CONNECT WITH US  

ಜಾತಕ ಫ‌ಲ

ರವಿ ಕುಂಡಗಪ್ಪ, ಸವಡಿ
 ನನ್ನ ಜಾತಕ ಕಳುಹಿಸಿದ್ದೇನೆ. ಗುರೂಜಿಯವರೇ, ನನಗೆ ರಾಜಕೀಯದಲ್ಲಿ ಧುಮುಕುವ ಅಭಿಲಾಷೆ, ಮಹತ್ವಾಕಾಂಕ್ಷೆಗಳಿವೆ. ನಾನೀಗ ಸದ್ಯ ಸರಕಾರಿ ಕಚೇರಿಯಲ್ಲಿ ನೌಕರವಾಗಿದ್ದೇನೆ. ಕನಸು ನೆರವೇರಿತು. 
ನಿಮ್ಮ ಜಾತಕದಲ್ಲಿನ ಅಂಶಗಳು ರಾಜಕೀಯಕ್ಕೆ ಅನಾನುಕೂಲ ಎಂದು ಹೇಳಲಾಗದು. ಆದರೆ ಈ ರೀತಿಯ ಪ್ರಶ್ನೆಯನ್ನು ಹತ್ತು ವಾಕ್ಯಗಳಲ್ಲಿ ಬರೆದು ಮುಗಿಸುವುದು ಕಷ್ಟದ ಕೆಲಸ. ಒಬ್ಬ ರಾಜಕೀಯ ಗುರುವಿನ ಅವಶ್ಯಕತೆ ಇರುತ್ತದೆ. ನಿಮ್ಮ ಕೆಲಸವೇ ಸದ್ಯ ತಡೆಗೋಡೆಯಾಗಿ ನೀವು ಮತ್ತು ನಿಮ್ಮ ಮಹತ್ವಾಕಾಂಕ್ಷೆಯ ನಡುವೆ ನಿಂತಿದೆ. ಇದಕ್ಕೆ ಏನು ಉಪಾಯ ಮಾಡಲು ಸಾಧ್ಯವಿದೆ? ನಿಮ್ಮ ಕೆಲಸ ಬಿಡಬೇಕು ಎಂದು ಸಲಹೆ ನೀಡಲೇ? ನಿಮ್ಮ ಚಾತುರ್ಯದ ವಿಚಾರ, ಉತ್ತಮವಾದ ಶುಕ್ರಗ್ರಹ ಪ್ರಭಾವೀ ವಲಯವನ್ನು ತಲುಪಿಸುವ ಶಕ್ತಿ ಪಡೆದಿದೆ. ಆದರೆ..., ಕೆಲವು ವಿಚಾರಗಳು ಬಾಧೆಗೆ ಅವಕಾಶ ತರುವ ನಕಾರಾತ್ಮಕ ಅಂಶದ ಎಳೆ ಹೊಂದಿದ ಗ್ರಹಗಳು. ಮಹತ್ವಾಕಾಂಕ್ಷೆ ಹೊಂದಿರುವುದು ತಪ್ಪೇನಲ್ಲ. ದಡ ತಲುಪುವ ವಿಧಾನದಲ್ಲಿ ಚಾತುರ್ಯ, ತಾಳ್ಮೆ ಇರಲಿ. ಚಂದ್ರ ಸಹಸ್ರ ನಾಮಾವಳಿ ಓದಿ. 

