CONNECT WITH US  

ಜಾತಕ ಫ‌ಲ

ರಾಮದಾಸ ಬಂಗೇರ, ನಾಸಿಕ
ನಮ್ಮ ತಾಯಿಯವರಿಗೆ ಈಗ ಇದ್ದಕ್ಕಿದ್ದಂತೆ ಭಯ ಸಂವೇದನೆಗಳಾಗುತ್ತವೆ. ತನ್ನನ್ನು ಯಾರೋ ಎದುರಿಗೇ ಬಂದು ಕೊಲ್ಲಲು ಹೊರಟಿದ್ದಾರೆ ಎಂಬ ತಲ್ಲಣದಲ್ಲಿ ಕೂಗಾಡುತ್ತಾರೆ. ಮನೆಯಿಡೀ ಓಡಾಡುತ್ತಾರೆ. ಬಾಗಿಲು ಹಾಕಿದರೂ, ಬಾಗಿಲಲ್ಲಿ ತೂರಿಕೊಂಡು ಕೊಲ್ಲುವ ವ್ಯಕ್ತಿ ದಾಳಿ ಮಾಡುತ್ತಿದ್ದಾನೆಂದು ಕಿರುಚುತ್ತಾರೆ. ನಂತರ ಕೆಲ ಹೊತ್ತಿನ ಬಳಿಕ ಶಾಂತರಾಗುತ್ತಾರೆ. ದಣಿಯುತ್ತಾರೆ. ಏನು ಇದು, ಯಾವ ಗ್ರಹದ ತೊಂದರೆ? ಪರಿಹಾರಗಳೇನು?

ಹಲವು ಸರತಿ ವಿಜ್ಞಾನವನ್ನು, ಜಾತಕದ ತೊಂದರೆಗಳ ಮೂಲಕ ಶರಣು ಹೋಗಬೇಕಾಗುತ್ತದೆ. ಅನುಮಾವಿಲ್ಲ. ಗ್ರಹಗಳ ತೊಂದರೆಯೇ ಮಾನಸಿಕ, ದೈಹಿಕ ಅಸಮತೋಲನಗಳಿಗೆ ಕಾರಣವಾಗುತ್ತದೆ. ದಯಮಾಡಿ ಚಂದ್ರ, ಬುಧ, ರಾಹು, ಶನೈಶ್ಚರ ಪೀಡಾ ನಿವಾರಣಾ ಸ್ತೋತ್ರಗಳನ್ನು ನಿಮ್ಮ ತಾಯಿ ಓದಲಿ. ಅವರಿಗೆ ಸ್ಕಿಝೋಫ್ರೆನಿಕ್‌ ವ್ಯಾಧಿ ಇದೆ. ಅಷ್ಟಮಾಧಿಪತಿ (ಮರಣದ ಮನೆಯ ಅಧಿಪತಿ), ಬಾಳ ಸಂಗಾತಿ ಮನೆಯ ಅಧಿಪತಿ (ಕಳತ್ರನಾಥ) ಇವರುಗಳಲ್ಲಿ ಪರಸ್ಪರ ಪರಿವರ್ತನ ಯೋಗವಾಗಿದೆ. ನೀಚ ಚಂದ್ರ ಶನಿಯ ಜೊತೆಗಿದ್ದಾನೆ. ಶುಕ್ರನೂ ಇದ್ದಾನೆ. ಕುಜ ಶುಕ್ರನ ಮನೆಯಲ್ಲಿದ್ದಾನೆ. ಮಾನಸಿಕವಾದ ಅನೇಕ ತಲ್ಲಣಗಳು, ವ್ಯಕ್ತಿತ್ವಕ್ಕೆ ಏರುಪೇರುಗಳು ಬದುಕಿನ ಸಂದರ್ಭದಲ್ಲಿ ಕ್ಲಿಷ್ಟಕಾರಕವಾಗಿರುತ್ತದೆ. ಜೊತೆಗೆ ಈಗ ಏಳೂವರೆ ವರ್ಷಗಳ ಶನಿಕಾಟ ಕೂಡ ವರ್ತಮಾನಕ್ಕೆ ಅಸಮತೋಲನ ತಂದಿದೆ. ಮನೋ ವೈದ್ಯರ ಸಲಹೆ ಕೂಡ ಪಡೆಯಿರಿ.

ಇಂದು ಹೆಚ್ಚು ಓದಿದ್ದು

Trending videos

Back to Top