CONNECT WITH US  

ಜಾತಕಫ‌ಲ

  ಅಮರೇಶ ಹೂಹಳ್ಳಿ, ಚಿಕ್ಕೋಡಿ

   ಗುರೂಜಿ ಈಗ ನನ್ನ ಮಗನ ಜಾತಕ ಕಳುಹಿಸುತ್ತಿದ್ದೇನೆ. ಉತ್ತಮವಾಗಿಯೇ ಪರೀಕ್ಷೆ ಮುಗಿಸಿದ್ದಾನೆ. ಶೇಕಡಾ 95ಕ್ಕೂ ಹೆಚ್ಚಿನ ಅಂಕಗಳು ಬರುತ್ತವೆಂಬುದು ಅವನ ಅಭಿಪ್ರಾಯ. ಓದುವುದರಲ್ಲಿ ಮುಂದಿದ್ದು ಜಾಣನೆನಿಸಿದ್ದಾನೆ. ಡಾಕ್ಟರ್‌ ಆಗುವ ಆಸೆ. ಆತ ಮೆಡಿಕಲ್‌ಗೆ ಪ್ರಯತ್ನಿಸಿದರೆ ಸಾಫ‌ಲ್ಯತೆ ಬಂದೀತೆ? ಯಾವ ಹರಳನ್ನು ಧರಿಸಿದರೆ ಸೂಕ್ತ? ದಯಮಾಡಿ ತಿಳಿಸಿ. 

    ನಿಮ್ಮ ಮಗನ ಜಾತಕದಲ್ಲಿನ ಕೆಲವು ಗ್ರಹಗಳು ಆಂತರ್ಯದ ಬಲಶಾಲಿತ್ವದಿಂದಾಗಿ ಜೀವನದ ವಿಭಿನ್ನ ಬಗೆಯ ಯಶಸ್ಸಿಗೆ ಕಾರಣ ರೂಪಿಸುವಂಥವು. ಮೆಡಿಕಲ್‌ಗೆ ಪ್ರಯತ್ನಿಸಲಿ. ಇವನು ಈಗ ಉತ್ತಮ ದರ್ಜೆಯ 3 ಕ್ಯಾರಟ್‌ ಕನಕ ಪುಷ್ಯರಾಗವನ್ನು ಧರಿಸುವುದು ಸೂಕ್ತ. ಜಾತಕದ ಅನೇಕ ಅಂಶಗಳನ್ನು ಗಮನಿಸಿದರೆ ಕನಕ ಪುಷ್ಯರಾಗ ಧಾರಣೆ ವ್ಯಕ್ತಿತ್ವವವನ್ನು ಪ್ರಜ್ವಲಿಸುವಲ್ಲಿ ಸಹಾಯಕ. ಹಾಗೆಯೇ 2017 ಆಗಸ್ಟ್‌ 25ರಿಂದ 2024 ಆಗಸ್ಟ್‌ 24ರವರೆಗೆ ವೈಢೂರ್ಯವನ್ನು ಧರಿಸಬೇಕು. ಗಣಪತಿಯ ಆರಾಧನೆಯಿಂದ ವೈಢೂರ್ಯದ ಸಿದ್ಧಿಗೆ ಭಿನ್ನವಾದ ಆಯಾಮ ದೊರೆಯಲಿದೆ. 2024 ಆಗಸ್ಟ್‌ 24ರ ನಂತರ ವೈಢೂರ್ಯವನ್ನು ಧರಿಸಬಾರದು. ಈ ವಿಚಾರವನ್ನು ಮರೆಯದಿರಿ. 

 ಗಿರಿಲಕ್ಷ್ಮೀ ಪ್ರಭಾಕರ, ಮೈಸೂರು

  ನನಗೆ ದೇವಿಯ ಆರಾಧನೆ ಎಂದರೆ ಇಷ್ಟದ ವಿಚಾರ. ಆದರೆ ದೇವಿಯ ಎದುರು ವಿಚಿತ್ರ ರೀತಿಯ ಶಕ್ತಿಯ ಸಂಚಾರ ಒಗ್ಗಡಿ ಬಂದಂತಾಗಿ ದೇಹ ಅದರುತ್ತದೆ. ಇದು ಶುಭ ಸೂಚನೆಯೇ, ಇಲ್ಲಾ ದೇವಿಗೆ ನನ್ನ ಮೇಲೆ ಯಾವುದೇ ರೀತಿಯ ಅಸಡ್ಡೆ ಇದೆಯೋ? ನನದೆ ಇದು ಕೆಲವು ಸಲ ಮುಜುಗರ ತರುತ್ತದೆ. ಧನ್ಯತೆಯನ್ನೂ ತರುತ್ತದೆ. ಜಾತಕ ಕಳಿಸಿದ್ದೇನೆ. ಇಂಥ ಶಕ್ತಿ ಸಂಚಯವಾದ ಅನುಭವ ಆದಾಗ ಕೆಲ ದಿನಗಳಲ್ಲಿ ಏನಾದರೊಂದು ಲಾಭ ಬರುತ್ತದೆ. ಇಂಥ ಶಕ್ತಿ ಸಂಚಾರ ಒಡಮೂಡದೇ ದೇವಿಯ ಎದುರು ಸಾಮಾನ್ಯ ಭಕ್ತೆಯಾಗುವ ಕ್ರಮ ತಿಳಿಸುವಿರಾ?

