CONNECT WITH US  

​ಜಾತಕ ಫ‌ಲ

  ಸಣ್ಣ ನಿಂಗಪ್ಪಣ್ಣ, ಸಂಜೇಹಳ್ಳಿ

  ಸ್ವಾಮಿ, ನನ್ನ ತಂದೆಯ ಜಾತಕ ಕಳಿಸುತ್ತಿದ್ದೇನೆ. ಗ್ರಹಚಾರ ವಶಾತ್‌ ಬಾಯಿ ಕ್ಯಾನ್ಸರ್‌ ಪೀಡಿತರಾಗಿ ಬಳಲಿದವರಿಗೆ ಚಿಕಿತ್ಸೆ ಕೊಡಿಸಿ ಗುಣಮುಖರಾಗಿದ್ದರು. ಆದರೆ ಈಗ ಲಂಗ್ಸ್‌ ಕ್ಯಾನ್ಸರ್‌ ಸೂಚನೆಗಳು ಕಾಣಿಸಿವೆ. ಚಿಕಿತ್ಸೆಗೆ ದೇಹ ಒಗ್ಗುತ್ತಿಲ್ಲ. ಅಪಾಯಕಾರಿ ಕ್ಯಾನ್ಸರ್‌ ತಡೆಯಲು ಪರಿಹಾರಗಳೇನು? ದಿಕ್ಕೇ ತೋಚದಾಗಿದೆ. ಇವರಿಗಿನ್ನೂ 54 ವಯಸ್ಸು.

  ದುರಾದೃಷ್ಟವಶಾತ್‌ ಶನಿಕಾಟದ ವೇಳೆ ಈ ತೊಂದರೆ ಸಂಭವಿಸಿದೆ. ಅಷ್ಟಮದಲ್ಲಿ ಇರುವ ದುಷ್ಟ ರಾಹುವಿನ ದಶಾಕಾಲ ನಡೆಯುತ್ತಿದೆ. ಅಷ್ಟಮ ಶನಿಕಾಟ, ಅಷ್ಟಮದ ರಾಹು ದಶಾ ಸಧ್ಯ ನಿಮ್ಮ ತಂದೆಯವರನ್ನು ತೊಂದರೆಗೆ ತಳ್ಳಿದೆ. ಇಷ್ಟಾದರೂ ಆಯುಷ್ಯಕಾರಕನಾದ ಶನೈಶ್ಚರನು ಜೀವ ಸಂಬಂಧೀ ವಿಚಾರದಲ್ಲಿ ಬಲಾಡ್ಯತೆ ಪಡೆದು ಜನ್ಮ ಕಾಲಕ್ಕೆ ತನ್ನ ಸ್ವಂತ ಮನೆಯಲ್ಲೇ ಇದ್ದು ಲಗ್ನದ ಅಧಿಪತಿಯಾಗಿ ಈಗ ವರ್ತಮಾನದಲ್ಲಿ ಲಾಭದಲ್ಲಿರುವುದು ಬೆಳಕು ಇದೆ ಎಂಬುದನ್ನು ಸೂಚಿಸುತ್ತಿದೆ. ಮುಳುಗುವವನಿಗೆ ಹುಲ್ಲು ಕಡ್ಡಿ ಆಸಗೆ ಎಂಬ ಮಾತು ಅನುಭವದ ದಿವ್ಯತೆಯಲ್ಲೇ ಮೂಡಿ ಬಂದ ಮಾತು. ಜುಲೈ 19ರ ಹಾಗೇ ಗುರು ಬಲ ಕೂಡ ಒದಗಿ ಬರುತ್ತದೆ. ನಿಮ್ಮ ತಾಯಿಯವರ ಹಾಗೂ ನಿಮ್ಮ ಜಾತಕಗಳೂ ಇದ್ದರಿ ಒಳಿತಿತ್ತು. ಆದರೆ ಶುಕ್ರ ಗ್ರಹದ ಪ್ರಭಾವಕಾರಿ ದೃಷ್ಟಿ ಶನೈಶ್ಚರನ ಮೇಲಿರುವುದು ಒಳ್ಳೆಯದೇ ಆಗಿದೆ. ಮೃತ್ಯುಂಜಯ ಜಪ, ಶಿವ ಪಂಚಾಕ್ಷರಿ ಜಪ, ಧನ್ವಂತರಿ ಅಷ್ಟೋತ್ತರ ಪಠಿಸಲಿ, ಶನೈಶ್ಚರನಲ್ಲಿ ಇದ್ದಿರುವ ಬೆಳಕು ಕ್ಯಾನ್ಸರನ್ನು ಓಡಿಸುವ ಶಕ್ತಿ ಪಡೆಯಲು ಸಾಧ್ಯ. 

