CONNECT WITH US  

ಜಾತಕ ಫ‌ಲ : ಜುಲೈ 18

ಮೃತ್ಯುಂಜಯ, ಶಿಗ್ಗಾಂವ್‌

ನನಗೆ ಅಲರ್ಜಿಯ ತೊಂದರೆಗಳಾಗುತ್ತಿದ್ದು ಮೂಗು ಪ್ರತಿ ದಿನ ನಿದ್ದೆಯ ಸಮಯದಲ್ಲಿ ಕಟ್ಟಿ ನಿದ್ದೆಯೇ ದೂರವಾಗುತ್ತದೆ. ಮಾರನೆಯ ದಿನದ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವುದಾಗುತ್ತದೆ. ತುಂಬಾ ಕೃಶನಾಗಹತ್ತಿದ್ದೇವೆ. ಮದುವೆಯಾಗುತ್ತಿಲ್ಲ. ಅನುರೂಪವಾದ ಕನ್ಯೆ ಸಿಗಬಹುದೆ? ಯಾಕೋ ನಿರಾಸೆಯೇ
ಜೀವನವಾದಂತಿದೆ. ಪರಿಹಾರ ಸೂಚಿಸಿ.

- ಅಲರ್ಜಿಯ ವಿಚಾರ ಬುಧನ ಸಾಂಗತ್ಯ ಸೂರ್ಯನ ಬಿಸಿ ಊರಿಯಲ್ಲಿ ಜಲ ರಾಶಿಗೆ ಸ್ಥಾಯಿಗೊಂಡಿದ್ದು, ಲಗ್ನ ಭಾವವು ರಾಹುವಿನ ನಕ್ಷತ್ರದಿಂದಾಗಿ ಕೊಂಚ ವಿಷಮಯವಾಗುತ್ತದೆ.
ದುರ್ದೈವವಶಾತ್‌ ಶನೈಶ್ಚರ ಸ್ವಾಮಿಯು ಬಾಳ ಸಂಗಾತಿಯ ಮನೆಯನ್ನು ದೃಷ್ಟಿಸಿರುವುದರಿಂದ ಭಾಗ್ಯದ ಭಾಗವಾದ ವೈವಾಹಿಕ ಮಂಗಲ ಕಾರ್ಯವನ್ನು ನಿಧಾನವಾಗಿಸುತ್ತಿದ್ದಾನೆ. ಆದರೆ ಉತ್ತಮ ಸಂತಾನ ಭಾಗ್ಯವು ನಿಮಗೆ ಇದ್ದಿರುವುದರಿಂದ 2016 ಮಧ್ಯ ಭಾಗದೊಳಗಾಗಿ ಮದುವೆಯು ಮಂಗಳಮಯವಾಗಿ ನೆರವೇರಬೇಕೆಂಬುದು ದೈವೇಚ್ಛೆಯಾಗಿದೆ.ಫ್ರಿಡ್ಜ್ನ ತಿನಿಸು, ಪೇಯ, ಮನೆ ಧೂಳು, ಎಣ್ಣೆಯ ಜಿಡ್ಡುಗಳಿಂದ ದೂರವಿರಿ. ಪ್ರತಿ ದಿನ ಬುಧ ಪೀಡಾ ನಿವಾರಣಾ ಸ್ತೋತ್ರ, ರಾಹು, ಕವಚ, ದಶರಥ ರಾಜ ರಚಿತ ಶನಿ ಸ್ತೋತ್ರಾವಳಿಗಳನ್ನು ಓದಿ. ಸಂಕಲ್ಪ ಸಿದ್ಧಿಗೆ ದಾರಿ ಲಭ್ಯ.

„ ಶಾಂತಕುಮಾರಿ ಶೆಟ್ಟಿ, ಅಥೆನ್ಸ್‌

ಒಮ್ಮೆಗೇ ಆರ್ಥಿಕವಾದ ದುರ್ಭರತೆಗೆ ಒಳಗಾಗಿದ್ದೇವೆ. ಇಂಥದೊಂದು ಸ್ಥಿತಿ ಬರಬಹುದೆಂಬ ಕಲ್ಪನೆ ಇರಲಿಲ್ಲ. ಇದ್ದಿರುವ ಅಲ್ಪ ಬಂಡವಾಳದೊಂದಿಗೆ ಯುರೋಪದ ರಾಷ್ಟ್ರ ( ಫ್ರಾನ್ಸ್‌ ಬೆಲ್ಜಿಯಂ ಯಾ ಡೆನ್ಮಾರ್ಕನಲ್ಲಿ ) ಚಿಕ್ಕ ರೆಸ್ಟುರಾ ಪ್ರಾರಂಭಿಸಲು ಮನಸ್ಸು ಯೋಜನೆ ಹಾಕಿದೆ. ಇದರಲ್ಲಿ ಜಯಶೀಲರಾಗಿ ಹೊಮ್ಮಲು ಅವಕಾಶವಿದೆಯೇ? ಪರಿಹಾರ ಇದೆಯೇ?

