CONNECT WITH US  

ಭಾರತ, ಚೀನಾ ನಡುವೆ 1.40 ಲಕ್ಷ ಕೋಟಿ ರೂ. ಒಪ್ಪಂದ

ಶಾಂಘೈ: ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಬೆಂಗಳೂರು ಮೂಲದ ಇನ್ಫೋಸಿಸ್‌, ಭಾರ್ತಿ ಏರ್‌ಟೆಲ್‌, ಅದಾನಿ ಗ್ರೂಪ್‌ನಂತಹ ಭಾರತೀಯ ಕಂಪನಿಗಳು ಚೀನಾದ ಕಂಪನಿಗಳ ಜತೆ 1.40 ಲಕ್ಷ ಕೋಟಿ ರೂ. ಮೊತ್ತದ 26 ವ್ಯವಹಾರಿಕ ಒಪ್ಪಂದಗಳನ್ನು ಮಾಡಿಕೊಂಡಿವೆ. ನವೀಕರಿಸಬಲ್ಲ ಶಕ್ತಿ, ಇಂಧನ, ವಿದ್ಯುತ್‌ ಮೂಲಸೌಕರ್ಯ, ಉಕ್ಕು, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು ಏರ್ಪ ಟ್ಟಿವೆ. ಚೀನಾ- ಭಾರತ ಮಾಹಿತಿ ತಂತ್ರಜ್ಞಾನ ಸೇವೆಗಳ ಕೈಗಾರಿಕಾ ಕಾರಿಡಾರ್‌ ಅನ್ನು ಕ್ವಿನ್ನಾನ್‌ನಲ್ಲಿ ಸ್ಥಾಪಿಸುವ ಸಂಬಂಧ ಕ್ವಿನ್ನಾನ್‌ ಸ್ವಾಯತ್ತ ಸರ್ಕಾರದ ಜತೆಗೆ ಇನ್ಫೋಸಿಸ್‌ ಒಡಂಬಡಿಕೆ ಮಾಡಿಕೊಂಡಿದೆ. 15 ಸಾವಿರ ಕೋಟಿ ರೂ. ಸಾಲ ಸೌಲಭ್ಯ ಪಡೆಯುವ ಸಂಬಂಧ ಚೀನಾ ಅಭಿವೃದ್ಧಿ ಬ್ಯಾಂಕ್‌, ಚೀನಾ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್‌ ಜತೆಗೆ ಭಾರ್ತಿ ಏರ್‌ಟೆಲ್‌ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದ್ರಾ ವಿಶೇಷ ಆರ್ಥಿಕ ವಲಯದಲ್ಲಿ ಫೋಟೋವೋಲ್ಟಾಯಿಕ್‌ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಸಲುವಾಗಿ ಚೀನಾದ ಗೋಲ್ಡನ್‌ ಕಾನ್‌ಕರ್ಡ್‌ ಜತೆಗೆ ಅದಾನಿ ಗ್ರೂಪ್‌ ಒಡಂಬಡಿಕೆಗೆ ಸಹಿ ಹಾಕಿವೆ.

Trending videos

Back to Top