CONNECT WITH US  

ಜಾತಕ ಫ‌ಲ

ನಾಗವೇಣಿ ಜಾರಾದಕರ್‌, ಮುಧೋಳ

  ಜಾತಕದ ಪ್ರತಿ ಇರಿಸಿದ್ದೇನೆ. ಮನೆಯವರು ತೀರಿಕೊಂಡರು ಒಂದು ವರ್ಷದ ಹಿಂದೆ. ಮಗುವಿಗಾಗಿ ಬದುಕಿ ಬಾಳಬೇಕಾಗಿದೆ. ನನ್ನ ಆರೋಗ್ಯ, ಉದ್ಯೋಗ, ಪರ ಊರಲ್ಲಿನ ನಮ್ಮ ಆಸ್ತಿ ವಿಚಾರ, ಮುಂದಿನ ಜೀವನದ ನಿರಾಳತೆ ಹೇಗೆ, ಎತ್ತ, ಎಂದು ಎಂಬುದನ್ನು ತಿಳಿಸುತ್ತೀರಾ? ಹತ್ತು ವರ್ಷಗಳಿಗೂ ಮಿಕ್ಕಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಮುಕ್ತಿ ಇದೆಯೇ?

  ಬದುಕಿನ ಪ್ರತಿ ದಿನವೂ ನಿರೀಕ್ಷೆಯಿಂದಲೇ ಗೆಲ್ಲಬೇಕು. ಮನೆಯವರು ತೀರಿಕೊಂಡರು ಎಂಬು ಸುದ್ದಿ ಬೇಸರದ ಸಂಗತಿಯೇ. ಮರಣದ ಅಧಿಪತಿಗೂ, ಬಾಳ ಸಂಗಾತಿಯ ಸ್ಥಳದ ಅಧಿಪತಿಗೂ ಉಂಟಾದ ಪರಿವರ್ತನೆ ಯೋಗ ಅನಪೇಕ್ಷಿತವಾದುದನ್ನು ಸಂಭವಿಸುವಂತೆ ಮಾಡಿದೆ. ಹಿಂಜರಿಯಬೇಡಿ. ಮಗಳಿಂದ ಒಳತಿಗೆ ದಾರಿ ಇದೆ. ಪೂರ್ವ ಪುಣ್ಯ ಸ್ಥಾನಕ್ಕೆ ಒದಗಿ ಬರುತ್ತಿರುವ ಗುರುದಶಾ ಉತ್ತಮಸ್ಥಿತಿಗತಿಗಳನ್ನು ಒದಗಿಸಿ ಕೊಡಬೇಕಿದೆ. ನಿಮ್ಮ ಬಟ್ಟೆಯ ವ್ಯಾಪಾರಕ್ಕೆ ಸಿದ್ಧಿ ಇದೆ. ಪರವೂರಿನ ಆಸ್ತಿಯು ಏನಾಗುವುದೋ ಎಂಬ ಭಯಬೇಡ. ಆರೋಗ್ಯದ ವಿಚಾರದಲ್ಲಿ ತುಸು ಎಚ್ಚರವಿರಬೇಕು. ಧೂಳು, ಅತಿ ಶೀತಲವಾದ ಫ್ರಿಡ್ಜ್ ಸರಕು, ರಾತ್ರಿಯ ಹೊತ್ತಿನ ಮೊಸರು ವರ್ಜಿಸಿ. ಶಮೀಪುಷ್ಪದಿಂದ ಮನೆ ದೇವರನ್ನು ಆರಾಧಿಸಿ. ಛೇಡಿಸಿದ ತುಳಸೀ ಎಲೆಗಳನ್ನು ಹಿಂದಿನ ದಿನದ ರಾತ್ರಿ ಶುದ್ಧ ತಾಮ್ರದ ಬಿಂದಿಗೆಯಲ್ಲಿಟ್ಟ ನೀರಲ್ಲಿ ಇರಿಸಿ. ಮಾರನೆಯ ದಿನ ಹನಿಹನಿಯಾಗಿ ನಿದ್ರೆಯಿಂದೆದ್ದ ಒಂಗು ಘಂಟೆಯಲ್ಲಿ ಸೇವಿಸಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ. ಶ್ರೀ ದುರ್ಗಾ ಸ್ತುತಿಯನ್ನು ಅವಕಾಶ ಮಾಡಿಕೊಂಡು ಪ್ರತಿ ದಿನ ಪಠಿಸಿ. ದುರ್ಗಾಷ್ಟಕ ಸರಳವಾಗಿದೆ. ಓದಿ. 

