CONNECT WITH US  

ಅಮೆರಿಕದಲ್ಲಿ ಬೆಂಗ್ಳೂರು ಬಾಲಕಿಯ ಶೈಕ್ಷಣಿಕ ಸಾಹಸ!

ವಾಷಿಂಗ್ಟನ್‌: ಅಮೆರಿಕದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಪ್ರತಿಷ್ಠಿತ "ಐವಿ ಲೀಗ್‌' ಎನಿಸಿಕೊಂಡ 8 ವಿಶ್ವವಿದ್ಯಾಲಯಗಳ ಪೈಕಿ ಯಾವುದಾದರೂ ಒಂದರಲ್ಲಿ ಪ್ರವೇಶ ಪಡೆಯುವುದು ವಿದೇಶ ವ್ಯಾಸಂಗ ಬಯಸುವ ವಿದ್ಯಾರ್ಥಿಗಳ ಜೀವನದ ಗುರಿಗಳ ಪೈಕಿ ಒಂದು.ಆದರೆ, ಬೆಂಗಳೂರು ಮೂಲದ ಬಾಲಕಿ ಪೂಜಾ ಚಂದ್ರಶೇಖರ್‌,ಐವಿ ಲೀಗ್‌ನ ಎಲ್ಲ 8 ವಿವಿಗಳಲ್ಲೂ ಪ್ರವೇಶಕ್ಕೆ ಅರ್ಹತೆ ಪಡೆದು ಅಚ್ಚರಿಯ ಸಾಧನೆ ಮಾಡಿದ್ದಾಳೆ.

ಈಗ ಥಾಮಸ್‌ ಜೆಫ‌ರ್‌ ಸನ್‌ ಹೈಸ್ಕೂಲ್‌ ವಿದ್ಯಾರ್ಥಿನಿ ಆಗಿರುವ ಪೂಜಾ, ಉನ್ನತ ವ್ಯಾಸಂಗಕ್ಕಾಗಿ "ಐ ವಿ ಲೀಗ್‌'ಗೆ ಸೇರಿದ 8 ವಿವಿಗಳಿಗೆ ಅರ್ಜಿ ಹಾಕಿದ್ದಳು. ಈ ಪೈಕಿ ಒಂದರಲ್ಲಾದರೂ ಸೀಟು ಗಿಟ್ಟಿಸಿಕೊಳ್ಳುವುದು ಆಕೆಯ ಆಶಯವಾಗಿತ್ತು. ಆದರೆ, ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪರಿಣಾಮ ಐವಿ ಲೀಗ್‌ಗೆ ಸೇರಿದ ಎಲ್ಲ 8 ವಿವಿಗಳಲ್ಲೂ ಆಕೆಗೆ ಪ್ರವೇಶದ ಸಿಕ್ಕಿದೆ. ಅಷ್ಟೇ ಅಲ್ಲ, ಸ್ಟಾನ್‌ಫ‌ರ್ಡ್‌, ಎಂಐಟಿ, ಡ್ನೂಕ್‌ ಸೇರಿದಂತೆ "ಐವಿ ಲೀಗ್‌' ಹೊರತಾದ ಇತರ 6 ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಲ್ಲೂ ಆಕೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ. ಈ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿರುವ 14 ವಿವಿಗಳಲ್ಲಿ ಪೂಜಾ ಅರ್ಹತೆ ಗಿಟ್ಟಿಸಿಕೊಂಡು ಭಾರೀ ಸಾಧನೆ ಮಾಡಿದ್ದಾಳೆ.

ಈಗಿನ್ನೂ 17 ವರ್ಷದ ಪೂಜಾ, ಕೆಲ ಸಮಯದ ಹಿಂದೆ ಮೊಬೈಲ್‌ ಅಪ್ಲಿಕೇಷನ್‌ ಒಂದನ್ನು ಅಭಿವೃದಿಟಛಿಪಡಿಸಿದ್ದು, ಇದರ ಮೂಲಕ, ಜನರು ಮಾತನಾಡುವ ರೀತಿಯ ಮೂಲಕವೇ ಅವರು ಪಾರ್ಕಿನ್‌ಸನ್‌ ರೋಗ ದಿಂದ ಬಳಲುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಶೇ.96ರಷ್ಟು ಕರಾರುವಾಕಾಗಿ ಪತ್ತೆ ಹಚ್ಚಬಹುದಾಗಿದೆ.

ಇನ್ನು ಬಾಲಕಿಯರು ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉನ್ನತ ಅಧ್ಯಯನಕ್ಕೆ ಮುಂದಡಿ ಇಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೂಜಾ, ಎನ್‌ಜಿಒ ಒಂದನ್ನು ಕೂಡಾ ಸ್ಥಾಪಿಸಿದ್ದಾಳೆ.

ಏನಿದು ಸಾಧನೆ? 
ಪೂಜಾ ಪೋಷಕರು ಬೆಂಗಳೂರು ಮೂಲದವರು. ಉದ್ಯೋಗ ನಿಮಿತ್ತ ಅಮೆರಿಕದಲ್ಲಿ ನೆಲೆಸಿದ್ದಾರೆ. ಸದ್ಯ ಹೈಸ್ಕೂಲ್‌ ವಿದ್ಯಾರ್ಥಿನಿಯಾಗಿರುವ ಪೂಜಾ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ 8 ಪ್ರತಿಷ್ಠಿತ "ಐವಿ ಲೀಗ್‌' ವಿಶ್ವವಿದ್ಯಾಲಯಗಳು ಸೇರಿ 14 ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಳು.ಎಲ್ಲಾ ಪರೀಕ್ಷೆಗಳಲ್ಲೂ ಪಾಸಾಗಿ ಅದ್ಭುತ ಶೈಕ್ಷಣಿಕ ಪ್ರತಿಭೆತೋರಿದ್ದಾಳೆ.

Trending videos

Back to Top