ಜಾತಕ ಫಲ

ಆಕಾಂಕ್ಷ ಉಡುಪ, ಪುತ್ತೂರು
ನನ್ನ ಮತ್ತು ನಾನು ಮದುವೆಯಾಗಲಿರುವವರ ಜಾತಕ ಕಳುಹಿಸುತ್ತಿದ್ದೇನೆ. ಮದುವೆಯ ವಿಚಾರ ಆಪ್ತವೆನಿಸಿತ್ತು. ಆದರೆ ಮದುವೆ ನಿಶ್ಚಿತವಾದ ಒಂದೆರಡು ದಿನಗಳಲ್ಲಿ ಗುರುತೇ ಇರದ ಮಹಿಳೆಯೊಬ್ಬಳು (ನಾನು ವಾಸವಿರುವುದು ಬೆಂಗಳೂರಿನಲ್ಲಿ ) ಮಹತ್ವದ ನಿರ್ಧಾರಕ್ಕೆ ತಲುಪಿದ್ದೀಯಾ. ತೊಂದರೆ ಇದೆ ಎಚ್ಚರ ಎಂದು ಹೇಳಿದಳು. ಅಲ್ಲಿಂದಾಚೆಗೆ ನಾನು ದಿಗಿಲುಗೊಂಡಿದ್ದೇನೆ. ನನ್ನ ಮನಸ್ಸೇ ಕಲಕಿ ಹೋಗಿದೆ. ಮದುವೆ ಸುಖಕರವೇ?
ನಿಮ್ಮ ಜಾತಕ ಪರಿಶೀಲಿಸಿದ್ದೇನೆ. ಕಳತ್ರ ಸ್ಥಾನ ( ಬಾಳ ಸಂಗಾತಿಯ ಸ್ಥಳ)ಕ್ಕಾಗಲಿ, ಸುಖ ಸ್ಥಾನಕ್ಕಾಗಲಿ ದೋಷವಿಲ್ಲ. ಹುಡುಗನ ಜಾತಕದಲ್ಲೂ ತೊಂದರೆ ದಾಂಪತ್ಯದ ವಿಚಾರದಲ್ಲಿ ಮೂಡಿ ಬರದು. ಮೈಂಡ್ಗೆàಮ್ ಆಡುವ ಜನ ಇರುತ್ತಾರೆ. ನಿರ್ಲಕ್ಷಿಸಿ. ಚಂದ್ರ ಪೀಡಾ ನಿವಾರಣಾ ಸ್ತೋತ್ರ 21 ಬಾರಿ ಪಠಿಸಿ. ಧೈರ್ಯ ಇರಲಿ. ನಿರಾಳರಾಗಿ.
ವಿದ್ಯಾಶಂಕರನ್, ಚಿಕ್ಕಮಗಳೂರು
ಈಗ ಐದು ತಿಂಗಳಿಂದ ಮೂಛೆì ರೋಗ ಕಾಣಿಸಿಕೊಂಡಿದೆ. ನನಗೆ ಮಗುವಾಗಿ ಆರು ತಿಂಗಳುಗಳಾಗಿವೆ. ಇದ್ದಕ್ಕಿದ್ದಲ್ಲಿಯೇ ಮೂಛೆì ಕಾಣಿಸಿಕೊಂಡಿತು. ಈವರೆಗೆ ಐದು ಬಾರಿ ಕಾಡಿದೆ. ಏನು ತೊಂದರೆ? ಮಗುವಿನಿಂದ ತೊಂದರೆಯೇ? ಜಾತಕ ಕಳುಹಿಸಿದ್ದೇನೆ. ಪರಿಹಾರ ತಿಳಿಸಿ. ನೀಲ ಧರಿಸಿದ್ದೇನೆ. ಸರಿಯೇ?
ಮೊದಲು ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಲು ಮುಂದಾಗಿ. ಮಗನನ್ನು ವೃಥಾ ಈ ವಿಷಯದಲಿ ಎಳೆಯದಿರಿ. ಸುಮ್ಮನೆ ನಿಮ್ಮ ಮಗುವಿನ ಬಗ್ಗೆ ಚಿಂತಿಸಿ. ಮಗುವಿಗೂ ಮೂಛೆìಗೂ ಕಾರಣ ಕಲ್ಪಿಸದಿರಿ. ರಾಹು ಅಷ್ಟೋತ್ತರ ಓದಿ. ನವ ದುರ್ಗಾ ಸ್ತೋತ್ರ ಕೂಡ ಓದಿ. ಮನೆಯ ದಕ್ಷಿಣ ದಿಕ್ಕಿನ ಮೂಲೆಯಲ್ಲಿ (ಮನೆಯ ಹೊರ ಭಾಗದಲ್ಲಿ) ಬರುವ 6 ತಿಂಗಳ ಕಾಲ ನವದುರ್ಗಾ ಸ್ತೋತ್ರ ಓದಿ ಮುಗಿಸಿದ ಮೇಲೆ ಚಿಕ್ಕ ಕರ್ಪೂರದ ತುಂಡನ್ನು ಉರಿಸಿ "ಪೈಠೀಯಸೋ ಬರìದ ದೇವ ಜಾತ ಶೂರ್ಪಾಸನ ಸಿಂಹಗತಃ ಸ್ವಭಾವಃ, ಯಾ ಮ್ಯಾನವೋ ನೈಋತಿ ದಿಕ್ಕರಾಳ್ಳೋ/ವರಪ್ರದ ಶ್ಯೂಲ ಗುಃ ಚರ್ಮ ಖಡ್ಗ / ಎಂಬ ಮಂತ್ರ 7 ಬಾರಿ ಪಠಿಸಿ. ಹರಳುಗಟ್ಟಿರುವ ರಾಹು ದೋಷಕ್ಕೆ ಪರಿಹಾರ ಲಭ್ಯ. ಗುಣವಾಗುತ್ತವೆ. ನೀಲ ಹರಳನ್ನು ಧರಿಸಲೇ ಬೇಡಿ. ತೊಂದರೆಗೆ ಇದು ದಾರಿ ಮಾಡುತ್ತಲಿದೆ. ತೆಗೆದು ಬದಿಗಿರಿಸಿ.
