CONNECT WITH US  

ಜಾತಕ ಫ‌ಲ ; ಜೂನ್‌ 27

   ಅನುಸೂಯ ಶೆಟ್ಟರ್‌, ಕಾಲಕಾನ ಕೊಪ್ಪ

   ಗುರೂಜಿ ನನ್ನ ಮಗನ ಜಾತಕ ಕಳುಹಿಸಿದ್ದೇನೆ. ಅವನಿಗೆ ಏನೇ ವಿನಂತಿಸಿದರೂ, ಬೇಡಿಕೊಂಡರೂ ದುಷ್ಟ ಗೆಳೆಯರ ಜೊತೆಗೇ ಹೋಗಿ ಸೇರಿಕೊಳ್ಳುತ್ತಾನೆ. ಒಂದು ರೀತಿಯಲ್ಲಿ ಬೋಳೆತನವಿರುವ ಹುಡುಗ. ಆದರೆ ಏನೋ ಕೀಳರಿಮೆಯಿಂದ ಬಳಲುತ್ತಾನೆ. ತಂದೆ ತಾಯಿ ಬಗ್ಗೆ ಅನಾದರ. ಏನೇ ಮಾತನಾಡಿದರೂ ಕೂಗಾಡುತ್ತಾನೆ. ಹೊರಗೆ ಸಭ್ಯ. ನಿಜಕ್ಕೂ ಸಭ್ಯ ಪರಿಹಾರ ಏನು?

  ನಿಮ್ಮ ಮಗನ ಜಾತಕದಲ್ಲಿ ಅಗಾಧವಾದ ಬುದ್ಧಿವಂತಿಕೆಗೆ ಕಾರಣ ಮಾಡುವ ಗ್ರಹಗಳಿವೆ. ಆದರೆ ಅವನು ಒಳ್ಳೆಯನಾಗು, ಆಗು ಎಂಬ ನಿಮ್ಮ ತಂದೆ ತಾಯಿ ಮಾತಿನಲ್ಲಿ ಗೊಂದಲಕ್ಕೆ ಒಳಗಾಗಿದ್ದಾನೆ. ಪಡ್ಡೆ ಹುಡುಗರ ಮಾತುಗಳು ವೀರಾವೇಶದ ಮಾತುಗಳಂತೆ ಕೇಳಿಸುತ್ತಿವೆ. ನಿಮ್ಮ ಮಾತು ದುರ್ಬಲ ಮಾತುಗಳು ಎಂದನಿಸುತ್ತವೆ. ಹೀಗಾಗಿ ಅವನು ಗೊಂದಲ ಹೊಂದಿದ್ದಾನೆ. ದುಷ್ಟರು ಅವನನ್ನು ಬಳಸಿಕೊಳ್ಳುತ್ತಿದ್ದಾರೆ. ಹೊರಗೆ ಬರಲು ಸಾಧ್ಯವಾಗದೆ, ರಂಪ ಎಬ್ಬಿಸುತ್ತೀರೆಂದು ನಿಮಗೂ ಹೇಳಲಾಗದೆ ಒದ್ದಾಡುತ್ತಿದ್ದಾನೆ. ಲಗ್ನ ಭಾವದ ( ಆತ್ಮ ಭಾವಕ್ಕೆ) ಶುಭ ಗ್ರಹಗಳ, ದುಷ್ಟ ಗ್ರಹಗಳ ಪ್ರಭಾವ ಅತಿಶಯವಾಗಿ ಬುದ್ಧಿ ಇದ್ದೂ ಒದ್ದಾಡುತ್ತಿದ್ದಾನೆ. ಕೆಲ ಕಾಲ ಏನೂ ಹೇಳದೆ ಸುಮ್ಮನಿರಿ. ಅವನ ಜಾತಕದ ಗುರು ಗ್ರಹ ಅವನನ್ನು ಸರಿಪಡಿಸುತ್ತಾನೆ. ಸದ್ಯದ ಪಂಚಮ ಶನಿ ಕಾಟದ ಸಂದರ್ಭ ದಿಢೀರಾದ ಬದಲಾವಣೆಗೆ ದಾರಿ ಮಾಡದು. ಒಳಿತು ದಿನಗಳು ಮುಂದೆ ಬರಲಿವೆ. ಪ್ರತಿ ದಿನ ಶ್ರೀ ದೇವಿ ಲಲಿತಾ ಸಹಸ್ರನಾಮಾವಳಿಯನ್ನು ಪಠಿಸಿ. 

