CONNECT WITH US  

ಕೇಟ್‌ ಮಗು ಪಡೆದಿದ್ದು ಬಾಡಿಗೆ ತಾಯಿಯಿಂದ?

ಲಂಡನ್‌: ಬ್ರಿಟನ್‌ ರಾಜಕುವರಿ ಕೇಟ್‌ ಮಿಡ್ಲ್ಟನ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ವಿಶ್ವದ್ಯಂತ ಸುದ್ದಿಯಾಯಿತು. ಇಡೀ ಲಂಡನ್‌ ನಗರ ರಾಜಕುಮಾರಿಯನ್ನು ಅದ್ಧೂರಿಯಾಗಿ ಸ್ವಾಗತಿಸಿತು. ಆದರೆ ಮಗುವಿನ ಹುಟ್ಟಿನ ಬಗ್ಗೆ ರಷ್ಯಾದಲ್ಲೀಗ ಹೊಸ ಚರ್ಚೆ ಶುರುವಾಗಿದೆ.

"ಮಗುವಿಗೆ ಜನ್ಮ ನೀಡಿದ ತಕ್ಷಣ ಯಾವ ತಾಯಿ, ಮಗುವನ್ನೂ ಆಸ್ಪತ್ರೆಯಿಂದ ಏಕಾಏಕಿ ಬಿಡುಗಡೆ ಮಾಡುವುದಿಲ್ಲ. ಅದೂ ಅಲ್ಲದೇ ಕೇಟ್‌ ಆಗಷ್ಟೇ ಹೆರಿಗೆಯಾದ ಮಹಿಳೆಯಂತೆ ಕಾಣದೇ ಆರೋಗ್ಯವಂತ ಸ್ತ್ರೀಯಂತೆ ಕಾಣುತ್ತಾಳೆ. ಬಹುಮಟ್ಟಿಗೆ ಇದು ಬಾಡಿಗೆ ತಾಯಿಯಿಂದ ಪಡೆದ ಮಗು. ಕೇಟ್‌ ನಕಲಿ ಹೊಟ್ಟೆ ಧರಿಸಿದ್ದಳು' ಎಂದು ರಷ್ಯನ್ನರನ್ನು ಉಲ್ಲೇಖೀಸಿ ಪತ್ರಿಕೆ ಹೇಳಿದೆ. ಇನ್ನು ಕೆಲವರು "ಮಗು ಜನಿಸಿ ಬಹಳ ದಿನಗಳಾಗಿವೆ, ಆದರೆ ಕೇಟ್‌ ದಂಪತಿ ಈಗ ಬಹಿರಂಗ ಪಡಿಸಿದ್ದಾರೆ' ಎಂದು ಹೇಳುತ್ತಿದ್ದಾರೆ.

777 ಕೋಟಿ ರೂ. ವೃದ್ಧಿ: ಮಗುವಿನಿಂದಾಗಿ ಬ್ರಿಟನ್‌ ಆರ್ಥಿಕತೆಗೆ 777 ಕೋಟಿ ಹಣ ಹರಿದು ಬರುವುದು ಎಂದು ಅಂದಾಜಿಸಲಾಗಿದೆ. ಮಗುವಿನ ಚಿತ್ರವಿರುವ ಮಗ್‌, ತಟ್ಟೆಗಳು, ಟೀ-ಶರ್ಟ್‌ಗಳಿಗೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ. ಅಲ್ಲದೇ ಮಗುವಿನ ಉಡುಗೆಯನ್ನೇ ಹೋಲುವ ಉಡುಗೆಗಳು, ಟೋಪಿಗಳು, ಕೈಗವಸುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಇದರಿಂದ ಬ್ರಿಟನ್‌ ಆರ್ಥಿಕತೆಗೆ ಭಾರಿ ಹಣ ಹರಿದು ಬರಲಿದೆ.

ಡಯಾನಾ ಹೆಸರು!
ಇತ್ತೀಚೆಗಷ್ಟೇ ಬ್ರಿಟನ್‌ ರಾಜಕುವರ ವಿಲಿಯಂ ಮತ್ತು ರಾಜಕುವರಿ ಕೇಟ್‌ಗೆ ಜನಿಸಿದ ಹೆಣ್ಣು ಮಗುವಿಗೆ ಚಾರೊÉಟ್‌ ಎಲಿಜಬೆತ್‌ ಡಯಾನಾ ಎಂದು ಹೆಸರಿಡಲಾಗಿದೆ. ಅಜ್ಜಿ ಡಯಾನಾ ಮತ್ತು ಮುತ್ತಜ್ಜಿ ಎಲಿಜಬೆತ್‌ ಹೆಸರುಗಳನ್ನು ಮಿಶ್ರ ಮಾಡಲಾಗಿದೆ.

Trending videos

Back to Top