   ಜಯಸುಧಾ ಮಾಯಪ್ಪ, ಭದ್ರಾವತಿ

  ನನ್ನ ಮತ್ತು ಪತಿ, ಹಾಗೂ ಮಗನ ಜಾತಕ ಕಳಿಸಿದ್ದೇನೆ. ಈಗ ಮಗನದೇ ಸಮಸ್ಯೆಯಾಗಿದೆ. ಶೇ.70 ಅಂಕಗಳನ್ನು ಪಡೆದು ಪಾಸಾಗುತ್ತಿದ್ದಾನೆ. ಈ ಕಾಲದಲ್ಲಿ ಶೇ. 70 ಅಂಕ ಯಾವ ಲೆಕ್ಕ? ನಮಗೆಲ್ಲಾ ಇವನದೇ ಚಿಂತೆಯಾಗಿದೆ. ಮುಂದಿನ ಭವಿಷ್ಯ ಹೇಗಿದೆ? ತಾಯಿಯಾಗಿ ತಲ್ಲಣ. ತಪ್ಪು ತಿಳಿಯದೇ ದಾರಿ ಹೇಳಿ.

  ಶೇ. 70 ಅಂಕ ಬರುತ್ತಿದೆ ಎಂದು ಸಂತೋಷ ಪಡಿ. ಆಧುನಿಕ ಉಪಕರಣಗಳ}ು° ಮೃದುವಾದ ಬೋಧನೆಯೊಂದಿಗೆ ಮಗನಿಂದ ದೂರ ಇರಿಸಿ. ಕುಜಶುಕ್ರ ಯುತಿ ಇದೆ. ಮನೋ ಮಂಡಲದ ಮೇಲೆ ಗಮನಾರ್ಹವಾದ ನೆಗೇಟಿವ್‌ ಪ್ರಭಾವಳಿಯನ್ನು ಇದು ಉಂಟುಮಾಡುತ್ತದೆ. ಹೀಗಾಗಿ ಕಂಪ್ಯೂಟರ್‌, ವೀಡಿಯೋ ಗೇಮ್‌, ಇಂಟರ್ನೆಟ್‌, ಟಿವಿ ಸಕಾರಾತ್ಮಕ ಗೆರೆದಾಟದ ಹಾಗೆ, ಫೇಸ್‌ಬುಕ್‌, ವಾಟ್ಸ್‌ಪ್‌ಗ್ಳು ಶಿಕ್ಷಣಕ್ಕೆ ಪೂರಕವಾಗುವ ಹಾಗೆ ಸುರಕ್ಷಿತ ಹಳಿಯ ಮೇಲೆ ಸಾಗಲಿ. ನಿಮ್ಮ ಮಗನಿಗೆ ರವಿಬುಧ ಯೋಗದ ಬಲವಿದೆ. ಕರ್ಮಸ್ಥಾನಕ್ಕೆ ಗುರು ಚಂದ್ರರ ಪ್ರಭಾವ ಇದೆ. ಮುಂದೆ ಬರುತ್ತಾನೆ. ಆದರೆ ನೀವು ತಿಳಿದಂತೆಯೇ ಅಂಕ ಗಳಿಕೆ ದುಸ್ತರ. ಶ್ರೀ ಬಾಲಾ ತ್ರಿಪುರ ಸುದಂರೀ ನಾಮಾವಳಿಯನ್ನು ಸದ್ಯ ನೀವು ಓದಿ. ಮುಂದೆ ಅವನೂ ಓದಲಿ. ವೇದ ಸಾರಳಾದ ಭಗವತಿ ರಕ್ಷೆ ಸಾಧ್ಯ. ಉತ್ತಮವಾದ ತಾಮ್ರದಲ್ಲಿ ಎರಡು ಕ್ಯಾರಟ್‌ ಹವಳ ಧಾರಣೆಯನ್ನು ಬಲಗೈ ಉಂಗುರದ ಬೆರಳಿಗೆ ಇನ್ನು ಮೂರು ವರ್ಷಗಳ ಬಳಿಕ ಮಗನು ಧರಿಸಲಿ. ಪ್ರತ್ಯೇಕವಾದ ಕುಜಸಿದ್ಧಿಯೂ, ಭಗವತಿಯ ಕಟಾಕ್ಷವೂ ಅನುಗ್ರಹಪೂರ್ವಕವಾಗಿ ದೊರೆತು ಕುಜಶುಕ್ರ ಯುತಿಯ ದೋಷವನ್ನು ನಿಯಂತ್ರಿಸುತ್ತದೆ. 

Trending videos

Back to Top