- ಎಲ್ಲಾ ಕಾರ್ಯಗಳಿಗೂ ಒಂದು ಕಾರ್ಯಕಾರಣ ಸಂಬಂಧ ವಿರುತ್ತದೆ. ಬುಧನು ಸ್ಪಷ್ಟವಾದ ನೀಚ ಭಂಗ ರಾಜಯೋಗ ಪಡೆದವ ನಾದ್ದರಿಂದ ಬುಧ ದಶಾದ ಶುಕ್ರ ಭುಕ್ತಿಯ ಸಮಯ ಇದಾಗಿದ್ದು, ಗುರು ಬಲವೂ (ಜುಲೈ 14ರಿಂದ) ಒದಗಿ ಬರಲಿದೆ. ನಿಮ್ಮ ಕನಸಿನ ಯೋಜನೆಯನ್ನು ಸಾಕಾರಗೊಳಿಸಿ. ನಿಮ್ಮ ಮನೆಯವರ ಕಮ್ಯುನಿಕೇಷನ್‌ ಸ್ಕಿಲ್‌ ಅದ್ಬುತವಾಗಿದೆ. ಆದರೆ ತಾಪತ್ರಯದಾಯಕನಾದ ಮಂಗಳನಿಂದ ಕೋಪ ಹೆಡೆ ಎತ್ತುತ್ತದೆ. ನಿಯಂತ್ರಣ ಬೇಕೇ ಬೇಕು. ಪೂರ್ಣ ಕುಂಭದಲ್ಲಿನ ನೀರಿನ ಅಭಿಷೇಕ ಒಂದು ಬೆಳ್ಳಿಯ ಪುಟ್ಟ ನಾಗ ಪ್ರತಿಮೆಗೆ ಮಾಡಿ, ಕೆಂಪು ಹೂ ಮತ್ತು ಅರಿಷಿಣ ಪುಡಿ, ಕುಂಕುಮ ಬೆರೆಸಿದ ಅಕ್ಷತದೊಂದಿಗೆ ಆರಾಧಿಸಿ. ನಿಶ್ಚಿತವಾದ ಗೆಲುವಿಗೆ ಅವಕಾಶ ಇದೆ.

„ ಮಂಜಪ್ಪ, ಗೋಣಿಬೀಡು

ಏಕಾಏಕಿ ಸುಸ್ತಾಗಿ ಎರಡು ತಿಂಗಳ ಹಿಂದೆ ಜ್ಞಾನ ತಪ್ಪಿ ಬಿದ್ದೆ.
ಮಕ್ಕಳನ್ನು ಚಿಕ್ಕವರು. ಹೃದಯದ ಬ್ಲಾಕ್ಸ್‌ ಇದೆ ಎಂಬುದು ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಅವಶ್ಯಕವಾಗಿದೆ. ಹೆದರಿಕೆ ಕಾಡಿದೆ. ಮಕ್ಕಳು ಚಿಕ್ಕವರು.
ಹಣಕ್ಕೆ ತೊಂದರೆ ಇಲ್ಲ. ಆದರೆ ಸುಲಲಿತವಾಗಿ ಆದೀತೆ?

- ಅನವಶ್ಯಕವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಗುರು ಬಲ, ಗುರು ದಶಾ, ಮರಣ ಸ್ಥಾನಕ್ಕೆ ಗುರು ದೃಷ್ಟಿ ಸಿದ್ಧಿ ಇದು ಮಕ್ಕಳು ಅನಾಥರಾಗುವುದಿಲ್ಲ. ಧನ್ವಂತರಿ ಅಷ್ಟೋತ್ತರ ಪ್ರತಿ ದಿನ ಓದಿ. ಚಿಕ್ಕ ಚಿಕ್ಕ ಹಣತೆಗಳಲ್ಲಿ ( ಎಂಟು ಹಣತೆಗಳ ನಾಲ್ಕು ಗುಂಪು) ಶಿವನಿಗೆ ದೀಪ ಬೆಳಗಿ. ಕ್ಷೇಮವಿದೆ

Trending videos

Back to Top