CONNECT WITH US  

ಜಾತಕ ಫ‌ಲ

 ಲಾವಣ್ಯ ಶುಭಕರ್‌, ಮಾಜಾಳಿ
ನನಗೀಗ 23 ವರ್ಷಗಳು. ನನ್ನ ಜಾತಕ ಲಗತ್ತಿಸಿದ್ದೇನೆ. ಗುರೂಜಿ, ನನಗೆ ಈಗ ಐಎಎಸ್‌, ಕೆಎಎಸ್‌ ಮಾಡುವಾಸೆ. ಮನೆಯಲ್ಲಿ ಮದುವೆಗೆ ಒತ್ತಡ ತರುತ್ತಿದ್ದಾರೆ. ನನ್ನ ಜಾತಕದಲ್ಲಿ ಈ ಪರೀಕ್ಷೆಗಳನ್ನು ಪಾಸು ಮಾಡಬಹುದಾ? ಮುಂದೆ ಎರಡು ವರ್ಷಗಳ ನಂತರದಲ್ಲಿ ಮದುವೆಯಾದರೆ ಆಗಬಹುದಾ? ಜೀವನದಲ್ಲೀಗ ಯಾವ ಹೆಜ್ಜೆಯಿಂದಾಗಿ ಗೆಲುವು ಸಿಗಬಹುದು?

- ನಿಮ್ಮ ಜಾತಕದಲ್ಲೀಗ ಗುರುಬಲ ಸಮೃದ್ಧಿಯಾಗಿರುವುದರಿಂದ ಮದುವೆಯಾಗು ವುದು ಒಂದು ಬಗೆಯಲ್ಲಿ ಸೂಕ್ತ. ಬಾಳ ಸಂಗಾತಿಯ ಸ್ಥಳದ ಅಧಿಪತಿಯು ಬಲವಾಗಿದ್ದು ಅವನ ದಶಾಕಾಲವಾಗಿರುವುದು ಮದುವೆಗಿದು ಸೂಕ್ತ ಸಮಯ. ಮದುವೆಯಾಗಿಯೂ ಐಎಸ್‌, ಕೆಎಎಸ್‌ ಪರೀಕ್ಷೆಗಳನ್ನು ಎದುರಿಸಬಹುದು. ಒಮ್ಮೆ ಪಂಚಮ ಶನಿಕಾಟ ಶುರುಗೊಂಡರೆ ನಂತರದ ಎರಡೂವರೆ ವರ್ಷಗಳ ಕಾಲ ನಿಮ್ಮ ಜಾತಕದಲ್ಲಿ ಲಗ್ನಕ್ಕೆ ಅಡ್ಡಿ, ಆತಂಕಗಳು ಹುಟ್ಟುತ್ತ ಹೋಗುತ್ತವೆ. ಪ್ರತಿ ದಿನ ಶ್ರೀಲಲಿತ ತ್ರಿಶತ ಶತನಾಮಾವಳಿ ಓದಿ. ಅಭಿಯಂತ್ರಿತವಾದ ಪಚ್ಚೆಯನ್ನು ಬಲಗೈ ಕಿರುಬೆರಳಿಗೆ ಬಂಗಾರದಲ್ಲಿ ಧರಿಸಿ.

ಸಿದ್ಧಿವಿನಾಯಕ ಎಸ್‌ವಿ. ತಿಪಟೂರು

ನನ್ನ ಮತ್ತು ಪತ್ನಿಯ ಜಾತಕಗಳನ್ನು ಕಳುಹಿಸುತ್ತಿದ್ದೇನೆ. ಯಾಕೋ ಸರಿಯಾಗಿಯೇ ಇದ್ದ ದಾಂಪತ್ಯ ಇತ್ತೀಚೆಗೆ ಕೆಲ ಬಿರುಕುಗಳನ್ನು, ತಪ್ಪು ಅಭಿಪ್ರಾಯಗಳನ್ನೂ ಒಡಮೂಡಿಸುತ್ತಿದೆ. ತವರು ಮನೆಗೆ ಹೊರಟು ಬಿಡುತ್ತಾಳೆ. ಇನ್ನೂ ಮಕ್ಕಳಾಗಿಲ್ಲ. ಮದುವೆಯವೇಳೆ ನೀಡಿದ್ದ ವಜ್ರದ ಉಂಗುರವನ್ನು ಕಳಕೊಂಡಾಗ ಒಮ್ಮೆ ಸಿಟ್ಟು ಬಂದು ಏರು ಧ್ವನಿಯಲ್ಲಿ ಕೂಗಾಡಿದ್ದೆ. ಅವಳು ತನ್ನನ್ನು ಸಿಂಹಿಣಿಯಾಗಿಸಿಕೊಂಡಿದ್ದಾಳೆ. ಇದನ್ನು ಮತ್ತೆ ಅನ್ಯೋನ್ಯತೆಗೆ ಹೇಗೆ ತರುವುದು?

