CONNECT WITH US  

ಎ.ಕೆ. 74 ಬುಲೆಟ್‌ ತಡೆಯಲು ಎಷ್ಟು ಐಫೋನ್‌ ಬೇಕು ಗೊತ್ತೇ?

ದುಬಾರಿ ಬೆಲೆತೆತ್ತು ಖರೀದಿಸಿದ ಐಫೋನ್‌ ಬಿದ್ದರೆ ಎಲ್ಲಿ ಚೂರಾಗಿ ಬಿಡುತ್ತೋ ಎಂದು ಜೋಪಾನವಾಗಿ ನೋಡಿಕೊಳ್ಳುತ್ತೇವೆ. ಇಷ್ಟೆಲ್ಲಾ ನಾಜೂಕಿನಿಂದ ನೋಡಿಕೊಳ್ಳಬೇಕಾದ ಐಫೋನ್‌ ಬುಲೆಟ್‌ನ ಗುಂಡನ್ನು ತಡೆಯಬಲ್ಲದೇ. ಅದರಲ್ಲೂ ಎ.ಕೆ. 74 ನಂತಹ ಅತ್ಯಾಧುನಿಕ ಆಯುಧದ ನಳಿಕೆಯಿಂದ ಹಾರಿದ ಗುಂಡನ್ನು! ಐಫೋನ್‌ ಗುಂಡನ್ನು ತಡೆದಿದ್ದೇ ಆದಲ್ಲಿ ಎಷ್ಟು ಐಫೋನ್‌ಗಳು ಬೇಕಾಗಬಹುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಎರ್ವಿಥಿಂಗ್‌ಆ್ಯಪಲ್‌ ಪ್ರೊ (ಆ್ಯಪಲ್‌ ಫೋನ್‌ಗಳ ವಿಶ್ಲೇಷಣೆ ಮಾಡುವ ಅಮೆರಿಕದ ಪೋರ್ಟ್‌ಲ್ಯಾಂಡ್‌ ಮೂಲದ ಯೂಟ್ಯೂಬ್‌ ಚಾನಲ್‌) ತಂಡ ಇಂಥದ್ದೊಂದು ವಿಶಿಷ್ಟ ಪ್ರಯೋಗ ನಡೆಸಿದೆ. ಗುಂಡನ್ನು ತಡೆಯಲು 4 ಐಫೋನ್‌ಗಳು ಸಾಕಾಗಬಹುದು ಎಂದು ತಂಡದ ಅಂದಾಜಾಗಿತ್ತು. ಆದರೆ, ಪ್ರಯೋಗದಿಂದ ಲಭಿಸಿದ ಉತ್ತರ ಕೊಂಚ ಭಿನ್ನವಾಗಿತ್ತು.

ಅವರ ಪ್ರಯೋಗ ಹೀಗಿತ್ತು:

8 ಐ ಫೋನ್‌ಗಳನ್ನು ಒಂದರ ಪಕ್ಕ ಒಂದರಂತೆ ನಿಲ್ಲಿಸಿ ಪ್ರಯೋಗಕಾರ ಎ.ಕೆ.74 ರೈಫ‌ಲ್‌ನಿಂದ ಐಫೋನ್‌ನ ತಳಭಾಗಕ್ಕೆ ಗುಂಡು ಹಾರಿಸುತ್ತಾನೆ. ಸೆಕೆಂಡಿಗೆ 2,900 ಅಡಿ ವೇಗದಲ್ಲಿ ಸಿಡಿದ ಸ್ಟೀಲ್‌ ಬುಲೆಟ್‌, ನಾಲ್ಕು ಐಫೋನ್‌ಗಳನ್ನು ಹಾದು ಐದನೇಯದರಲ್ಲಿ ತಡೆಯಲ್ಪಡುತ್ತದೆ. ಬಳಿಕ ಇನ್ನೊಂದು ಸುತ್ತಿನ ಪರೀಕ್ಷೆ ನಡೆಸಿದ ಆತ ಐಫೋನ್‌ನ ಮಧ್ಯಕ್ಕೆ ಗುಂಡು ಹಾರಿಸುತ್ತಾನೆ. ಆಗ ಗುಂಡು 5 ಫೋನ್‌ಗಳನ್ನು ಹಾದು 6ನೇಯದಕ್ಕೆ ಬಡಿಯುತ್ತದೆ. ಆದೆರೆ, ಆ ಐಫೋನ್‌ ಕಾರ್ಯನಿರ್ವಹಿಸುತ್ತಿತ್ತು. ಇದರರ್ಥ ಗುಂಡಿನ ದಾಳಿಯಿಂದ ಪರಾಗಲು ಕಿಸೆಯಲ್ಲಿ 5 ಐಫೋನ್‌ ಇಟ್ಟುಕೊಂಡಿರಬೇಕು! ಎಂದು ಆತ ವಿವರಣೆ ನೀಡುತ್ತಾನೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.


Trending videos

Back to Top