ಜಾತಕ ಫಲ

ಸುರೇಂದ್ರಕುಮಾರ, ನಾಗಪುರ
ಗುರೂಜಿ, ಜಾತಕದ ಪ್ರತಿಗಳನ್ನು ಇಟ್ಟಿದ್ದೇನೆ. ನನ್ನ ಮತ್ತು ನನ್ನ ಪತ್ನಿಯದು ವಿಷಮ ದಾಂಪತ್ಯ. ಯಾವುದಕ್ಕೂ ನನ್ನನ್ನು ಒಪ್ಪಿ ನಡೆಯುವ ವಿಚಾರ ಅವಳಿಗೆ ಹಿಂಸೆಯಾಗುತ್ತದೆ. ನಿಮ್ಮ ವೈಯುಕ್ತಿಕ ಸ್ವಾರ್ಥಗಳಿಗಾಗಿ ತನ್ನ ಬಗೆಗಿನ ಆರೈಕೆ, ಸಲಹೆ, ಕಾಳಜಿಗಳು ವಿನಾ, ನನ್ನ ಮೇಲಿನ ಆದರ, ಅಭಿಮಾನಗಳಿಗಾಗಲ್ಲ ಎಂಬುದು ಅವಳವಾದ. ನಾಣ್ಯದ ಒಂದೇ ಮಗ್ಗಲನ್ನು ನೋಡುತ್ತಾಳೆ. ಇನ್ನೊಂದು ಮಗ್ಗುಲನ್ನು ನೋಡಲಾರಳು. ಸೋತು ಸುಣ್ಣನಾಗಿದ್ದೇನೆ. ಪರಿಹಾರಗಳಿದೆಯೇ?
ನಿಮ್ಮ ಮನೆಯವರ ಲಗ್ನ ಭಾವ ವಿಶಾಖಾ ನಕ್ಷತ್ರದಲ್ಲಿದ್ದು ಸರ್ನೆ ಹಿಡಿಯುವ, ತಾಳ್ಮೆಯನ್ನು ಕಳೆದುಕೊಳ್ಳುವ, ಸುಲಭವಾಗಿ ಸಿಟ್ಟುಗೊಳ್ಳುವ, ತಪ್ಪನ್ನೇ ತಿಳಿದುಕೊಳ್ಳುವ ಸ್ವಭಾವವಾಗುತ್ತದೆ. ಲಗ್ನ ಭಾವದ ಒಡೆಯ ಶುಕ್ರ ನೀಚನಾಗಿದ್ದಾನೆ. ನಿಮ್ಮ ಲಗ್ನ ಭಾವ ಜ್ಯೇಷ್ಠಾ ನಕ್ಷತ್ರದಲ್ಲಿದ್ದು ಪರರನ್ನು ಆದರಿಸುವ, ಧರ್ಮವನ್ನು ಕಡೆಗಣಿಸಲಾಗದ, ಬರೆಯುವ ಆಸಕ್ತಿ, ಸಶಕ್ತತೆ, ನಯ ಮತ್ತು ಗೌರವದಿಂದ ಇತರರನ್ನು ನೋಡುವ ಮನೋಭಾವದ್ದು. ಇಲ್ಲಿ ಒಂದು ತೊಂದರೆ ಏನೆಂದರೆ ನಿಮ್ಮ ಹಿಂದಿನ ಪ್ರೇಮ ಸಂಬಂಧದ ಬಗ್ಗೆ ಏನಾದರೂ ಹಂಚಿಕೊಂಡಿದ್ದಿರಾ?ಹಾಗೇನಾದರೂ ಆಗಿದ್ದರೆ, ನೀವು ಕಷ್ಟವನ್ನು ತಂತಾನೆ ಮೈಮೇಲೆ ಎಳೆದುಕೊಂಡಿದ್ದೀರಿ. ಇದು ಬಾಳು ನೋಡು, ಇದು ಹೀಗೇ ಎಂಬ ಭಾವನೆಯಿಂದ ತಾಳ್ಮೆಯಿಂದಿರಿ. ಮಾತು ಕಡಿಮೆಯಾಗಲಿ. ಶ್ರೀ ಲಕ್ಷಿ$¾àನಾರಾಯಣ ಹೃದಯ ಮಂತ್ರ ಪಠಿಸಿ.
ದಾಕ್ಷಾಯಿಣಿ ರಂಗಶೆಟ್ಟಿ, ತಿಪಟೂರು
ನನ್ನ ಮಗ ಅಮೇರಿಕಾದಲ್ಲಿರುವುದು. ಮೊದಲ ಮದುವೆ ಮುರಿದು ಬಿತ್ತು. ಈಗ ವಿಚ್ಛೇದನವಾಗಿದೆ. ಒಬ್ಬಳು ಮೆಕ್ಸಿಕನ್ ಹುಡುಗಿ ಈಗ ಮದುವೆಯಾಗುವ ಹಂಬಲ ಹೊಂದಿದ್ದಾಳೆ. ಹೊಂದಿಕೆಯಾಗುವ ದಾಂಪತ್ಯ ಆಗಬಹುದೆ? ಅವಳ ಚಾತಕವನ್ನೂ, ಮಗನ ಜಾತಕ ಎನ್ನೂ ಈಗ ಲಗ್ನ ಇರಿಸಿದ್ದೇನೆ. ಆಕೆಗೆ ಭಾರತೀಯ ಸಂಸ್ಕೃತಿಯ ಬಗೆಗೆ ಗೌರವಾದರಗಳಿವೆ. ನಿಮ್ಮ ಅಭಿಪ್ರಾಯ ತಿಳಿಸಿ.
