CONNECT WITH US  

ಜಾತಕ ಫ‌ಲ : ಜುಲೈ 4

  ಪ್ರಮೋದ ಕುಬೇರಪ್ಪ, ನಿಪ್ಪಾಣಿ

  ನನ್ನ ಜಾತಕ ಕಳಿಸಿದ್ದೇನೆ ಗೂರೂಜಿ. ನನಗೆ ಸರ್ಕಾರಿ ಕೆಲಸದ ಯೋಗವಿದೆಯೇ? ಪೊಲೀಸ್‌ ಇಲಾಖೆಯಲ್ಲಿನ ಕೆಲಸದ ಹಂಬಲ ನನ್ನದು. ತಂದೆ ತಾಯಿಗಳು ಶಿಕ್ಷಣ ಇಲಾಖೆ ಸೇರು ಎನ್ನುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಕಾಡಿದೆ. ಕಿವಿಯ ತೊಂದರೆ ಕಳವಳಕ್ಕೆ ಕಾಣವಾಗುತ್ತಿದೆ. ಭವಿಷ್ಯದ ಕುರಿತು ತಿಳಿಸುವಿರಾ?

   ನಿಮ್ಮ ಜಾತಕದಲ್ಲಿ ಕರ್ಮಸ್ಥಾನ ( ಕೆಲಸದ ಸ್ಥಳ) ಕೇತುವಿನ ವಿಷ ಬಾಲದಿಂದ ಆವೃತವಾಗಿ ಬುದ್ಧನನ್ನು ಕಟ್ಟಿ ಹಾಕಿದೆ. ಪೊಲೀಸ್‌ ಇಲಾಖೆಗೆ ನಿಮ್ಮ ಸಾಮರ್ಥಯ ವಿನಿಯೋಗಗೊಳ್ಳಲು ಕಾಲದ ಸಮ್ಮತಿಗೆ ಬಾಧೆ ಇಲ್ಲ. ಒಂದೇ ಒಂದು ನಿಮ್ಮ ತಾಳ್ಮೆ ಸದ್ಯದ ಅವಶ್ಯಕತೆಯಾಗಿದೆ. ಶಿಕ್ಷಣೆ ಇಲಾಖೆಯನ್ನು ತಿರಸ್ಕರಿಸಬೇಡಿ. ಉತ್ತಮನಾದ ಶುಕ್ರ, ಉತ್ತಮನಾದ ಶನೈಸcರನ ಜೊತೆ ಪರಿವರ್ತನದಲ್ಲಿದ್ದು ಪೂರ್ವ ಪುಣ್ಯಸ್ಥಾನ ಸಂಪನ್ನವಾಗಿದೆ. ಗೋಳಾಟ, ಚೀರಾಟ, ಕಂಗೆಟ್ಟ ಮನದ ಪರದಾಟ ಪ್ರಾರಬ್ಧಕ್ಕೆ ಸಂಬಂಧಿಸಿದ ವಿಷಯಗಳು. ಒಂದು ಹಣತೆಯಲ್ಲಿ ಸಂಜೆಯ ಹೊತ್ತು ದೀಪ ಬೆಳಗಿ ದೇವರೆದುರು ಇನ್ನೂ ಒಂದು ತಿಂಗಳು ನಿರಂತರವಾಗಿ ಉರಿಸು. ದೀಪದ ಆಹ್ಲಾದಕ್ಕೆ ಒಲಿಯುವ ಪರಮಗುರು ನಿಮ್ಮ ಸೌಭಾಗ್ಯಕ್ಕೆ ಕಾರಣನಾಗುತ್ತಾನೆ. ಆತ್ಮಸ್ಥೈರ್ಯ, ಧೈರ್ಯ ಇರಲಿ. ಲೋಕಕ್ಕೆ ನಿರ್ವಿಘ್ನಕಾರಕ ಮಂಗಳ ಮೂರ್ತಿ ಗಣೇಶನ ಸಿದ್ಧಿಗೆ ಶ್ರೀ ಗಣಪತಿ ಅಥರ್ವಶೀರ್ಷದ ಪಠಣ ನೆರವೇರಲಿ. 
 
