CONNECT WITH US  

ಇಂಡೋನೇಷ್ಯಾ ವಿಮಾನ ಪತನ ಸ್ಥಳದಲ್ಲಿ 54 ಶವ,ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಜಕಾರ್ತಾ: ಭಾನುವಾರ ಪಪುವಾ ಪ್ರಾಂತ್ಯದಲ್ಲಿ ಇಂಡೋನೇಷ್ಯಾದ ವಿಮಾನ  ಪತನಗೊಂಡಿದ್ದ ಸ್ಥಳಕ್ಕೆ ಮಂಗಳವಾರ ರಕ್ಷಣಾ ತಂಡಗಳು ತಲುಪಿದ್ದು, ಸ್ಥಳದಲ್ಲಿ  ಎಲ್ಲಾ 54 ಪ್ರಯಾಣಿಕರ ಶವಗಳು ಮತ್ತು ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿದೆ. 

ವಿಮಾನ ಸಂಪೂರ್ಣ ನಾಶವಾಗಿದ್ದು, ಮೃತ ದೇಹಗಳು ಸುಟ್ಟು ಕರಕಲಾಗಿದ್ದು ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೃತದೇಹಗಳನ್ನು ಜಯಪುರಕ್ಕೆ ಕೊಂಡೊಯ್ಯಲಾಗುತ್ತಿದ್ದು , ಪರೀಕ್ಷೆಯ ಬಳಿಕ ಹಸ್ತಾಂತರಿಸುವ ಸಾಧ್ಯತೆಗಳಿವೆ. ಬ್ಲ್ಯಾಕ್‌ ಬಾಕ್ಸ್‌ನ ಮೂಲಕ ವಿಮಾನ ಪತನಕ್ಕೆ ಕಾರಣವಾದ ಅಂಶಗಳು ತಿಳಿದು ಬರಬೇಕಿದೆ. 

ಟ್ರಿಗಾನಾ ಏರ್‌ ಸರ್ವಿಸ್‌ನ ಏಟಿಆರ್‌ 42 ಟಬೊìಪ್ರೊಪ್‌ ವಿಮಾನ ಪಪುವಾದ ಸ್ಥಳೀಯ ರಾಜಧಾನಿ ಜಯಪುರದಿಂದ ಒಕ್ಸಿಬಿಲ್‌ ನಗರಕ್ಕೆ ಪ್ರಯಾಣ ಕೈಗೊಂಡಿದ್ದ ವೇಳೆ ವಿಮಾನ ನಿಯಂತ್ರಣ ಕಳೆದುಕೊಂಡು ದಟ್ಟ ಕಾಡಿನಿಂದ ಆವೃತವಾದ ಬಿನ್ ಟಾಂಗ್ ಮೌಂಟೈನ್ಸ್ ಜಿಲ್ಲೆಯಲ್ಲಿ ಪತನವಾಗಿತ್ತು.

ವಿಮಾನದಲ್ಲಿ 44 ಮಂದಿ ಪ್ರಯಾಣಿಕರು, ಐದು ಮಕ್ಕಳು, ಮಗು ಹಾಗೂ ಐದು ಮಂದಿ ಸಿಬ್ಬಂದಿಗಳಿದ್ದರು. ವಿಮಾನದಲ್ಲಿದ್ದವರೆಲ್ಲಾ ಇಂಡೋನೇಷ್ಯಾದ ಪ್ರಜೆಗಳಾಗಿದ್ದರು.

Trending videos

Back to Top