CONNECT WITH US  

​ಜಾತಕ ಫ‌ಲ : ಜುಲೈ 11

  ಶ್ರೀನಿಧಿ ಸಂಗಣ್ಣನವರ, ಹಾವೇರಿ

 ನನ್ನ ಸಮಸ್ಯೆ ವಿಶಿಷ್ಟವಾಗಿದ್ದು ರಾತ್ರಿಯ ಹೊತ್ತು ಸಾಯುತ್ತೇನೆ ಎಂಬ ಭೀತಿ ಆವರಿಸಿ ನಿದ್ದೆ ಇಲ್ಲದೆ ಒದ್ದಾಡುತ್ತಲಿದ್ದೇನೆ. ಹಗಲು ಕೆಲಸದ ಸಮಯದಲ್ಲಿ ನಿದ್ದೆ ಬರುತ್ತದೆ. ಜನರ ಅಸಹನೆ, ನಿಂದೆ, ಪರಿಹಾಸ್ಯಗಳಿಂದ ಬೇಸತ್ತು ಹೋಗಿದ್ದೇನೆ. ಭೀತಿಯಿಂದ ಹೇಗೆ ಹೊರಬರಲಿ?

    ನಿಮ್ಮ ಜಾತಕದಲ್ಲಿ ಚಂದ್ರ ದೋಷ ಅಪಾರವಾಗಿದ್ದು ಧೈರ್ಯವನ್ನು ಒದಗಿಸುವ ಕುಜನನ್ನು ಶನೈಶ್ಚರ ದೃಷ್ಟಿಯಿಂದ ಕುಗ್ಗಿಸಿದ್ದಾನೆ. ರವಿ ಬುಧ ಯೋಗಕ್ಕೆ ಶಕ್ತಿ ಇದ್ದರೂ, ರವಿ ನೀಚನಾಗಿದ್ದಾನೆ. ಒಳ ಮನಸ್ಸಿನ ಅಂತರ್ಗತ ಭಯ, ಸೂಕ್ಷ್ಮವಾದಷ್ಟು ಬುದ್ಧಿಯ ಬಲವು ತಂದಿರುವ ಅಧೀರತೆ (ರಕ್ಷಣೆಯ ವಿಚಾರವಾಗಿ, ಸುತ್ತ ಮುತ್ತಲಿನ ಸರಿಯಿಲ್ಲದ ನಡೆಯತೆಯ ಜನರ ವಿಕೃತಿಯ ವಿಚಾರವಾಗ) ನಿಮ್ಮನ್ನು ಕಂಗೆಡಿಸಿದೆ. ಕಾಲಭೈರವಾಷ್ಟಕ ಓದಿ. ಪ್ರತಿ ನಿತ್ಯ ಸೌರ ಪಂಚಾಕ್ಷರಿ ಜಪವನ್ನು ಪಠಿಸಿ. ಚಂದ್ರನು ನಕಾರಾತ್ಮಕ ವಿಚಾರಗಳ ಕುರಿತು ನಿಮ್ಮ ಸ್ಪಂದನೆಯನ್ನು ವಿಸ್ತರಿಸುತ್ತಾನೆ. ಚಂದ್ರ ಪೀಡಾ ನಿವಾರಣಾ ಸ್ತೋತ್ರ ಓದಿ. ದುರ್ಗಾಷ್ಟಕವನ್ನು ಓದಿ, ಬೆಳಗಿನ ಹಣತೆಯನ್ನು ದಿಟ್ಟಿಸುವ, ದುರ್ಗೆಯನ್ನು ನೆನೆಯುತ್ತ ಕಣ್ಣು ಮುಚ್ಚುವ ಕೆಲಸ 15ನಿಮಿಷಗಳ ಕಾಲ ರಾತ್ರಿ ಮಲಗುವ ಮುನ್ನ ದೇವರ ಮಂಟಪದ ಎದುರು ನಿರ್ವಹಿಸಿ. ಭಯವನ್ನು ಕಳಕೊಳ್ಳುವಿರಿ. 

  ಉಪೇಂದ್ರ ನಾಯಕ್‌, ಅಬುಧಾಬಿ 

  ನನ್ನ ಮತ್ತು ಶ್ರೀಮತಿಯ ಜಾತಕ ಕಳುಹಿಸಿದ್ದೇನೆ. ಮದುವೆಯಾಗಿ ಹತ್ತು ವರ್ಷಗಳೇ ಕಳೆದವು. ಮಕ್ಕಳ ಭಾಗ್ಯದಿಂದ ವಂಚಿತರಾಗಿದ್ದೇವೆ. ಆರು ಸಲ ಗರ್ಭಪ್ರಸವದ ತೊಂದರೆ ಎದುರಾಯ್ತು. ಉಳಿದವರಿಗೆ ಸಮಸ್ಯೆಯಾಗದ ವಿಚಾರ ನಮ್ಮ ಪಾಲಿಗೇಕೆ ಮರೀಚಿಕೆಯಾಗಿದೆ? ಒಂದು ಮಗು ಅಂತ ಭಾಗ್ಯದಲ್ಲಿದೆಯೇ? ಪರಿಹಾರವೇನು ಎಂಬುದನ್ನು ದಯವಿಟ್ಟು ತಿಳಿಸಿ. 