 ಇಂದೂಧರ ಶಾಮಣ್ಣ, ಬೆಳಗಾವಿ

  ತುಂದೆ ತಾಯಿ ಒತ್ತಡದಿಂದ ಮದುವೆಯಾದೆ. ನನಗೀಗ 27ವರ್ಷ ವಯಸ್ಸು. ಮದುವೆಯಾಗಿ ವರ್ಷ ಕಳೆದರೂ ಕೆಲಸ ಸಿಕ್ಕಿಲ್ಲ. ಹಣದ ಸಮಸ್ಯೆ ತುಂಬಾ ಇದೆ. ಏನೋ ಒಂದು ರೀತಿಯ ಕೀಳರಿಮೆ ಬೆಳೆದಿದೆ. ಈ ಸಂಕಟಗಳಿಂದ ಹೊರ ಬರಬಲ್ಲನೆ?

  ಕೀಳರಿಮೆಗೆ ಅವಕಾಶ ನೀಡಬೇಡಿ. ನವಗ್ರಹ ಸ್ತೋತ್ರ ಪಠಿಸಿ. ಪ್ರತಿ ದಿನವೂ ಸೂರ್ಯಸ್ತದ ನಂತರ ಕೈಕಾಲು ಮುಖ ತೊಳೆದು ಬಿಲ್ವಾಷ್ಟಕವನ್ನು ಪಠಿಸಿ. ಪ್ರತಿ ಸೋಮವಾರ ಹಾಗೂ ಪ್ರತಿ ಮಾಸದ ಎರಡೂ ಪ್ರದೋಷದ ದಿನಗಳಂದು ಲಿಂಗಾಷ್ಟಕಂ ಮಂತ್ರ ಮೂರು ಆವರ್ತನಗಳಲ್ಲಿ ಓದಿ. ಈ ದಿನದಂದು ಸಾಯಂಕಾಲ ಸ್ನಾನ ಪೂರೈಸಿಯೇ ಲಿಂಗಾಷ್ಟಕವನ್ನು ಪಠಿಸಿ. ನಿಮ್ಮ ಗೋಜಲುಗಳಿಂದ ನಿಶ್ಚಿತವಾಗಿ ಹೊರಬರುತ್ತೀರಿ. ಅಷ್ಟ ದರಿದ್ರ ವಿನಾಶಕ್ಕೆ ನಿಮ್ಮ ಧ್ಯಾನ, ಪಠಣ, ಭಕ್ತಿ ಸುತ್ತಿಗಳು ದಾರಿ ಮಾಡಿಕೊಡಲಿವೆ. 

  ವಿಶ್ವೇಶ್ವರ ಶೆಟ್ಟಿ, ಮಂಗಳೂರು

  ಏನೋ ಅಚಾತುರ್ಯದಿಂದ ನನ್ನಿಂದ ಒಂದು ಬೆಕ್ಕಿನ ಸಾವು ಸಂಭವಿಸಿತು. ಬೇಕಂತಲೆ ಮಾಡಿದ್ದಲ್ಲ. ಕಳ್ಳತನದಿಂದ ಹಾಲನ್ನು ಕುಡಿಯಲು ಬರುತ್ತಿದ್ದ ಬೆಕ್ಕಿನತ್ತ ದೊಣ್ಣೆಯೊಂದನ್ನು ಎಸೆದದ್ದೇ ಬೆಕ್ಕಿಗೆ ಮುಳುವಾಯ್ತು. ಬೆಕ್ಕನ್ನು ಕೊಲ್ಲುವುದು ಮಹಾಪಾಪವಂತೆ ಹೌದೆ? ಪರಿಹಾರ ಇದ್ದರೆ ತಿಳಿಸಿ. ಏನಾದರೂ ದಾನ ಮಾಡಬೇಕೆ? ಪಾಪ ಪ್ರಜ್ಞೆಯಿಂದ ಬಸವಳಿದಿದ್ದೇನೆ. 

  ಚಿಕ್ಕದೊಂದು ಬೆಳ್ಳಿ (ಸಾಮಾನ್ಯ ಅರ್ಧಗ್ರಾಂ)ಯನ್ನು ಹಾಲಲ್ಲಿರಿಸಿ, ಹಾಲನ್ನು ಕುದಿಸಿ ಸಮುದ್ರಕ್ಕೆ ಚೆಲ್ಲಿ ಬನ್ನಿ. ಬೆಕ್ಕು ಏಳೇಳು ಜನ್ಮಗಳ ಸಂಕೇತ. 

Trending videos

Back to Top