ಮೊದಲ ದಾಂಪತ್ಯಕ್ಕೆ ಶನಿ ಗ್ರಹದ ಕರಿ ನೆರಳು ಬಿದ್ದು ಬಾಂಧವ್ಯವು ಮುರಿಯುವಂತಾಯ್ತು. ಈಗ ನಡೆಯುತ್ತಿಉವ ಬುಧದಶಾ ಕಾಲವು ನಿಮ್ಮ ಮಗನಿಗೆ ವೈವಾಹಿಕ ಸಿದ್ಧಿಗೆ ದಾರಿ ಮಾಡಿಕೊಡಲಿದೆ. ತನ್ನದಾದ ಒಳ್ಳೆಯತನ ಸ್ವಾಗತಾರ್ಹವೇ. ಆದರೆ ಕೆಲಸದ ಸ್ಥಳ ಒತ್ತಡವಿದ್ದರೂ, ಪತ್ನಿಯೊಡನೆ ಕೆಲವು ಬದುಕಿನ ಬಗೆಗಿನ ಮಾತುಕತೆ, ಹೊರಗೆ ಸುತ್ತಾಡಿ ಬರುವ ವಿರಾಮ ಇತ್ಯಾದಿಗಳು ಕೂಡಿರಲಿ. ಕೇವಲ ಕೆಲಸದಲ್ಲಿ ಕಳೆದು ಹೋಗುವ ದುರ್ಭರತೆಯನ್ನು ಕುಜನು ನಿರ್ಮಿಸುತ್ತಾನೆ. ಮಂಗಳ ಚಂಡಿಕಾ ಸ್ತೋತ್ರವನ್ನು ಮಗ ಪಠಿಸಲಿ.
ವಿನಾಯಕ್ ಶೇಟ್, ಹೂವಿನ ಹಡಗಲಿ
ಬಾಳು ಸುಖಮಯವಾಗಿಯೇ ಸಾಗಿತ್ತು. ಆದರೆ ಒಂದು ಇದ್ದಕ್ಕಿದ್ದಲ್ಲೇ ಮೂಛೆì ಬಂದು ಬಿದ್ದು ಬಿಟ್ಟೆ. ಬದುಕಿನ ರಗಳೆಗಳು ಪ್ರಾರಂಭವಾದವು. ಏನೂ ಬೇಡ ಎಂದು ಅನ್ನಿಸುತ್ತದೆ. ಮನಸ್ಸು ಖಾಲಿಯಾಗುತ್ತದೆ. ವಾಹನ ಓಡಿಸುವಾಗ ಉರುಳಿ ಬೀಳುವೆ ಎಂಬ ಹೆದರಿಕೆ. ಸಮಸ್ಯೆಗೆ ಪರಿಹಾರವಿದೆಯೇ? ನನ್ನ ಜಾತಕದ ಪ್ರತಿಯನ್ನು ಅವಗಾಹನೆ ಮಾಡಿ ಎಂದು ವಿನಂತಿ.
ರಾಹು ಚಂದ್ರರ ದೋಷ ಛಿದ್ರಸ್ಥಾನದಲ್ಲಿ ಅಧಿಕವಾಗಿದ್ದು ಬುಧನೂ ದುರ್ಬಲ. ಜರೂರಾಗಿ ನರ ತಜ್ಞರನ್ನು ಸಂದರ್ಶಿಸಿ. ಉತ್ತಮನಾದ ಗುರುವು ಭಾಗ್ಯಕ್ಕೆ ಬೆಳಕು ತುಂಬಿರುವುದರಿಂದ ಒಳಿತಿಗಾಗಿ ದಾರಿ ಇದೆ. ಉತ್ಸಾಹ ಕಳಕೊಳ್ಳದಿರಿ. ಬದುಕಿನಲ್ಲಿ ಸುಖವಿದೆ. ದುಃಖ ಕೂಡ. ಅಮೃತ ವಿಷಯವಾಗಬಹುದು. ಹಾಗೆಯೇ ವಿಷವು ಅಮೃತವಾಗುವ ಸಿದ್ಧ ಕೂಡ ಇದೆ. ಧನ್ವಂತರಿ ಅಷ್ಟೋತ್ತರ ನರಸಿಂಹ ಕವಚ ಓದಿ. ಬುಧ ಪೀಡಾ ನಿವಾರಣಾ ಸ್ತೋತ್ರ ಓದಿ. ವೈದ್ಯರ ಸಲಹೆ ಸೂಕ್ತ, ನರ ತಜ್ಞರು ನಿಮ್ಮನ್ನು ಗುಣಪಡಿಸಲು ಸಾಧ್ಯ.