CONNECT WITH US  

ಜಾತಕ ಫ‌ಲ- ಜೂನ್‌‌ 20

ಸೀಮಾ ರೆಡ್ಡಿ, ಅನಂತಪುರ
   ಸ್ವಾಮಿ, ನನ್ನ ಮಗನ ಸಮಸ್ಯೆ ಬಗೆಗೆ ಪರಿಹಾರ ಕೇಳುತ್ತಿದ್ದೇನೆ. ಜಾತಕ ಲಗತ್ತಿಸಿದ್ದೇನೆ. ತುಂಬಾ ಕೋಪ. ಏನೋ ಎಡವಟ್ಟು ಮಾಡಿಕೊಳ್ಳುತ್ತಾನೆ. ಆದರೂ ಅದರಿಂದ ಬುದ್ಧಿ ಬಾರದು. ಮುಂದಿನ ಸರತಿ ಎಚ್ಚರ ಇರಲಿ ಎಂದು ಬುದ್ಧಿ ಹೇಳಿದರೂ ಕೂಗಾಡುತ್ತಾನೆ. ಅವಮಾನ ಮಾಡುತ್ತಿದ್ದೀರಿ ಎಂಬುದು ಅವನ ವಾದ. ಹಿಂದಿನದು ಹಿಂದೇ ಇರಲಿ. ಈಗ ಪ್ರಸ್ತಾಪ ಬೇಡ ಎಂದನ್ನುತ್ತಾನೆ. ಓದಲು ಏಕಾಗ್ರತೆ ಇಲ್ಲ. ಹಾಗೆಂದ ಮಾತ್ರಕ್ಕೆ ದಡ್ಡನಲ್ಲ. ಮೂಗಿನ ತುದಿಯ ಕೋಪದಿಂದಾಗಿ ಮಗನಾದರೂ ಬುದ್ಧ ಹೇಳಿದೆವು ಎಂದು ಸಮಾಧಾನವಾಗದ ಸ್ಥಿತಿ ತಂದೆತಾಯಿಗಳಿಗೆ. ತುಂಬಾ ಶೋಕಿಯ ಹುಚ್ಚಾ ಎದ್ದೇಳುತ್ತದೆ. ದುಷ್ಟನಲ್ಲ. ಆದರೇನು ಬಂತು?

  ನಿಮ್ಮ ತಲ್ಲಣ ಅರ್ಥವಾಗುತ್ತದೆ. ಮಗನಿಗೆ ಹೈಪರ್‌ ಆಕ್ಟಿವಿಟಿ  ಇದ್ದು ತರ್ಕ ಕಳೆದುಕೊಳ್ಳುತ್ತಾನೆ. ಲಗ್ನ ಭಾವದ ಮೇಲೆ ಒಟ್ಟಿಗೆ ಏಳು ಗ್ರಹಗಳು ಪ್ರಭಾವ ಬೀರಿವೆ. ಆದರೆ ಕೇತು, ಸೂರ್ಯ ಹಾಗೂ ಕುಜರ ಪ್ರಭಾವಗಳಿಂದ ( ತಂದೆ ತಾಯಿಗಳಾದ ನಿಮ್ಮಬ್ಬರ ನಡುವೆ ಮನೆಯಲ್ಲಿ ಜಗಳದ ಗದ್ದಲ ಇದ್ದರೆ)ಮಗನು ಯಾವುದು ಸರಿ ಯಾವುದು ತಪ್ಪೆಂಬ ನಿರ್ಣಯ ಕಳಕೊಳ್ಳುತ್ತಾನೆ. ಟಿವಿಗಳಲ್ಲಿ ಬರುವ ( ಹಿಂಸೆ, ಕ್ರೌರ್ಯಗಳ ಸಂದರ್ಭದ ವಿಚಾರಕ್ಕೆ ಸಂಬಂಧಿಸಿ ಕಾರ್ಯಕ್ರಮಗಳಿದ್ದರೆ) ಕಾರ್ಯಕ್ರಮ ಅವನೆದುರು ನೋಡಬೇಡಿ. ಊಟಕ್ಕೆ ಕುಳಿತು ತಂದೆ ತಾಯಿಗಳಾದ ನೀವಿಬ್ಬರೂ ಹೊಂದಾಣಿಕೆಯಿಂದ ವಾಸ್ತವಗಳನ್ನು ಬಿಂಬಿಸಿ. ಮಗನು ಆದಿತ್ಯ ಹೃದಯ, ವಿಷ್ಣು, ಶಿವ ಅಷ್ಟೋತ್ತರ ಓದಲಿ. ನಿಮ್ಮಿಬ್ಬರ ನಡುವಿನ ಸಂಘರ್ಷ ಇದ್ದರೆ ಅವನೆದುರು ಬೇಡ. ಕಷ್ಟಗಳ ಬಗ್ಗೆ ಅವನೆದುರು ಮಾತುಕತೆಯಂತೂ ಬೇಡವೇಬೇಡ. 

