CONNECT WITH US  

ಬ್ರಿಟನ್‌ ರಾಜಕುಮಾರಿ ಕೇಟ್‌ಗೆ ಹೆಣ್ಣುಮಗು

ಲಂಡನ್‌: ಬ್ರಿಟನ್‌ ಯುವರಾಜ ವಿಲಿಯಂ ಅವರ ಪತ್ನಿ ಕೇಟ್‌ ಮಿಡ್ಲಟನ್‌ ಅವರು ಲಂಡನ್‌ನ ಸೇಂಟ್‌ ಮೇರಿ ಆಸ್ಪತ್ರೆಯಲ್ಲಿ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಳಗ್ಗೆ 8.34ಕ್ಕೆ ಯುವರಾಣಿ ಕೇಟ್‌ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಅರಮನೆ ಪ್ರಕಟಿಸಿದೆ.

2011ರಲ್ಲಿ ಯುವರಾಜ ವಿಲಿಯಂ ಅವರ ಕೈ ಹಿಡಿದಿದ್ದ ಕೇಟ್‌ ಇದೇ ಆಸ್ಪತ್ರೆಯಲ್ಲಿ 2013ರ ಜುಲೈನಲ್ಲಿ ಗಂಡು ಮಗುವಿಗೆ (ರಾಜಕುಮಾರ ಜಾರ್ಜ್‌) ಜನ್ಮ ನೀಡಿದ್ದರು.

Trending videos

Back to Top