 ಶರಣ ಗುರು ಓಂಕಾರಪ್ಪ,ಬೀದರ

  ಗುರೂಜಿ, ಎಡಬಿಡದ ನೋವು, ಮಲಗಿದರೆ ಭಯಾನಕ ಕನಸುಗಳು. ಸೊಂಟದ ನೋವು ವಿಪರೀತ. ಚಂಚಲಗೊಳ್ಳುವ ಮನಸ್ಸು. ಮೈಎಲ್ಲಾ ಕಪ್ಪು ಕಲೆಗಳು. ಹಾಗೆಯೇ ಅವು ಮಾಯವೂ ಆಗುವವು. ಒಟ್ಟಿನಲ್ಲಿ ಮನದ ಮೂಲೆಯಲ್ಲಿ ಚಿಂತೆಯ, ಭಯ ಭಾವಗಳೇ ಅಧಿಕ. ಪರಿಹಾರ ಏನು ಸ್ವಾಮಿ?

   ನಿಮಗಿನ್ನೂ ವರ್ಷ 45. ಇದು ಈ ಕಾಲದಲ್ಲಿ ದೊಡ್ಡ ವಯಸ್ಸಲ್ಲ. ಸೂರ್ಯನ ಬಹುತಾಪ, ತೇವ ಕಳಕೊಂಡ ಬುಧನಿಂದಾಗಿ ಚರ್ಮ ವ್ಯಾಧಿ ತಲೆದೋರುತ್ತಿದೆ. ಬಹು ಸಿದ್ಧಿಕಾರಕ ಬುಧ ಪೀಡಾನಿವಾರಣ ಸ್ತೋತ್ರ, ಆದಿತ್ಯ ಹೃದಯ ಮಂತ್ರ ಪಠಣ ಮಾಡಿ. ಚರ್ಮ ವ್ಯಾಧಿ ದೂರ. ಸೂಕ್ತ ವೈದ್ಯರ ಸಲಹೆ ಕೂಡ ಪಡೆಯಿರಿ. ತುಷ್ಟಿ, ಪುಷ್ಟಿ ಸಂಪನ್ನ ಮಂತ್ರದಕ್ಷರ ಸ್ನಿಗª ತರಂಗಗಳು ಚರ್ಮ ವ್ಯಾಧಿ, ಸೊಂಟ ನೋವಿನ ಬಾಧೆ ತಪ್ಪಿಸುವವು. ಆಧಾ¾ತ್ಮಿಕತೆಯ ಜೊತೆಗೆ, ನಾವಿನ್ಯತೆಗಾಗಿ ಸಂವರ್ಧನೆಯ ಹೊಸತನ ಇರಲಿ. ಹೊಸ ವಿಚಾರಗಳನ್ನು ಓದಿ. ಮನಸ್ಸು ಒತ್ತಡದಿಂದ ದೂರವಾಗುತ್ತದೆ. ಚಂಚಲತೆ ದೂರವಾಗಲು ಇದು ವಜ್ರಾಯುಧವೇ ಸರಿ. ಭಯ ಪಡುವ ಅವಶ್ಯಕತೆ ಇಲ್ಲ. ದುರ್ಗಾ ಶಕ್ತಿಯನ್ನು ಸಂಕೇತಿಸುವ ಶುಕ್ರ ಗ್ರಹ, ಹೂ ಹಣ್ಣು ವ್ಯಾಪಾರದಿಂದ ಸಮೃದ್ಧಿಗೆ ದಾರಿ ಮಾಡುವ ಶಕ್ತಿ ಪಡೆದಿದೆ. ಹನಿ ಹನಿ ಕೂಡಿದರೆ ಹಳ್ಳ. ಹಾಗೆಯೇ ಚಿಕ್ಕ ಬಂಡವಾಳದಿಂದ ಪ್ರಾರಂಭಿಸಿ.

