CONNECT WITH US  

ಜಾತಕ ಫ‌ಲ

  ಶಿವಲಿಂಗಪ್ಪ ಹೆಗ್ರಿ, ಹುಬ್ಬಳ್ಳಿ

  ಸ್ವಾಮಿ, ನಮ್ಮ ಮಗ ಓದಲೆಂದು ಅಮೇರಿಕಾಕ್ಕೆ ಹೋಗಿದ್ದಾಗ ಒಬ್ಬಳು ಹೆಣ್ಣು ಮಗಳ ಸಂಬಂಧವಾಗಿ ಬಹಳ ತಾಪತ್ರಯ ಪಡಬೇಕಾಗಿ ಬಂತು. ನಾವು ಏನೆಲ್ಲಾ ವಿಚಾರಿಸಲಾಗಿ ತನ್ನದೇನೂ ತಪ್ಪಿಲ್ಲಾ ಎಂಬುದಾಗಿ ಹೇಳಿ ಕಣ್ಣೀರಿಡುತ್ತಿದ್ದಾನೆ. ಕೆಲವು ವಿಚಾರಗಳು ಕಾಯ್ದೆಯ ವಿಷಯದಲ್ಲಿ ಕಗ್ಗಾಂಟಾಗಿ ಕಾಡುತ್ತಿವೆ. ಈ ಪ್ರಕರಣ ಇಲ್ಲಿಗೇ ಮುಗಿದೀತೆ? ಇನ್ನಿಷ್ಟು ವಿಸ್ತಾರವಾಗಿ ತೊಡಕಾಗಬಹುದೆ?

  ಮೇಲನೋಟದ ವಿಚಾರ ಎಂದರೆ ಸಾಡೇಸಾತಿ ಕಾಟ ನಿಮ್ಮ ಮಗನನ್ನು ಸುತ್ತಿಕೊಂಡಿದೆ. ಜೊತೆಗೆ ಸ್ತ್ರೀ ವಿಚಾರದಲ್ಲಿ ರಾಹು ದೋಷ ಸ್ಥಿತವಾಗಿದೆ. ರಾಹು ದಶಾ ಕಾಲವೇ ನಡೆಯುತ್ತಿದೆ. ಆದರೆ ನಿಮ್ಮ ಪುತ್ರನ ಭಾಗ್ಯದ ಭಾವಕ್ಕೆ ಪರಿಶುದ್ಧನಾದ ಗುರುವು ಸಂಯೋಜನೆಗೊಂಡಿರುವುದು ನಿಮ್ಮ ಪುಣ್ಯದ ಫ‌ಲವನ್ನು ಮಗನಿಗೆ ಒದಗಿಸಿಕೊಡುತ್ತದೆ. ನೀವು ನೇರವಾಗಿ ಕೇಳಿರದಿದ್ದರೂ ಸ್ಪಷ್ಟವಾಗಿ ಹೇಳಬೇಕೆಂದರೆ ಬಂಧನವು ಸಾಧ್ಯವಾಗುವುದಿಲ್ಲ. ಚಂದ್ರ ಪ್ರಭೆಯ ವಿಚಾರದಲ್ಲಿ ಶನೈಶ್ಚರನ ಬಾಧೆ ಇದ್ದರೂ, ಉತ್ಛನಾದ ರಾಹುವು ಪ್ರಸ್ತುತದಲ್ಲಿ ಕಿರಿಕಿರಿಯ ನಡುವೆ ನರಳಿಸಿದರೂ, ಪ್ರಕರಣದಿಂದ ಹೊರ ಬರುತ್ತಾನೆ. ಶ್ರೀ ಕಬಂಧ ಭೈರವ ಸೂಕ್ತಗಳನ್ನು , ಮೂಲ ಬೀಜಾಕ್ಷರ ಮಂತ್ರಗಳನ್ನು ಓದಲು ತಿಳಿಸಿ. ಒಳ್ಳೆಯದಾಗಲಿದೆ. 
 
ರುದ್ರಾಣಿ ಕುಮಾರ್‌, ಚಿತ್ರದುರ್ಗ

  ಮಗಳ ಜಾತಕ ಕಳಿಸಿದ್ದೇನೆ. ಗುರೂಜಿ ಗಿಣಿಯಂತಿದ್ದ ಮಗಳನ್ನು ಕೆಟ್ಟದೊಂದು ಗಿಡುಗನ ಕೈಗೆ ಒಪ್ಪಿಸಿದಂತೆ ಈಗ ಎರಡು ವರ್ಷಗಳ ಹಿಂದೆ ಮದುವೆ ಮಾಡಿದೆವು. ಮಗುವೂ ಆಗಿದೆ. ಮುಂಬಯಿಗೆ ನಾವು ಹೋದಾಗಲೇ ವಿಷಯ ತಿಳಿದದ್ದು. ಆಫೀಸಿನಲ್ಲೇ ಓರ್ವಳ ಜೊತೆ ಅಳಿಯನಿಗೆ ಸಂಬಂಧ ಇದೆಯೆಂಬ ವಿಷಯ. ಡೈವರ್ಸಗೆ ಯೋಚನೆ ನಡೆದಿದೆ. ತಾನು ತಪ್ಪೆಸಗಿಲ್ಲ ಎಂದೇ ಸಾಧಿಸುತ್ತಿದ್ದಾನೆ. ಡೈವರ್ಸ್‌ಗೆ ಮುಂದಾಗುತ್ತಿಲ್ಲ. ಆದರೆ ಈತ ಸರಿ ಇಲ್ಲ ಎಂಬುದು ನಿಜ.  ಪರಿಹಾರ ಇದೆಯೇ?

