CONNECT WITH US  

ಜಾತಕ ಫ‌ಲ

ಅಲ್ವಿನ್‌ ಥಾಮಸ್‌, ಮಡಗಾಂವ್‌
ಗುರೂಜಿ, ಉದ್ದನೆಯ ಕೈಗಳೇ ಸುತ್ತುವರಿದಂತೆ, ನನ್ನ ಬೆನ್ನ ಹಿಂದೆ ಇನ್ನೇನು ಹಿಡಿದೆಳೆದು ನೆಲಕ್ಕೆ ಕೆಡವಿ ಬಿಡುತ್ತಾವೆಂಬಂತೆ ಅನಿಸುತ್ತಿರುತ್ತದೆ. ತಾಳಲಾಗದೆ ಬೆಂಗಳೂರಿನಲ್ಲಿ ಉತ್ತಮ ಕೆಲಸ ಬಿಟ್ಟು ಬಂದೆ. ಶಿಪ್‌ ಕನ್‌ಸ್ಟ್ರಕ್ಷನ್‌ ಕಂಪೆನಿಯಲ್ಲಿ ಸಮಾಧಾನಕರವಾದ ಒಂದು ಕೆಲಸ ಸಿಕ್ಕರೂ ನೀರಿನ ಅಲೆಗಳಲ್ಲಿ ಕೈಗಳೆದ್ದು ಬಂದಂತೆ ಅನಿಸುತ್ತದೆ. ಇದು ಭ್ರಮೆಯೋ, ವಾಸ್ತವವೋ ತಿಳಿಯದಾಗಿದೆ. ಹೊರ ದೇಶವೊಂದರಲ್ಲಿ ಕೆಲಸಕ್ಕೆ ಕರೆ ಇದೆ ಹೋಗಲೆ? ಸಲಹೆ ನೀಡಿ.

- ಜಾತಕದ ದೋಷವಂತೂ ಹೌದು. ಇದು ಚಂದ್ರನ ಹಾಗೂ ಕೇತು ಗ್ರಹಗಳ ಅಸಮರ್ಪಕ ಜೋಡಣೆಗಳಿಂದ ಛಿದ್ರ ಸ್ಥಾನಕ್ಕೆ ದೋಷವಿದೆ. ಜೀಸಸ್‌ ಗೆ ಬೆಳಗ್ಗೆ, ರಾತ್ರಿ ಕ್ಯಾಂಡಲ್‌ ಬೆಳಗಿ. ಗೋಧಿಯ ಹತ್ತು ಹದಿನೈದು ಕಾಳುಗಳನ್ನು ಹಿಂದಿನ ರಾತ್ರಿ ಹಾಲಲ್ಲಿ (ಹಸುವಿನ ಹಾಲು) ನೆನೆಸಿ ಮಾರನೆಯ ದಿನ ತೆಂಗಿನ ಮರದ ತಳಕ್ಕೆ ಚೆಲ್ಲಿ ( ಆರು ತಿಂಗಳ ಕಾಲ ಪೂರೈಸಿ) ಉತ್ತಮ ಮಾಣಿಕ್ಯವನ್ನು ( ಐದಾರು ಸಾವಿರಗಳೊಳಗೆ ಬೆಲೆ ಇರಲಿ) ಧರಿಸಿ. ಚೇತರಿಕೆ ಸಾಧ್ಯ. ಮನೋವೈಧ್ಯರ ಸಲಹೆ
ಕೂಡ ಪಡೆಯಿರಿ. ಹೊರ ದೇಶದ ಕೆಲಸ
ಉತ್ತಮವಾಗಿದ್ದರೆ, ಖಂಡಿತ ಸೇರಿ. ತಲ್ಲಣೆ
ಬೇಡ. ರಕ್ಷೆ ಇದೆ.