ರಾಮಚಂದ್ರಪ್ಪ, ಶಿವಪಟ್ಟಣ
ಜೀವನದಲ್ಲಿ ತುಂಬಾ ಶ್ರಮ ಪಟ್ಟೆ. ಕಾಯಕವೇ ಕೈಲಾಸ ಎಂದು ತಿಳಿದು ದುಡಿದೆ. ವಿನಯವು ಶ್ರೇಷ್ಠ ಎಂಬುದಾಗಿ ತಿಳಿದು ಹೆಜ್ಜೆ ಇರಿಸಿದೆ. ಆದರೆ ಎರಡು ಹೊತ್ತಿನ ಊಟ ಸಿಗಲು ಸಾಧ್ಯವಾಯೆ¤à ವಿನಾ ಮತ್ತೇನನ್ನು ಮಾಡಿಕೊಳ್ಳಲಾಗಲಿಲ್ಲ. ಮಗನಿಗೆ ಇದು ತಿಳಿಯುತ್ತಿಲ್ಲ. ಮಾನಸಿಕವಾಗಿ ಸಿಟ್ಟಿಗೇಳುತ್ತಾನೆ. ನನ್ನನ್ನು ಏನನ್ನೂ ಮಾಡಲಾಗದ ನಿರುಪಯೋಗಿ ಎಂದು ಕೂಗಾಡುತ್ತಾನೆ. ಈ ವೈಪರಿತ್ಯಕ್ಕೆ ಪರಿಹಾರವಿದೆಯೇ?
ನಿಮ್ಮ ಜಾತಕದಲ್ಲಿ ಕೆಲವು ಯೋಗಗಳು ಹೊಳಪನ್ನೂ, ತುಕ್ಕನ್ನೂ ಹೀಗೆ ಎರಡೂ ರೀತಿಯ ಮಿಶ್ರಣಗಳನ್ನು ಹೊಂದಿದೆ. ಮಂಗಳ, ಶನಿ, ಶುಕ್ರರು ಒಂದು ಉತ್ತಮ ಯೋಗಕ್ಕೆ ಕಾರಣರಾಗಿ ಧನ ಲಾಭವನ್ನು ಒದಗಿಸಲು ಕಾರಣರಾಗುತ್ತಾರೆ. ನಿಮ್ಮ ಮಗನಿಗೆ ಪಂಚಮ ಶನಿಕಾಟ ನಡೆಯುತ್ತಿದೆ. ಮಾನಸಿಕ ಅಸ್ವಾಸ್ಥವಿರುತ್ತದೆ. ಹಾಗೆಂದು ಹುಚ್ಚಾಸ್ಪತ್ರೆಗೆ ಸೇರಿಸುವ ಸ್ಥಿತಿ ಅಲ್ಲ. ಜೋಪಾನವಿರಲಿ. ನಾಣ್ಯದ ಒಂದೇ ಮುಖ ಗಮನಿಸುತ್ತಾನೆ. ಆದರೆ ಬುದ್ಧಿವಂತನೂ ಇದ್ದಾನೆ. ಬುದ್ಧಿ ಇದ್ದರೂ ಗಮನ ಕೇಂದ್ರೀಕರಿಸಲಾರ. ಕಾಲಭೈರವಾಷ್ಟಕ ಓದಿ. ಶನಿ ಪ್ರದೋಷದಲ್ಲಿ ಶಿವನನ್ನು ಆರಾಧಿಸಿ. ಶನೈಶ್ಚರ ಕವಚ ಓದಿ. ಮಂಗಳ ಚಂಡಿಕಾ ಸ್ತೋತ್ರ ಪಠಿಸಿ.
ಶಂಭುಶೆಟ್ಟಿ, ಸಕಲೇಶಪುರ
ನನ್ನ ಜಾತಕ ಇರಿಸಿದ್ದೇನೆ. ನಾನು ವಜ್ರ ಧಾರಣೆ ಮಾಡಬಹುದೆ? ಒಳಿತಿದೆಯಾ?
ವಜ್ರದ ಹರಳು (30 ಸೆಂಟ್ಸ್ಗಿಂತ ಕಡಿಮೆ ಬೇಡ) ಧರಿಸಿ. ಪ್ರಯೋಜನವಿರುತ್ತದೆ. ಆದರೆ ಹರಳು ಧರಿಸಿದ ಮಾತ್ರಕ್ಕೆ ಎಲ್ಲವೂ ಸುಸೂತ್ರ ಎಂಬ ಭಾವನೆ ಬೇಡ. ನಿಮ್ಮ ವ್ಯಕ್ತಿತ್ವದ ಸಂವರ್ಧನೆಗೆ ಹರಳು ಸಿರಿಯನ್ನು ಕೊಡಲಿದೆ. ಜೊತೆಗೆ ಪ್ರತಿ ದಿನ ಶುಕ್ರ ಅಷ್ಟೋತ್ತರವನ್ನು ಪಠಿಸುವುದೂ ಸೂಕ್ತವಾಗಿದೆ. ಗಮನಿಸಿ.