- ಶನೈಶ್ಚರನ ಕಾಟದ ಸಂದರ್ಭ ಇಬ್ಬರಿಗೂ ಬಲವಾಗಿದ್ದು ಬಿರುಗಾಳಿಗೆ ಉರುವಲು ನೀಡಿದೆ. ಸದ್ಯ ಮನದ ನಿರಾಳತೆಗೆ ಶನೈಶ್ಚರನ ಜೊತೆ ಚಂದ್ರನ ಕ್ಷೀಣತ್ವವೂ ಸೇರಿ ವಿವಾದದ ವಿಸ್ತಾರ ತೀವ್ರವಾಗಿದೆ. ನಿಮ್ಮ ಮನೆಯವರ ರಾಹು, ಕುಜ ಸಂಯೋಜನೆ ದಿಕ್ಕನ್ನು ತಪ್ಪಿಸುವ ಬಗೆಯದು. ಶರ್ಮದಾಯಿನಿ ಸೂಕ್ತವನ್ನು ಓದಿ. ಪಾರ್ವತಿಯ ಸಂತೃಪ್ತಿಯಿಂದ ಶುಕ್ರನ ಭಾಗ್ಯ ಸಂವೇದಕ ಕ್ರಿಯಾಶೀಲತೆಗೆ ಬಲವು ಒದಗಿ ಬರುತ್ತದೆ. ಪ್ರತಿದಿನ ಸುಂದರಕಾಂಡ ಪಠಿಸಿ. ಇನ್ನೊಂದು ವರ್ಷದ ಅವಧಿಯಲ್ಲಿ ಅಡೆತಡೆಯ ದುರ್ಭರತೆಗಳು ಮಾಯವಾಗಿ ಹೊಂದಾಣಿಕೆಗೆ ಗಟ್ಟಿತನ ಒದಗಲಿದೆ. ಸಂತಾನ ಗೋಪಾಲಕೃಷ್ಣ ಜಪವನ್ನು, ಶಿವ ಸಹಸ್ರ ನಾಮವನ್ನೂ ಓದಿ. ಸಂತಾನವೃದ್ಧಿಗೆ ಸಫ‌ಲತೆ ಸಾಧ್ಯ. 

 ಕುಮಾರಿ ಪದ್ಮ, ಹೂವಿನ ಹಡಗಲಿ

ನಾನೊಂದು ಎಂಎನ್‌ಸಿ ಕಂಪೆನಿಯಲ್ಲಿ ಐಟಿ ಉದ್ಯೋಗಿ. ನನಗೆ ಕೆಲ ಜರನ ಕುತಂತ್ರದಿಂದ ಜರ್ಮನಿಗೆ ಹೋಗುವ ವಿಚಾರ ವಿಳಂಬವಾಗುತ್ತಿದೆ. ನನ್ನ ಜಾತಕ ಕಳುಹಿಸಿದ್ದೇನೆ. ಜರ್ಮನಿಗೆ ಹೋಗುವ, ಇದರಿಂದಾಗಿ ತದನಂತರದ ಸಾಫ‌ಲ್ಯತೆ ಸಾಧ್ಯವೆ?

- ಜುಲೈ, ಆಗಸ್ಟ್‌ ತಿಂಗಳಿನ ಸಂದರ್ಭದಲ್ಲಿ ಕೆಲವು ಗ್ರಹಗಳ ಸ್ಥಾನಾನಂತರಗಳು ನಿಮ್ಮ ಕರ್ಮಸ್ಥಾನ (ಕೆಲಸದ ಸ್ಥಳ)ವನ್ನು ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಹೀಗಾಗಿ ನಿಮ್ಮ ಪ್ರಸ್ತುತದ ಯೋಜನೆಗಳಿಗೆ ಬರಲಿರುವ ವರ್ತಮಾನ ಒಳಿತನ್ನು ಸಂಪಾದಿಸಿಕೊಡಲಿದೆ. ಪ್ರತಿ ದಿನ ಶ್ರೀ ದತ್ತಾತ್ರೇಯ ಕವಚವನ್ನು ಪಠಿಸಿ. ಆನಂದದಾಯಕಿಯಾದ ರಾಜರಾಜೇಶ್ವರಿಯನ್ನು ಸುತ್ತಿಸಿ.


Trending videos

Back to Top