CONNECT WITH US  

ಜನವಸತಿ ಪ್ರದೇಶದಲ್ಲಿ ಬಿದ್ದ ವಿಮಾನ: 141 ಸಾವು

ಮೆದಾನ್‌ (ಇಂಡೋನೇಶ್ಯಾ) : ಇಂಡೋನೇಶ್ಯಾದ ವಾಯುಪಡೆಗೆ ಸೇರಿದ ಸಾರಿಗೆ ವಿಮಾನವೊಂದು ಮಂಗಳವಾರ ಪತನಗೊಂಡು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ 141 ಮಂದಿಯನ್ನು ಬಲಿ ತೆಗೆದುಕೊಂಡಿದೆ.

51 ವರ್ಷಕ್ಕೂ ಹಳೆಯದಾದ ವಿಮಾನ ಟೇಕ್‌ ಆಫ್ ಆದ ಕೆಲ ಕ್ಷಣಗಳಲ್ಲೇ ಮೆದಾನ್‌ ನಗರದ ವಸತಿ ಪ್ರದೇಶವೊಂದರ ಮೇಲೆ ಪತನಗೊಂಡಿತು. ಇದರಿಂದ ವಸತಿ ನಿಲಯ ಮತ್ತು ಅಕ್ಕಪಕ್ಕದ ಕಾರುಗಳು ತೀವ್ರವಾಗಿ ಹಾನಿಗೀಡಾಗಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗುವ ಆತಂಕವನ್ನು ವಾಯುಪಡೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ವಿಮಾನದಲ್ಲಿ 12 ಜನ ವಾಯುಪಡೆ ಸಿಬಂದಿಗಳಿದ್ದರು.

ಅವರು ಮಿಲಿಟರಿ ಸಾಮಗ್ರಿಗಳನ್ನು ವಾಯುನೆಲೆಗಳಿಗೆ ಸಾಗಿಸುತ್ತಿದ್ದರು. ಇವರಲ್ಲದೇ ವಿಮಾನದಲ್ಲಿ 101 ಜನ ಹೆಚ್ಚುವರಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಇವರಲ್ಲಿ ಬಹುತೇಕರು ಸೈನಿಕರ ಕುಟುಂಬದವರು. ಘಟನೆಯಲ್ಲಿ ವಿಮಾನದಲ್ಲಿ ಇದ್ದ ಯಾರೂ ಬದುಕುಳಿದಿಲ್ಲ  ಎಂದು ಸೇನೆ ತಿಳಿಸಿದೆ. ಭೂಭಾಗದಲ್ಲಿದ್ದ ಎಷ್ಟು ಮಂದಿ ಅನಾಹುತಕ್ಕೆ ಬಲಿಯಾಗಿದ್ದಾರೆ ಎಂದೂ ಗೊತ್ತಾಗಿಲ್ಲ.

Trending videos

Back to Top