 ಪರಮೇಶ್ವರಪ್ಪ ಸುತಗಟ್ಟಿ, ಗುಡ್ಡಾಪುರ

  ತಂಗಿಯರ ಮದುವೆ ಮಾಡಿ ದಣಿದಿದ್ದೇನೆ. ಕೊನೆಯ ತಂಗಿಯೊಬ್ಬಳಿದ್ದಾಳೆ. ಮದುವೆಯಾದರೆ ನನಗೆ ಸಮಾಧಾನ. ಬಡತನ ಹುಟ್ಟು ಶಾಪವಾಗಿದೆ. ಆರೋಗ್ಯ ಚಿಂತಾಜನಕ. ತಂದೆತಾಯಿಗಳಿಲ್ಲ. ಹೆಂಡತಿಯಿಂದ ಸುಖವಿಲ್ಲ. ಹೇಗೆ ಈ ಚಕ್ರವ್ಯೂಹದಿಂದ ಹೊರಬರಲಿ? ಪರಿಹಾರ ತಿಳಿಸಿ. 

  ನಿಮ್ಮ ಹೃದಯ ಸೋದರಿಯರಿಗಾಗಿ ಮಿಡಿದಿದೆ. ನಿಜಕ್ಕೂ ಒಬ್ಬ ಉನ್ನತ ಮನುಷ್ಯತ್ವ ನಿಮ್ಮದು. ನವೆಂಬರ್‌ 3 ರಂದು ಸಾಡೇಸಾತಿ ಮುಕ್ತಾಯಗೊಳ್ಳಲಿದೆ. ಇದು ನಿಮ್ಮ ಕತ್ತಲ ದಾರಿಯಾಚೆಗಿನ ಬೆಳಕಿಗಾಗಿನ ಸಂವೇದನೆಗೊಂದು ದಾರಿ ನಿರ್ಮಿಸಲಿದೆ. ತಂಗಿಯ ಮದುವೆ ಸಾಧ್ಯ. ಶ್ರೀ ದೇವಿ ದುರ್ಗಾಷ್ಟಕ ಓದಿ. ಕ್ಷೇಮವಿದೆ. 

 ವಿಶ್ವೇಶ್ವರ ಭೂಮಿಪುತ್ರ, ಬೆಳಗಾವಿ

 ಗುರೂಜಿ, ಅನೇಕ ದಿನಗಳಿಂದ ಹಾವಿನ ಬಗೆಗೇ ಕನಸುಗಳು ಬೀಳುತ್ತದೆ. ನಿರ್ಧಾರ ಮಾಡಿ ಕಾರ್ಯಗಳೆಲ್ಲ ಮುಂದೂಡಿಕೆಯಾಗುತ್ತವೆ. ಅಣ್ಣನಿಗೆ ಒಂದು ಅಪಘಾತದಲ್ಲಿ ಕೈಗೆ ಹಾನಿಯಾಯ್ತು. ತಂದೆ ತಾಯಿ ಕಂಗೆಟ್ಟಿದ್ದಾರೆ. ಮನಸ್ಸಿಗೆ ಸುಖವಿಲ್ಲ. ಪರಿಹಾರ ಏನು?

  ದಿನವೂ ರಾಹು ಕವಚ ಓದಿ. ಚಿಕ್ಕ ನಾಗರ ಮೂರ್ತಿಗೆ ಹಾಲೆರೆದು ನರಸಿಂಹಾಷ್ಟಕ ಓದಿ. ನಿಮ್ಮ ಜಾತಕದಲ್ಲಿ ಆಗಸ್ಟ್‌ 13ಕ್ಕೆ ರವಿ ದಶಾ ಕಾಲ ಪ್ರಾರಂಭ. ಒಳ್ಳೆಯ ದಿನಗಳು ಒದಗಿ ಬರಲಿವೆ. 


Trending videos

Back to Top