CONNECT WITH US  

ದಟ್ಟಾರಣ್ಯದಲ್ಲಿ ವಿಮಾನ ಪತನ: ತಾಯಿ, ಹಸುಗೂಸು ಪವಾಡ ಸದೃಶ ಪಾರು

ಬಗೋಟಾ : ಕೊಲಂಬಿಯಾದ ದಟ್ಟಾರಣ್ಯದಲ್ಲಿ 5 ದಿನಗಳ ಹಿಂದೆ ಪತನವಾಗಿದ್ದ ವಿಮಾನದಲ್ಲಿದ್ದ ತಾಯಿ ಮತ್ತು ಆಕೆಯ ಹಸುಗೂಸು ಪವಾಡ ಸದೃಶವಾಗಿ  ಬದುಕಿ ಬಂದಿರುವ ಘಟನೆ ಇದೀಗ ವಿಶ್ವದ ಗಮನ ಸೆಳೆದಿದೆ. 

18 ವರ್ಷ ಪ್ರಾಯದ ನೆಲ್ಲಿ ಮುರಿಲ್ಲೊ ಎನ್ನುವ ಯುವತಿ ಮತ್ತು ಆಕೆಯ ಎಳೆಯ  ಗಂಡು ಮಗು ವಿಮಾನ ಪತನವಾದ ಸ್ಥಳದಲ್ಲಿ 5 ದಿನಗಳ ಬಳಿಕ ರಕ್ಷಣಾ ತಂಡಕ್ಕೆ ಪತ್ತೆಯಾಗಿ ವಿಸ್ಮಯ ಮೂಡಿಸಿದ್ದಾರೆ. 

ಜೂನ್‌ 20 ರ ಶನಿವಾರ ಮಧ್ಯಾಹ್ನ ನೂಕಿಯಿಂದ ಕೋಬ್‌ಡೊ ಗೆ ತೆರಳುತ್ತಿದ್ದ ವೇಳೆ ಪೈಲಟ್‌ ಸೇರಿದಂತೆ ಮೂವರೆ ಇದ್ದ ಸೆಸ್ನಾ 303 ಲಘು ವಿಮಾನ ಪತನವಾಗಿತ್ತು. ವಿಮಾನದಲ್ಲಿದ್ದ ಪೈಲೆಟ್‌ ರಕ್ಷಣಾ ಕಾರ್ಯಾಚರಣೆ ವೇಳೆ ವಿಮಾನದಲ್ಲೆ ಶವವಾಗಿ ಪತ್ತೆಯಾಗಿದ್ದ. 

14 ಮಂದಿಯ ರಕ್ಷಣಾ ತಂಡ ಹಗಲಿರುಳು ವ್ಯಾಪಕ ಹುಡುಕಾಟ ನಡೆಸಿದರೂ ನಾಪತ್ತೆಯಾದ ಮಹಿಳೆ ಹಾಗೂ ಆಕೆಯ ಮಗು ಪತ್ತೆಯಾಗಿರಲಿಲ್ಲ. ಇದರಿಂದಾಗಿ ಅವರಿಬ್ಬರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನಾಲ್ಕು ದಿನಗಳ ಬಳಿಕ ಬುಧವಾರ ಹುಡುಕಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. 

ಪವಾಡವೊ ಎಂಬಂತೆ  ರಕ್ಷಣಾ ಕಾಯಾಚರಣೆಯ ಕೊನೆಯ ದಿನ  ವಿಮಾನ ಪತನಗೊಂಡ ಸ್ಥಳದಲ್ಲೇ ತಾಯಿ ಮತ್ತು ಮಗು ರಕ್ಷಣಾ ತಂಡದ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸಿದ್ದಾರೆ. 

ಕೂಡಲೇ ಅವರಿಬ್ಬರನ್ನೂ ಹೆಲಿಕ್ಯಾಪ್ಟರ್‌ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಮುರಿಲ್ಲೊ ಗೆ ಸ್ವಲ್ಪ ಮಟ್ಟಿನಸುಟ್ಟ ಗಾಯಗಳಾಗಿದ್ದು ಮಗು ಯಾವುದೇ ಗಾಯವಿಲ್ಲದೆ ಪಾರಾಗಿದೆ. 

'ಇದು ನಂಬಲು ಅಸಾಧ್ಯವಾದ ಘಟನೆ, ಪವಾಡವೆ ಸರಿ . ಇಂತಹ ದಟ್ಟಾರಣ್ಯದಲ್ಲಿ ನಡೆದ ಘೋರ ದುರಂತದಲ್ಲಿ ಪಾರಾಗಲು ಆಕೆಗೆ ಆಕೆಯ ಮಾತೃ ಶಕ್ತಿಯೆ ಪ್ರೇರಣೆ' ಎಂದು ಕೊಲಂಬಿಯಾ ವಾಯುಪಡೆಯ ಕಮಾಂಡರ್‌ ಕೊಲೊನೆಲ್‌ ಹೆಕ್ಟರ್‌ ಕರಾಸ್ಕಲ್‌ ಪ್ರತಿಕ್ರಿಯಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ  ತನಿಖೆ ಮುಂದುವರೆದಿದೆ. 

Trending videos

Back to Top