„ ರಮೇಶ್‌ ರಾಜಾ, ಹೆಬ್ಟಾಳ ಮೈಸೂರು
ಕೆಲ ದಿನಗಳಿಂದ ಸಮಾಧನಾದ ಮನೋಸ್ಥಿತಿ ಇರದೆ ಒದ್ದಾಡುತ್ತಿದ್ದೇನೆ. ಎಂಜಿನಿಯರಿಂಗ್‌ ಕೊನೆಯ ವರ್ಷ ಓದುತ್ತಿದ್ದೇನೆ. ತಂದೆ ತಾಯಿಗೆ ದೇವರಂಥವರು. ನನ್ನ ಕುರಿತು ಇನ್ನಿಲ್ಲದ ಮಮತೆ, ಪ್ರೀತಿ ತೋರಿಸುತ್ತಾರೆ. ಆದರೆ ನಾನೇ ಜೀವನದಲ್ಲಿ ಕೆಲ ಕೆಟ್ಟ ಹೆಜ್ಜೆಗಳನ್ನು ಇಟ್ಟಿದ್ದೇನೆ. ಇದರಿಂದ ಈಗ ತೊಂದರೆ ಎದುರಿಸುತ್ತಿದ್ದೇನೆ. ಕೆಟ್ಟ ಮಹಿಳೆಯೊಡನೆ ಸ್ನೇಹವಾಗಿ, ನನ್ನನ್ನು ಅನೇಕ ಸಾಲಗಳಿಗೆ ಸಿಲುಕಿಸಿ ಬಿಟ್ಟಿದ್ದಾಳೆ. ನನಗಿಂತಲೂ ಹಿರಿಯಳು. ಈಗ ಅವಳ ಹತ್ತಿರವೂ ಹೋಗುತ್ತಿಲ್ಲ. ಆದರೆ ಮನೋಕ್ಷೊàಭೆಯು ಸುಡುತ್ತಿದೆ. ತಂದೆತಾಯಿಗೆ ಅನ್ಯಾ ಮಾಡಿದೆ ಎಂಬ ವಿಚಾರದಿಂದ ಅಪರಾಧಿ, ಹತಾಶ ಭಾವನೆ ಮೂಡುತ್ತಿದೆ.

- ಕೆಟ್ಟು ಹೋದ ಹಾಲಿನ ಬಗ್ಗೆ ಚಿಂತಿಸುವುದು ಅರ್ಥಹೀನ.ಹೊನ್ನು, ಹೆಣ್ಣು, ಮಣ್ಣುಗಳಿಂದ ಜಗತ್ತಿನ ನಾಮಾಂಕಿತರೆಲ್ಲ ಪರದಾಟ ನಡೆಸಿ ಸೋತಿದ್ದಾರೆ. ಹೆಣ್ಣಿಗೂ ಗಂಡು ಹಲವು ಸಲ ಪ್ರಾರಬ್ಧವೇ.
ತಂದೆತಾಯಿ ಬಳಿ ನೀವೇ ಸುಧಾರಿಸಲು ಸಾಧ್ಯವಾಗದ ಸಾಲವಾಗಿದ್ದಲ್ಲಿ ಏನನ್ನು ಸದ್ಯ ತಿಳಿಸಬೇಡಿ. ಹಾಗಿರದಿದ್ದಲ್ಲಿ ಕಹಿ ಸತ್ಯವನ್ನು ತಿಳಿಸಿ.

ಗೋಚರವಾದ ರಾಹುವಿನಿಂದ ಶನಿ ಮಹಾರಾಜನಿಂದ ಬಾಧೆ ಎದುರಾಗಿದೆ. ಮಾನಸಿಕ ತಲ್ಲಣಗಳನ್ನು ನಿಯಂತ್ರಿಸಿ. ಕ್ಷೀಣನಾದ ಚಂದ್ರನೂ ನಿಮ್ಮ ಪತನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ. ಸದ್ಯ ಗುರುದಶಾಕಾಲವೂ ಅಕ್ಟೋಬರ್‌ ತಿಂಗಳಿನಿಂದ ಬರಲಿದೆ. ಜೀವನದಲ್ಲಿ ಒಂದು ಉತ್ತಮ ವೇದಿಕೆಯತ್ತ ನಿಮ್ಮನ್ನು ಒಯ್ದು ಸಫ‌ಲ ದಾರಿಗೆ ತಂದು ಗೆಲ್ಲಿಸಲಿದೆ. ಪ್ರತಿದಿನ ಒಂದು ಹಿಡಿ ಅವರೆ ಹಾಗೂ ಕಡಲೆಯನ್ನು ಗೋಗ್ರಾಸವಾಗಿ ನೀಡಿ.

ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:  Email: bahumukhi@manipalmedia.com
Mob: 8147824707

Trending videos

Back to Top