  ಸತ್ಯನಾರಾಯಣ ಎಚ್‌. ಆರ್‌. ಶಿರಸಿ

  ಇತ್ತೀಚಿನ ದಿನಗಳಲ್ಲಿ ನನ್ನ ಆರೋಗ್ಯದಲ್ಲಿ ಏನೋ ಸರಿ ಇಲ್ಲ ಎಂಬ ಭಾವನೆ ಬರುತ್ತಿವೆ. ನನ್ನ ಕೂದಲುಗಳು ಉದುರುತ್ತಿವೆ. ವೈದ್ಯರ ಬಳಿ ತಪಾಸಣೆ ಮಾಡಿದರೆ ಯಾವ ದೋಷವೂ ಇಲ್ಲ ಎಂದು ಅನ್ನುತ್ತಿದ್ದಾರೆ. ಸತ್ತು ಬಿಡೋಣ ಎಂದನಿಸುತ್ತದೆ. ಆಫೀಸಿನಲ್ಲಿ ಎಲ್ಲರೂ ನಕ್ಕು ನಲಿಯುತ್ತಿರುತ್ತಾರೆ. ನನಗೋ ಅವ್ಯಕ್ತ ಭಯ. ಚೌಡಿಕಾಟವಿದೆಯಾ? ಪರಿಹಾರವೇನು?

  ಸದ್ಯ ಸಾಡೇ ಸಾತಿ ಶನಿಕಾಟ ನಡೆಯುತ್ತಿದ್ದು ಕ್ಷೀಣ ಚಂದ್ರನ ಮೇಲೆ ಶನೈಶ್ಚರನ ನಕಾರಾತ್ಮಕ ಪ್ರಭಾವ ಜಾಸ್ತಿ ಇದೆ. ಖನ್ನತೆ ನಿಮ್ಮನ್ನು ಆವರಿಸುತ್ತಿರುತ್ತದೆ. ಜನಪ್ರಿಯ ನಟಿಯೋರ್ವಳು ಖನ್ನತೆಯಿಂದ ತಾನು ಒದ್ದಾಡಿದ ಬಗೆಯನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾಳೆ. ಏನೂ ಆಗುವುದಿಲ್ಲ. ಬುಧನು ಬಲಾಡ್ಯನಾಗಿದ್ದಾನೆ. ಬುದ್ಧಿಶಾಲಿಗಳಾದ ನೀವು ಹೊರ ಜಗತ್ತಿನ ವಕ್ರತೆಗಳ ಬಗೆಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸ ಮಾಡಿಕೊಂಡು ಹೋಗಿ. ಜಗತ್ತನ್ನು ತಿದ್ದುವ ಅನಾವಶ್ಯಕ ಸಂಕಟ ಹೊತ್ತಿದ್ದೀರಿ. ಈ ಅಂಕುಡೊಂಕುಗಳು ಬದಲಾಗದು. ಮನಶಾಸ್ತ್ರಜ್ಞರ ಸಲಹೆ ಪಡೆಯಿರಿ. ಜೊತೆಗೆ ಚಂದ್ರ ಕವಚ ಓದಿ.

 ಹರಿಹರ ಮೂರ್ತಿ, ಬೆಟ್ಟರಾಯನ ಪುರ

  ಬಹಳ ದಿನಗಳಿಂದ ಎಡಗಣ್ಣು ಹಾರುತ್ತಿದೆ. ಏನೋ ಕೆಟ್ಟ ಕನಸುಗಳು. ಮೂರು ವರ್ಷಗಳಿಂದ ಪ್ರಮೋಷನ್‌ ಒಂದು ಸಿಗದೇ ಬೇಕಾದ್ದು ಸಿಗುತ್ತಿಲ್ಲ. ಒಬ್ಬ ವ್ಯಕ್ತಿ ಅಡ್ಡಗಾಲು ಹಾಕುತ್ತಿದ್ದಾನೆ. ದೇವರೇ ಇಲ್ಲ ಎಂದನಿಸುತ್ತಿದೆ. ಪರಿಹಾರ ಸೂಚಿಸುವಿರಾ?

  ಬುದ್ಧಿವಂತರಾದ ನಿಮ್ಮ ಜಾತಕದಲ್ಲಿ ಸೂರ್ಯ ಬುಧರು ಶಕ್ತಿ ಪೂರ್ಣರಾಗಿದ್ದಾರೆ. ಆದರೆ ಸುಖ ಸ್ಥಾನದಲ್ಲಿ ರಾಹು ದೋಷವಿದೆ. ಭಾಗ್ಯಕ್ಕೂ ಕುಜನ ಬಾಧೆ ಅಂತರ್ಗತಗೊಂಡಿದೆ. ಒಂದು ಪಚ್ಛೆಯನ್ನು ( 2 ಕ್ಯಾರೆಟ್‌) ಬಂಗಾರದಲ್ಲಿ ಧರಿಸಿ. ಪ್ರತಿ ದಿನ ಕಾಲ ಭೈರವಾಷ್ಟಕ, ಚಂದ್ರಮೌಳೇಶ್ವರ ಸ್ತುತಿ ಪಠಿಸಿ. ಕ್ಷೇಮ. 

Trending videos

Back to Top