CONNECT WITH US  

ಜಾತಕ ಫ‌ಲ

ಪೂರ್ಣಿಮಾ ಹೂಗಾರ, ಕಿತ್ತೂರು

  ಗುರೂಜಿ, ನನ್ನ ಮಗನ ಜಾತಕ ಕುಂಡಲಿಯ ಪ್ರತಿಯನ್ನು ಈ ಸಂಗಡ ಕಳುಹಿಸಿದ್ದೇನೆ. ಸರಿಯಾಗಿ ಓದುತ್ತಿಲ್ಲ. ಹಟ ಮಾಡುತ್ತಾನೆ. ಬೇರೆಯವರು ಹೇಳು ಮಗನ ಬಗೆಗಿನ ಸುದ್ದಿ ಕೇಳಿದರೆ ಸಂಕಟವಾಗುತ್ತದೆ. ನೀವು ತಂದೆ ತಾಯಿಗಳು ಸರಿ ಇದ್ದಿದ್ದರೆ ತಾನೂ ಸರಿ ಇರುತ್ತಿದ್ದೆ ಎಂದು ಕೂಗಾಡುತ್ತಾನೆ. ಏನು ಮಾಡಬಹುದು? ಸರಿದಾರಿಗೆ ಬರಬಹುದೇ? ತಂದೆ ತಾಯಿ ತಪ್ಪೇನೆಂದು ಕೇಳಿದರೆ ಉತ್ತರವಿಲ್ಲ. 

   ನಿಮ್ಮ ನಾಲ್ಕು ಸಾಲಿನ ಪ್ರಶ್ನೆಯಲ್ಲಿ ಒಂದು ಕಾದಂಬರಿ ಅಡಗಿದೆ. ಇಂದಿನ ಸಮಾದ ರೀತಿನೀತಿಗಳು ಹುಡುಗರನ್ನು ಇನ್ನಿಲ್ಲದ ರೀತಿಯಲ್ಲಿ ಹಾದಿಗೆಡಿಸಿದೆ. ಒಂದೆರಡು ಕಾರಣಗಳಲ್ಲ. ಒಂದೆರಡು ಜನರು ಕಾರಣರಲ್ಲ. ಮಗ ದಾರಿ ತಪ್ಪಿದ್ದಾನೆ. ಬುದ್ಧಿವಂತನಾದರೂ ಶನಿ, ಸೂರ್ಯ, ಕುಜ, ಕೇತು ಗ್ರಹಗಳ ಪ್ರಭಾವ ನಿಮ್ಮ ಹುಡುಗನನ್ನು ಹೈಪರ್‌ ಆ್ಯಕ್ಟೀವ್‌ ಮಾಡಿದೆ. ಒಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲಾರ. ಒರಟು ತನವಿದೆ. ಕೇಡಿಗಳು ಗೆಳೆಯರಾಗಿದ್ದಾರೆ. ಹಾಗೆಂದು ಒಳ್ಳೆಯತನವಿಲ್ಲವೆಂದಲ್ಲ. ತನ್ನ ತಪ್ಪು ಮುಚ್ಚಿಕೊಳ್ಳಲು ತಂದೆ ತಾಯಿಗಳಾದ ನಿಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾನೆ. ಈಗ ಸದ್ಯ ಪಂಚಮ ಶನಿಕಾಟವೂ ಇದೆ. ರಾಮರûಾ ಸ್ತೋತ್ರ ಓದಲು ತಿಳಿಸಿ. ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ಮಾಡಿಸಿ. ನಿಧಾನವಾಗಿ ನಿಮ್ಮ ನಿಯಂತ್ರಣಕ್ಕೆ ಬರುತ್ತಾನೆ. ಸದ್ಯದ ಗೊಂದಲ ಶ್ರೀದೇವಿ ಆರಾಧನೆಯಿಂದ ನಿಯಂತ್ರಣಕ್ಕೆ ಬರಬೇಕು. 

  ಗುರು ಶರಣಪ್ಪ, ಗಂಗಾವತಿ

  ನಮ್ಮ ಹೊಲದಲ್ಲಿ ಈಗ ಒಂಭತ್ತು ವರ್ಷಗಳಿಂದ ಉತ್ತಮವಾದ ಬೆಳೆ ಬರುತ್ತಿತ್ತು. ಒಳ್ಳೆಯ ಆದಾಯ ಸಿಗುತ್ತಿತ್ತು. ಬಹಳ ಸಂತೋಷದಿಂದಲೇ ಇದ್ದೆವು. ಈಗ ಕಳೆದ ಡಿಸೆಂಬರ್‌ ತಿಂಗಳಿನಂದು ನಮ್ಮ ಹೊಲದ ಐದು ಭಾಗಗಳಲ್ಲಿ ಮಾಟ ಮಂತ್ರ, ತಂತ್ರ ಮಾಡಿ ಹೋದ, ಈ ಜಾಗೆಯಲ್ಲಿ ರಕ್ತದ ಹನಿಗಳೂ ಕಂಡ ಇತ್ಯಾದಿ ವಿಚಾರಗಳು ನಮ್ಮ ಅಶಾಂತಿಗೆ ಕಾರಣವಾಗಿವೆ. ಅದು ನಿಜ ಎಂಬ  ಹಾಗೆ ಈ ಒಂದು ವರ್ಷದಲ್ಲಿ ಒಳ್ಳೆಯ ಫ‌ಸಲೂ ಬರಲಿಲ್ಲ. ಈ ವರ್ಷದ ಕೂಡ ಉಲ್ಲಸದಾಯಕವಾಗಿಲ್ಲ. ಈ ತೊಂದರೆಯ ನಿವಾರಣೆ ಹೇಗೆ? ನಮ್ಮ ಕಾರು ಇದ್ದಕ್ಕಿದ್ದಲ್ಲೇ ಕೆಟ್ಟು ನಿಂತಿದೆ. ಜಾತಕ ಕಳುಹಿಸಿದ್ದೇನೆ. ಪರಿಹರಿಸಿಕೊಳ್ಳಿ. 