 ಕೆಲವು ವಿಚಾರಗಳು ಕಾಳಿYಚ್ಚಿನಂತೆ ನಮ್ಮನ್ನು ಸರ್‌ನೆ ಸುತ್ತಿ ಸುಟ್ಟು ಕರಕಲಾಗಿಸುತ್ತವೆ. ಇದನ್ನೇ ಪ್ರಾರಬ್ಧ ಎಂದು ಕರೆಯಬಹುದು. ನೀವು ಅಳಿಯನ ಜಾತಕ ಕಳಿಸಿಲ್ಲ. ಮಗಳ ಜಾತಕದಲ್ಲಿ ಬಾಳ ಸಂಗಾತಿಯ ಸ್ಥಳ ಸ್ವಲ್ಪ ದೌರ್ಬಲ್ಯಕ್ಕೆ ಒಳಗಾಗಿದೆ. ಅಳಿಯನು ತನ್ನ ತಪ್ಪನ್ನು ಅರಿತು ಸಂಪನ್ನನಾಗುವ ವಿಚಾರ ಸಾಧ್ಯವಿದ್ದರೆ, ಅದೃಷ್ಟದ ಮೇಲೆ ನಂಬಿಗೆ ಇರಿಸಿ ಅದಕ್ಕೆ ಮುಂದಾಗಿ. ಉರಿಯನ್ನು ಬೀರುವ ದುರ್ವರ್ತನೆ ಬದಲಾಗಿದ್ದರೆ ಡೈವರ್ಸಿಗೆ ಮುಂದುವರಿಯಿರಿ. ಡೈವರ್ಸ್‌ ಸಿಕ್ಕಾಗ ಉತ್ತಮವಾದ ಜಾತಕ ಹೊಂದಾಣಿಕೆ ನಡೆಸಿ ಮರು ವಿವಾಹಕ್ಕೆ ಮಗಳನ್ನು ಸಜ್ಜು ಮಾಡಿ. ಪ್ರತಿ ದಿನ ಶ್ರೀ ಶಿವಾಷ್ಟಕವನ್ನು, ಸಂಯುಕ್ತ ಶ್ಯಾಮಲಾಷ್ಟಕವನ್ನೂ ಮಗಳು ಓದಲಿ. ಬಾಳ ಸಂಗಾತಿಯ ವಿಚಾರದಲ್ಲಿ ಸಂಪನ್ನತೆಗೆ ಇವು ದಾರಿ ಮಾಡಲು ಸಾಧ್ಯ.
 
ಉಮಾದೇವಿ ಶಾಸ್ತ್ರೀ , ಬೆಂಗಳೂರು
 
ನನ್ನ ಮಗಳು ಒಳ್ಳೆಯ ಕೆಲಸದಲ್ಲಿದ್ದಾಳೆ. ತುಂಬಾ ಭಯಸ್ಥೆ. ಇವಳ ಆಫೀಸಿನಲ್ಲಿ ಉಳಿದ ಸಹ ಕೆಲಸಗಾರರು ಇವಳನ್ನು ಭಯದಲ್ಲಿಯೇ ಇಟ್ಟು ಸತಾಯಿಸುತ್ತಾರೆ. ಆದರೆ ಸಹಜವಾಗಿರುವವರಂತೆ ನಟಿಸುತ್ತಾರೆ. ಕೆಲಸ ಬಿಡುತ್ತಿದ್ದೇನೆ ಎನ್ನುತ್ತಿದ್ದಾಳೆ. ಪರಿಹಾರ ಇದೆಯೇ?

 ಗಡಿಬಿಡಿ ಮಾಡಬೇಡಿ. ಜುಲೈನಲ್ಲಿ ಗುರುಬಲವು ಒದಗಿ ಬರುತ್ತದೆ. ಆಗ ತಾನಾಗಿಯೇ ಕೆಲಸದ ಸ್ಥಳದಲ್ಲಿ ಬದಲಾವಣೆ, ಮಾನಸಿಕ ನೆಮ್ಮದಿ ಸಾಧ್ಯ. ಒಂದು ಕ್ಯಾರಟರ್‌ ಪಚ್ಚೆ ಧರಿಸಲಿ. ಶ್ರೀದೇವಿ, ಐಂದ್ರಿತಾ ಸ್ತೋತ್ರಗಳನ್ನು ಪಠಿಸಲಿ. ಪ್ರಸ್ತುತ ಬಿಕ್ಕಟ್ಟು ದೂರವಾಗಲಿದೆ. 

Trending videos

Back to Top