಜಿಯೋ ಟಿವಿ

ಲಾಹೋರ್‌ : ಲಂಡನ್‌ನಲ್ಲಿ ಗಂಟಲು ಕ್ಯಾನ್ಸರ್‌ ನಿಂದ ನಿಧನ ಹೊಂದಿರುವ ಬೇಗಂ ಕುಲ್‌ಸೂಮ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಲಲು ಪ್ರಕೃತ  ಜೈಲಿನಲ್ಲಿರುವ ಆಕೆಯ ಪತಿ, ಮಾಜಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್, ಅವರ ಪುತ್ರಿ ಮರ್ಯಾಮ್‌ ಮತ್ತು ಅಳಿಯ ಕ್ಯಾಪ್ಟನ್‌ (ನಿವೃತ್ತ) ಮುಹಮ್ಮದ್‌ ಸಫ್ದರ್‌ ಅವರಿಗೆ ಪೆರೋಲ್‌ ಮಂಜೂರಾಗಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ದಿವಂಗತ ಕುಲ್‌ಸೂಮ್‌ ಅವರ ಅಂತ್ಯಕ್ರಿಯೆ ಪ್ರಾರ್ಥನೆಯಿಂದ ತೊಡಗಿ ದಫ‌ನದ ವರೆಗಿನ ಪ್ರಕ್ರಿಯೆಗಳು ಮುಗಿಯುವ ವರೆಗಿನ ಅವಧಿಗೆ ಮೂವರಿಗೂ ಪೆರೋಲ್‌ ಸಿಗಲಿದೆ ಎಂದು ಪಾಕ್‌ ಒಳಾಡಳಿತ ಸಚಿವರನ್ನು ಉಲ್ಲೇಖೀಸಿ ಜಿಯೋ ಟಿವಿ ವರದಿ ಮಾಡಿದೆ. 

ಪೆರೋಲ್‌ ಪಡೆಯುವುದಕ್ಕಾಗಿ ಮೊದಲು ಸಂಬಂಧಿತರಿಂದ ಅರ್ಜಿ ಸಲ್ಲಿಕೆಯಾಗಬೇಕಾಗಿದೆ ಎಂದು ವರದಿ ಹೇಳಿದೆ. 

Trending videos

Back to Top