 ರಾಯಪ್ಪ ಕುಬಸದ, ಹಾವೇರಿ

   ಗುರೂಜಿ, ಪ್ರತಿ ದಿನ ®ಎಲ್ಲವನ್ನೂ  ನಾಳೆಗೆ ಮುಂದೂಡುವ ಎಂಬ ಮನಸ್ಸು ಬರುತ್ತಿರುತ್ತದೆ. ನಿತ್ರಾಣ ಎನಿಸುವ ಸಂಗತಿ ಮಾಯವಾಗುವುದೇ ಮಾಡಬೇಕಾದ ಕೆಲಸ ಮುಂದೂಡಿದಾಗ. ದಿನ ನಿತ್ಯದ ಖರ್ಚು ವೆಚ್ಚಗಳಿಗೆ ತೊಂದರೆ ಇಲ್ಲ. ಆದರೆ ಸ್ವಂತ ಮನೆ ಆಗಿಲ್ಲ. ಎಷ್ಟೋ ಉತ್ತಮ ಗಳಿಕೆ ಇದ್ದರೂ ಕರ್ಪೂರ ಉರಿದಂತೆ ಹಣದ ಬಾಬ್ತು ಕರಗುತ್ತದೆ. ಕನಸುಗಳು ಹೈರಾಣ ಮಾಡುತ್ತವೆ. ಎಷ್ಟೋ ಜನ ಅದೆಂತೋ ಎಲ್ಲವನ್ನೂ ಸಾಧಿಸಿರುತ್ತಾರೆ. ಆದರೆ ಎಲ್ಲಾ ಇದ್ದೂ ಸಾಧಿಸುವುದು ಸಾಧ್ಯವಾಗುತ್ತಿಲ್ಲ. ಜಾತಕ ಕಳಿಸಿದ್ದೇನೆ. ಪರಿಹಾರ ಹೇಗೆ?

  ರಾಜಯೋಗ ಇದೆ. ಆದರೆ ರಾಜಯೋಗಕ್ಕೆ ಏಳಿಗೆ ಒದಗಿಸಬೇಕಾದ ಮೆಟ್ಟಿಲುಗಳನ್ನು ಶನಿ ಹಾಗೂ ಕುಜರು ( ಪರಸ್ಪರರ ನಾಶದ ಹೊಡೆದಾಟ ಜಾತಕದಲ್ಲಿದೆ) ಏರಲು ಬೆಂಬಲ ಕೊಡಲಾರದವರಾಗಿದ್ದಾರೆ. ನೀವು ಮಾತುಗಾರರು. ಆತ್ಮೀಯತೆ ಇದ್ದು ಎಲ್ಲರೊಂದಿಗೆ ಬೆರೆತರೂ ನಿಮ್ಮ ಅವಶ್ಯಕತೆಯನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದೀರಿ. ಇದು ಕೇತು ದೋಷ. ಬೌದ್ಧಿಕ ಪಾಂಡಿತ್ಯ ಇದ್ದರೂ ವರ್ತಮಾನ ನಿರೀಕ್ಷಿಸುವ ನಾಟಕೀಯತೆಯನ್ನು ಪ್ರದರ್ಶಿಸಲಾಗದೇ ಉಳಿದಿದ್ದೀರಿ. ಪ್ರಾಮಾಣಿಕತೆ ಇರಲೇಬೇಕು. ಆದರೆ ವಾಸ್ತವದಲ್ಲಿ  ಅಪ್ರಮಾಣಿಕ ಜತೆಗೂ ಪ್ರಾಮಾಣಿಕವಾಗಿರುವ ವರ್ತನೆ ಬಿಡಿ. ಸೌರ ಪಂಚಾಕ್ಷರಿ ಜಪ ಮಾಡಿ. ಬೌದ್ಧಿಕವಾದ ನಿಮ್ಮ ಪಾಂಡಿತ್ಯ ಅಧ್ಯಾತ್ಮಿಕವಾದ ಆವರಣಗಳೊಂದಿಗೆ ಮಿಂಚಲಿ. ಒಳಿತಿಗೆ ದಾರಿ ಇದ್ದೇ ಇದೆ. 

  ಮೀರಾ ಅಂಗಡಿ, ಸಿರ್ಸಿ

  ನನಗೆ ಸನಿನಮಾದಲ್ಲಿ ನಟಿಸುವಾಸೆ. ಈಡೇರಬಹುದೆ ಗುರೂಜಿ?

  ನಿಮ್ಮ ಶುಕ್ರ ಬುಧರು ಸದ್ಯ ಪ್ರಭಾವಿಗಳಾಗಿ ಶಕ್ತಿ ಶಾಲಿಗಳಲ್ಲ. ರಾಹು ಸೂಕ್ತವಾದ ಅವಕಾಶವನ್ನು ನಿಮಗೆ ಅನುಕೂಲಕರ ನೆಲೆಯಲ್ಲಿ ಒದಗಿಸಲಾದ ಕ್ರೌರ್ಯ ಪಡೆದಿದ್ದಾನೆ. ಮುಂದೆ ಪತಿಯಿಂದ ಒಳ್ಳೆಯದಾಗಲಿದೆ. 


Trending videos

Back to Top