  ನಿಮ್ಮ ಜಾತಕದಲ್ಲಿ ಪೂರ್ವ ಪುಣ್ಯ ಸ್ಥಾನದಲ್ಲಿನ ಶನೈಶ್ಚರನೇ ದೊಡ್ಡ ತಲೆ ನೋವಾಗಿದ್ದಾನೆ. ಪ್ರಬಲನಾದರೂ ಕುಜನ ದೃಷ್ಟಿಯಿಂದಾಗಿ ದುರ್ಬಲನಾಗಿದ್ದಾನೆ. ಕುಜನು ನೀಡಬೇಕಾದ ಲಾಭವನ್ನು ಶನೈಶ್ಚರನ ದೃಷ್ಟಿ ತಪ್ಪಿಸುತ್ತಲಿದೆ. ಶುಕ್ರನೂ ಕುಜನಿಂದ ಬಾಧಿತನಾಗಿದ್ದಾನೆ. ಆದರೆ ನಿಮ್ಮ ಪಾಲಿಗೆ ಇನ್ನೂ ಒಂದು ವರ್ಷದೊಳಗಾಗಿ ಶುಭ ಸುದ್ದಿಗೆ ಮಾರ್ಗ ಇದೆ. ವಿಶಿಷ್ಟವಾದ ರಾಜ ಯೋಗ, ಚಂದ್ರನಿಂದ ಗಮನಿಸಲಾಗುವ ಧರ್ಮ ಕರ್ಮಾಧಿಪ ಯೋಗ ಸಂತಾನ ಭಾಗ್ಯವನ್ನು ಒದಗಿಲಸಲೇಬೇಕು. ಹುಟ್ಟಿದ ಮಗುವನ್ನು ರಕ್ಷಿಸುವ ಜವಾಬ್ದಾರಿ ಗುರುತರವಾಗಿರುತ್ತದೆ. ಆಯಸ್ಸಿನ ತೊಂದರೆ ಅಲ್ಲ. ಮಗುವಿನ ಮನೋ ಬಲ, ನಯವಿನಯಗಳ ಬಗೆಗಿನ ಪ್ರಾಜ್ಞ ಸಂಸ್ಕಾರಗಳ ಬಗ್ಗೆ ಗಮನ ಹರಿಸಲೇ ಬೇಕು. ಮಕ್ಕಳಿಲ್ಲದ ತೊಂದರೆಯು ನೀಗಿ, ಮಗು ಬಂದ ಮೇಲಿನ ಸಮಸ್ಯೆಗಳ ಬಗೆಗೂ ಅವಕಾಶಗಳಿವೆ. ಈ ಸೂಕ್ಷ್ಮವಾದ ವಿಚಾರವನ್ನು ತೊಂದರೆಯು ನೀಗಿ, ಮಗು ಬಂದ ಮೇಲಿನ ಸಮಸ್ಯೆಗಳ ಬಗೆಗೂ ಅವಕಾಶಗಳಿವೆ. ಈ ಸೂಕ್ಮವಾದ ವಿಚಾರವನ್ನು ಚೆನ್ನಾಗಿ ಗ್ರಹಿಸಿಕೊಂಡಿರಿ. 

  ಲಕ್ಷಮ್ಮ ನಾಗೇಶ, ಸೊಪ್ಪಿನ ಕೊಪ್ಪ

 ನನ್ನ ಬಲಗಣ್ಣು ಈಗ ಆರು ತಿಂಗಳಿನಿಂದ ತುಂಬಾ ಅದುರುತ್ತಿದೆ. ಯಾವುದಾದರೂ ತೊಂದರೆಯ ಮುನ್ಸೂಚನೆಯೇ ? ಪರಿಹಾರ ಇದ್ದರೆ ತಿಳಿಸಿ. 

  ಭಾರತೀಯ ಜ್ಯೋತಿಷ್ಯ ಕಣ್ಣಿನ ಅದುರುವಿಕೆಯ ಬಗೆಗೆ ಎಲ್ಲೂ ವ್ಯಾಖ್ಯಾನ ಮಾಡಿಲ್ಲ. ಶನೈಶ್ಚರ ಹಾಗೂ ರವಿ ಸಂಬಂಧೀ ಬಿಕ್ಕಟ್ಟುಗಳು ನರ ಮಂಡಲದ ಮೇಲೆ ಉತ್ತಮವಲ್ಲದ ಪರಿಣಾಮಗಳನ್ನು ನೀಡುತ್ತಿವೆ ಎಂದು ಅನಿಸುತ್ತಿದೆ ಧನ್ವಂತರಿ ಅಷ್ಟೋತ್ತರ, ಮಂಗಳ ಚಂಡಿಕಾ ಸ್ತೋತ್ರ ಓದಿ. ಸೂಕ್ತವಾದ ವೈದ್ಯರ ಬಳಿಯೂ ಈ ವಿಚಾರದಲ್ಲಿ ಸಂಪರ್ಕ ನಡೆಸಿ. ಅವರ ಸಲಹೆಗಳೂ ಉಪಯೋಗಕ್ಕೆ ಬರುತ್ತದೆ. 

Trending videos

Back to Top