 ನಿಮ್ಮ ಪ್ರಶ್ನೆ ಹಲವು ರೀತಿಯ ಪ್ರಶ್ನೆಗಳನ್ನು ಧ್ವನಿಸುತ್ತಿದೆ. ನಿಮ್ಮ ಹುಟ್ಟಿದ ಕ್ಷಣದ ಅಧಿಪತಿಯಾದ ಮಂಗಳನ ಜೊತೆಗ ಗುರು ಹಾಗೂ ರಾಹುಗಳ ಸಂಯೋಜನೆ ಇದ್ದು, ಶುಕ್ರ ಚಂದ್ರರು ಸಹಜ ಭಾವ (ನಾಲ್ಕನೆಯ ಮನೆಯಲ್ಲಿ ಇಬ್ಬರೂ ದಿಗ್ಬಲರು)ದಲ್ಲಿದ್ದಾರೆ. ಒಂದು ವಿಷಯ ನೆನಪಿಡಿ. ಈ ಜಗತ್ತು ಅನೇಕಾನೇಕ ವಿಸ್ಮಯಗಳ ಆಗರ. ಈ ನಿಮ್ಮ ಅನುಭವವನ್ನು ದೇವಿಯ ಅಸಡ್ಡೆ ಎಂಬುದಾಗಿ ಗ್ರಹಿಸದಿರಿ. ಅಸಡ್ಡೆಯಾದರೆ ಈ ಅನುಭವದ ನಂತರ ಕೆಲ ದಿನಗಳಲ್ಲಿ ಲಾಭ ಸಿಗುತ್ತಿರಲಿಲ್ಲ. ಆದರೆ ಇಷ್ಟ ಸಿದ್ಧಿ, ದೇವಿಯ ಸಿದ್ಧಿ ಎರಡೂ ಒಗ್ಗೂಡಿರಲು ದೇವಿಯ ಎದುರು ಸಹಜವಾಗಿರಿ. ನಿಮ್ಮೊಳಗಿನವನ್ನು ಯೋಚಿಸದೆ, ದೇವಿಯನ್ನು ಹೊರಗಿನಿಂದಲೇ ಕಾಣುವ ಮನೋಸಂಕಲ್ಪ ಇರಲಿ. ನಿಮ್ಮ ಇಚ್ಛೆ ಗೆಲುತ್ತದೆ. 

  ಪ್ರಕಾಶ್‌ ಎಚ್‌. ವಿ. ಶೃಂಗೇರಿ

 ನನಗೆ ವಿಪರೀತವಾದ ತಲೆ ನೋವು ಆಗಾಗ ಬರುತ್ತಿರುತ್ತದೆ. ಬಂದಾಗ ನಾನು ಮನುಷ್ಯನೇ ಆಗಿರುವುದಿಲ್ಲ. ಜಾತಕ ಕಳಿಸಿದ್ದೇನೆ. ಪರಿಹಾರ ತಿಳಿಸಿ ?

  ತನುಭಾವದಲ್ಲಿ ರವಿ ಇದ್ದು ಶನೈಶ್ಚರನ ದೃಷ್ಟಿ ಇದೆ. ಚತುರ್ಥ ಭಾವದಿಂದ ಕುಜನು ಶನಿಯನ್ನು ದೃಷ್ಟಿಸಿದ್ದಾನೆ. ವೈದ್ಯರವನ್ನು ಕಾಣುವುದು ಸೂಕ್ತ. ಆದಿತ್ಯ ಹೃದಯ, ಶನೈಶ್ಚರ ಭಾಗ್ಯ ದರ್ಪಣ, ಮಂಗಳ ಚಂಡಿಕಾ ಧ್ಯಾನ ತಂತ್ರ ಪಠಿಸಿ. ನಿಮ್ಮ ದೈಹಿಕ ಕಿರಿಕಿರಿಗೆ ಪರಿಹಾರ ತರುವಲ್ಲಿ ಇವು ಸಂಜೀವಿನಿಯಾಗಲಿದೆ. 

Trending videos

Back to Top