   ಹೆದರ ಬೇಡಿ. ನಿಮ್ಮನ್ನು ಭಯ ಬೀಳಿಸಲು ಕುತಂತ್ರ ನಡೆದಿದೆ. ನಿಮ್ಮ ಜಾತಕದಲ್ಲಿನ ಗ್ರಹಗಳು, ಮುಖ್ಯವಾಗಿ ಗುರು ಗ್ರಹದ ಉತ್ತಮ ದೃಷ್ಟಿಯಿಂದ ಮಾಟ ಮಂದ್ರ, ತಂತ್ರಗಳಿಗೆ ಯಾವ ಅವಕಾಶವನ್ನು ನೀಡುವುದಿಲ್ಲ. ಯಾರೇ ಮಾಡಿಸಿದ್ದರೂ ಅದು ಅವರಿಗೇ ತಿರುಗಿ ಹೋಗಿ ತಗಲಿಕೊಳ್ಳುತ್ತದೆ. ಪ್ರತಿ ದಿನ ಶ್ರೀ ದೇವಿಕಾಳಿಕಾ ಕವಚ ಓದಿರಿ. ಬಿಳಿ ಸಂಖದಿಂದ (ಹಾಲು, ಜೇನು, ತುಪ್ಪ, ಮೊಸರು, ನವನೀತವನ್ನು ಬೆರೆಸಿದ ನೀರಿನಿಂದ) ಮುಖ್ಯವಾಗಿ ನಾಗಾಭರಣ ಸಹಿತನಾದ ಈಶ್ವರನಿಗೆ ಪ್ರತಿ ಸೋಮವಾರ ಅಭಿಷೇಕ ಮಾಡಿ. ವಾರದಲ್ಲಿ ಒಮ್ಮೆ. ಚಂದ್ರಮೌಳೇಶ್ವರ ಅಷ್ಟೋತ್ತರ ಪ್ರತಿ ದಿನ ಓದಿ. ಸಮಸ್ಯೆ ದೂರವಾಗುತ್ತದೆ. 

 ಶಿವಮೂರ್ತಿ ಕುಮಾರ್‌, ಕುಮಟಾ

 ಒಳ್ಳೆಯದಾಗಿ ಅಂಕಗಳಿಸಿ ಬಿಇ ಪಾಸಾಗಿದ್ದೇನೆ. ಉತ್ತಮವಾದ ಕೆಲಸ ಸಿಗುತ್ತಿಲ್ಲ. ಜಾತಕ ಕುಂಡಲಿಯ ಪ್ರತಿ ಕಳುಹಿಸಿದ್ದೇನೆ. ಬೆಂಗಳೂರಿನಲ್ಲಿದ್ದೇನೆ. ಕೆಲಸ ಸಿಕ್ಕೀತೆ. ವಿದೇಶ ಯೋಗ ಇದೆಯೇ?

 ರಾಹುದಶಾಕಾಲ ನವೆಂಬರ್‌ 8ಕ್ಕೆ ಮುಕ್ತಾಯವಾಗಲಿದೆ. ರಾಹು ಬೃಹಸ್ಪತಿ ಸಂಧಿಶಾಂತಿ ಮಾಡಿಸಿ. ವಿದೇಶಯೋಗವಿದೆ. ಯುರೋಪ್‌ ಅಥವಾ ಉತ್ತರ ಅಮೇರಿಕಾ ಕಡೆ ನಿಮಗೆ ಕೆಲಸ ಸಿಗುವ ಸಂಭವ ಜಾಸ್ತಿ ಪ್ರತಿ ದಿನ ಶ್ರೀ ಸುಬ್ರಮಣ್ಯ, ಅನಘ ಹಾಗೂ ಶ್ಯಾಮಲಾಷ್ಟೋತ್ತರ ಓದಿ. ಹಳದಿ ಕರವಸ್ತ್ರ ಒಂದುನ್ನು (ಮುಖ್ಯವಾಗಿ ಕೈ ಒರೆಸಬೇಡಿ) ಸುಮ್ಮನೆ ಪ್ಯಾಂಟ್‌ ಜೇಬಿನಲ್ಲಿ ಇಟ್ಟುಕೊಂಡಿರಿ. ಸಕಾರಾತ್ಮಕ ಶಕ್ತಿ, ಸ್ಪಂದನ ಒದಗಲಿದೆ.


Trending videos

Back to Top