CONNECT WITH US  

ಜಾತಕ ಫ‌ಲ

ಅಂಜಲಿ, ಡಾಬಸ್‌ ಪೇಟೆ

 ಗೂರೂಜಿ, ನನ್ನ ತಮ್ಮನಿಗೆ ಇನ್ನೂ ವಿವಾಹವಾಗಿಲ್ಲ. ಜನ್ಮ ಕುಂಡಲಿ ಲಗತ್ತಿಸಿದ್ದೇನೆ. ಅಮೇರಿಕಾದಲ್ಲಿ ಹಿರಿಯ ಎಂಜಿನಿಯರ್‌ ಆಗಿ ದೊಡ್ಡ ಕಂಪನಿಯಲ್ಲಿ ಕೆಲಸ. ಆದರೆ ಕಂಕಣ ಬಲ ಏಕೆ ಕೂಡಿ ಬರುತ್ತಿಲ್ಲ ತಿಳಿಯದು. ಏನು ಪರಿಹಾರ ಮಾಡಬಹುದು. ಮದುವೆ ಸಾಧ್ಯವೇ?

- ಸೋದರಿಯಾಗಿ ನಿಮ್ಮ ಕಾಳಜಿ ಸರಿ. ಈಗಾಗಲೇ 33 ವರ್ಷಗಳು. ಕಳೆದ ನವೆಂಬರ್‌ 3ಕ್ಕೆ ಸಾಡೇಸಾತಿ ಶನಿಕಾಟ ಸಮಾಪ್ತಿಯಾಗಿದೆ. ಶನಿ ಕಾಟವೇ ಹಾಗೆ. ಮುಖ್ಯ ಕೆಲಸಗಳು ಹಿಂದೆ ಬೀಳುತ್ತವೆ. ಉಳಿದುದು ಪ್ರಾಮುಖ್ಯವಾಗುತ್ತದೆ. ನಂತರ ಏಕಾಏಕಿ ಎಲ್ಲ ಗಡಿಬಿಡಿ, ತಲ್ಲಣ, ದಿಗಿಲು, ದಾರಿ ತಿಳಿಯದಾಗಿ ಹೋಗುವ ಸಂದರ್ಭ ಸರ್‌ನೆ ನಿರ್ಮಾಣ. ಅಮೇರಿಕಾದಲ್ಲಿ ಇರುವುದು, ದೊಡ್ಡ ಕೆಲಸ ಜವಾಬ್ದಾರಿ ದೊಡ್ಡದು ಎಲ್ಲಾ ಸರಿ. ಆದರೆ ಒಂದಿಷ್ಟು ಸಮಯವನ್ನು ವೈಯುಕ್ತಿಕ ಬದುಕಿನ ಬಗೆಗೂ ವ್ಯಯಿಸಬೇಕು. ಜುಲೈ19ರವರೆಗೆ ಗುರುಬಲ ಚೆನ್ನಾಗಿದೆ. ಭಾರತಕ್ಕೆ ಬಂದಿದ್ದು ತುಸು ಸಮಯ ವಧುವಿನ ಅನ್ವೇಷಣೆಗೆ ತೊಡಗಲಿ. ಹೂವು ಎತ್ತಿಟ್ಟಂತೆ ಮದುವೆ ಆಗುವುದು ಕಷ್ಟ. ಆದರೆ ಮಕ್ಕಳ ಯೋಗ ಸದ್ಯದಲ್ಲಿ ನಿರೀಕ್ಷಿತ ಎಂಬ ವಿಷಯ ನಿಮ್ಮ ಸಹೋದರನ ಮಟ್ಟಿಗೆ ಸುರಂಗದೊಳಗಿನ ಬೆಳಕು. ಸ್ವಯಂವರ ಪಾರ್ವತಿ ಸಿದ್ಧಿ ಜಪ ಮಾಡುವುದು ಒಳಿತು. ಶುಕ್ರನಿಗೆ ಇದರಿಂದ ಶೀಘ್ರ ಸಂವೇದನೆ. ದುರ್ಗಾಷ್ಟಕವನ್ನೂ ತಮ್ಮ ಓದಲಿ. ಕ್ಷೇಮ.

„ ನರಸಿಂಗಯ್ಯ ಎಚ್‌.ಆರ್‌. ಗುಬ್ಬಿ

ನಮ್ಮ ತೆಂಗಿನ ಕಾಯಿ ವ್ಯಾಪಾರದ ಅಡ್ಡೆ ಲಾಗಾಯ್ತಿನಿಂದ ಬೆಂಗಳೂರಿನಲ್ಲಿದೆ. ಚೆನ್ನಾಗಿಯೇ ನಡೆಯುತ್ತಿದ್ದದ್ದು ನುಸಿ ಪೀಡೆಯ ನೆಪದಲ್ಲಿ ಕುಂಟುತ್ತ ಹೋದದ್ದು ಕುಂಟುತ್ತಲೇ ಇದೆ. ಬಾಡಿಗೆಯ ವ್ಯಾಪಾರದ ಜಾಗವನ್ನು ಬಿಡಿ ಎಂದು ಮಾಲೀಕರ ಗೋಳು. ವ್ಯಾಜ್ಯವು ಜೋರಾಗಿ ಹೋಗದಂತೆ ಸಂಧಾನದ ಮಾರ್ಗ ಹಿಡಿಯಲು ಸಾಧ್ಯವೇ? ಹಣಗಳಿಕೆ ಸುಗಮವಾದೀತೇ?