 ರತ್ನಪ್ರಭಾ ಶಾಂತಯ್ಯ, ಆಲಮಟ್ಟಿ
  ಒತ್ತಡಗಳಿಗೆ ಬಲಿ ಬಿದ್ದು ಮದುವೆಯಾದೆ. ಒಬ್ಬರ ಬಗ್ಗೆ ಮನಸ್ಸಿತ್ತು. ಜಾತಿಯ ವಿಚಾರ ನಮ್ಮ ನಡುವಣ ಬಾಂಧ್ಯವನ್ನು ಪುಡಿಗೈಯ್ಯ ಬೇಕಾಯ್ತು. ಈಗ ನನ್ನ ಪತಿ ಒಲ್ಲದ ಗಂಡನಂತೆ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ನಿತ್ಯದ ಗೋಳಾಗಿದೆ. ಬಯಸಿದವರು ಈಗಲೂ ಬಾ ಎನ್ನುತ್ತಿದ್ದಾರೆ. ಏನು ಮಾಡಲಿ?
 ಮೂರೇ ಸಾಲುಗಳಲ್ಲಿ ಒಂದು ಕಾದಂಬರಿ ಇಟ್ಟಿದ್ದೀರಿ. ಈ ಸಮಸ್ಯೆ ನಿಮ್ಮದೇ ಮೊದಲಲ್ಲ. ನಿಮ್ಮದೇ ಕೊನೆಯದೂ ಅಲ್ಲ. ಒಂದು ನೆನಪಿಡಿ. ಋಣಾನುಬಂಧ ರೂಪೇಣವಾಗಿ ನಮ್ಮ ಸಂಸಾರ, ಮನೆ, ಸಂಪತ್ತು ಹಾಗೂ ಸಂಭ್ರಮಗಳು. ಹಾಗಾದರೆ ಋಣಾನುಬಂಧ ಎಂದರೆ ಏನು? ಇದು ಜಿಜ್ಞಾಸೆ ದೊಡ್ಡ ವಿಷಯ. ಆಗಬೇಕಾದದ್ದು ಆಗಿದೆ. ಇನ್ನೊಂದನ್ನು ಹಿಡಿಯಲು ಹೊರಟರೆ, ಬರೆದಿದ್ದರ ದಿನಾ ಬೇರೆ ಹೊಸತು ಸಿಗಲಾರದು. ಸನ್ನಿವೇಶ, ದೃಶ್ಯ ಹಾಗೂ ಕಲಾವಿದರು ಬೇರೆ. ಪ್ರಾರಬ್ದ ಅದೇ ಆಗಿರುತ್ತದೆ. ಉತ್ತಮವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ವಿಚಾರ ನಿಮ್ಮ ದೈವ ನಿಮ್ಮ ವರವನ್ನಾಗಿಸಿದೆ. ಈ ದಿಸೆಯತ್ತ ಪ್ರಯತ್ನ ಸಾಗಿಸಿ. ಪಾಲಿಗೆ ಬಂದದ್ದು ಪಂಚಾಮೃತ ಎಂಬುದು ನಾಣ್ನುಡಿ. ಮಣ್ಣಿನ ಬೆಳೆ ಬೇರೆ. ನಾಣ್ನುಡಿಯ ಅರ್ಥಗರ್ಭಿತ ನಿಕ್ಷೇಪ ಬೇರೆ. ಇದ್ದದು ಬ ಇಟ್ಟು ಇರದಿರುವುದನ್ನು ಕೊಡಲು ದೈವ ಸಹಾಯಕಾರಿಯಾಗಿಲ್ಲ. ದುಡುಕಬೇಡಿ. ನಿರಾಶರಾಗದಿರಿ. 

 ವೆಂಕಟರಮಣಪ್ಪ ದೇಸಾಯಿ, ರೋಣ
 ವಯಸ್ಸಿಗೆ ಬಂದ ಮಗಳು, ಕುಡಿದು ಮನೆಗೆ ಬರುತ್ತಿರುವ ಜವಾಬ್ದಾರಿ ( ಆದರೆ ಬೇಜವಾಬ್ದಾರಿಯಿಂದಲೇ ಇರುತ್ತಾನೆ) ಅರಿಯದ ಮಗ. ಬದುಕು ಸಾಕಾಗಿ ಹೋಗಿದೆ. ಮಕ್ಕಳ ಬದುಕು ಸರಿಹೋದೀತೆ? ನನ್ನ ಪತ್ನಿ ಹಾಗೂ ನನ್ನ, ನನ್ನ ಮಕ್ಕಳ ಜಾತಕ ಕಳುಹಿಸಿದ್ದೇನೆ. ಪರಿಹಾರ ತಿಳಿಸಿ.
 ದೈವ ಬಲವೆಂಬುದೊಂದು ದೀಪದ ಬೆಳಕು. ಕತ್ತಲನ್ನು ನಿವಾರಿಸಲು ಬೆಳಕು ಬೇಕು. ಕ್ಷೀಣವಾಗಿರುವ ಇಂದಿನ ಗೃಹಬಲ ಸಂವರ್ಧನೆಯ ದಾರಿಗೆ ಸಾಗಬೇಕಾಗಿದೆ. ನಿಮ್ಮ ಅಣ್ಣ ಅಥವಾ ಅಕ್ಕ ಇದ್ದಾರೆಯೇ ಇಲ್ಲಾ ಅಕ್ಕ, ಅಣ್ಣಂದಿರ ಸ್ವರೂಪದ ಬಂಧು ವಲಯವನ್ನು ಮುಖ್ಯವಾಗಿಸಿಕೊಳ್ಳಿ. ನಿಮ್ಮ ಪಾಲಿಗೆ ಇನ್ನೂ ಹತ್ತುತಿಂಗಳಲ್ಲಿ ಶನೈಶ್ಚರ ಸ್ವಾಮಿಯ ಕಾಟ ಮುಗಿಯುತ್ತದೆ. ಮಗನ ರಾಹು ದಶಾ ಅಪಾಯದಕಾಲವಾಗಿದೆ. ಮಗಳ ಮದುವೆ ಸಾಧ್ಯವಾಗುತ್ತದೆ. ಬರುವ ಆಗಸ್ಟ್‌ ಕೊನೆಯ ಹೊತ್ತಿಗೆ ಅದರೊಳಗೇ ಕಂಕಣಬಲ ಲಭ್ಯವಿದೆ. ಹಿರಿಯರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನೀವು ದಂಪತಿ ವಿರೋಧ, ಸಿಡುಕು, ಅಸಹನೆ ಬಿಡಬೇಕು. ಬರುವ ದಿನಗಳು ಒಳತಿಗಾಗಿನ ದಾರಿ ತೋರುವಂಥವು. ಮಗನನ್ನು  ಹಿರಿಯರು ಮೂಲಕ ನಿಯಂತ್ರಿಸುತ್ತದೆ. 


Trending videos

Back to Top