- ಕುಲ ದೇವರಲ್ಲಿ ಹರಕೆ ಹೇಳಿಕೊಳ್ಳಿ. ಸಾಯಂಕಾರದ ದೀಪ ಬೆಳಗಿ ಮನೆಯ ದೇವರ ಪೀಠದ ಬಳಿ ಬಿಳಿ ಹೂವುಗಳನ್ನು ಬೀರುವುದು ಹಾಗೂ ಶ್ಯಾಮಲಾಷ್ಟೋತ್ತರವನ್ನು ಪಠಿಸುವುದು ಸೂಕ್ತ. ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ಮನೆಯವುರ ಮಾಡಲಿ.ತಿಂಗಳ ನಿರ್ದಿಷ್ಟ ಕಾಲಾವಧಿಯ ಸಮಯದಲ್ಲಿ ನೀವೇ ಓದಿ. ಸದ್ಯ ನಡೆಯುತ್ತಿರುವ ಚಂದ್ರ ದಶಾ ಕೆಟ್ಟದಾಗೇನಿಲ್ಲ. ಮಾಲೀಕನ ಬಳಿ ಮಾತನಾಡಿ. ಆದರೆ ಧ್ವನಿಯಲ್ಲಿ ವಿನಂತಿ ಇರಲಿ. ಚಂದ್ರನ ಅಭಯ ರಕ್ಷೆಗೆ ತೊಂದರೆ ಬಾರದು. ಅಂಗಡಿಯ ಮುಂಗಟ್ಟಿನಲ್ಲಿ ಪ್ರತಿ ದಿನ ಚಿಕ್ಕ ಇಂಗಿನ ತುಂಡವನ್ನು ಪಶ್ಚಿಮ ದಿಕ್ಕಿಗೆ ಮೂರು ಸುತ್ತು ಕೈಯ್ಯಲ್ಲೇ ಸುತ್ತಿ ಇಟ್ಟುಬಿಡಿ. ಜಾತಕದಲ್ಲಿನ ಪೀಡಿತ ಬುಧನ ಅನಿಷ್ಟಕ್ಕೆ ನಿವಾರಣೆ ದೊರೆತು ವಾಣಿಜ್ಯ ಸಿದ್ಧಿಗೆ ದಾರಿ ಸಾಧ್ಯ.

„ ರಾಜಶೇಖರ ಬಿರುಹಳ್ಳಿ, ಬೆಂಗಳೂರು

ನಮ್ಮ ಮಗಳಿಗೆ ಇದ್ದಕ್ಕಿದ್ದಂತೆ ಫಿಟ್ಸ್‌ ಬರುತ್ತದೆ. ವೈದ್ಯರ ಬಳಿ ತೋರಿಸುತ್ತಿದ್ದೇವೆ. ಪ್ರಮಾಣ ಕಡಿಮೆಯಾಗಿದೆ. ಮಾತ್ರ ತೆಗೆದುಕೊಳ್ಳಲಿ ಪೂರ್ತಿಗುಣ ಸಾಧ್ಯ ಎಂದು ವೈದ್ಯರು ಅನ್ನುತ್ತಿದ್ದಾರೆ. ಕುಂಡಲಿ ಕಳಿಸಿದ್ದೇನೆ. ಪೀಡೆಗೆ ಪರಿಹಾರ ಸಾಧ್ಯವಿದೆಯೇ?

- ವೈದ್ಯರ ಮೇಲೆ ನಂಬಿಕೆ ಇಡಿ. ರಾಹು ದಶಾ ಇನ್ನು ಏಳು ತಿಂಗಳಲ್ಲಿ ಮುಕ್ತಾಯ. ಅಕ್ಟೋಬರ್‌ ನಡುವಿನಲ್ಲಿ ರಾಹು ಹಾಗೂ ಬೃಹಸ್ಪತಿ ಅಷ್ಟೋತ್ತರ ಪಠಿಸಿ. 45 ದಿನಗಳ ಕಾಲ ನಡೆಸಿ. ಗುರು ದಶಾ
ಹೊತ್ತಿಗೆ ವ್ಯಾಧಿ ನಿಯಂತ್ರಣಕ್ಕೆ ಬರಲಿದೆ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸದಿರಿ

Trending videos

Back to Top