CONNECT WITH US  

ಜಾತಕ ಫ‌ಲ : ಅಗಸ್ಟ್‌ 1

  ಅನಂತ ಶೇಟಿಯಾ, ಬಾಂದ್ರಾ

  ನನಗೆ ವಿಚಿತ್ರವಾದ ಅನುಭವವಾಗುತ್ತಿದ್ದು, ನಿದ್ದೆಯಲ್ಲಿ ನನ್ನ ಸಾವು ಸಂಭವಿಸಿದಂತೆ ಅನಿಸುತ್ತದೆ. ನನ್ನ ಶವ ಸಂಸ್ಕಾರವನ್ನು ನಾನೇ ಮಾಡಿಕೊಂಡಂತೆ ಆಗುತ್ತದೆ. ನನ್ನನ್ನೇ ನಾನು ಸುಡುವುದೆಂತು ಎಂಬ ವಿಚಾರ ಕನಸಿನಲ್ಲೇ ಭಯತರುವ ವಿಚಾರವಾಗಿ ಎದ್ದಾಗ ಬೆವೆತಿರುತ್ತೇನೆ. ನಿಜಕ್ಕೂ ಸಾಯುತ್ತೇನೆ ಎಂಬ ಭಾವನೆ, ತಲ್ಲಣಗಳು ಒಗ್ಗೂಡಿ ತುಂಬಾ ಕಷ್ಟವಾಗುತ್ತದೆ. ನಂತರ ನಿದ್ದೆ ಬಾರದು ಗುರೂಜಿ, ಪರಿಹಾರವಿದೆಯೇ?

  ನಿಮಗಿದು ವಿಚಿತ್ರ ಅನುಭವವಂತೂ ಹೌದು. ಆದರೆ, ಹೆಸರು ಬೇಡ, ಬ್ರೆಝಿಲ್‌ ದೇಶದ ಗಣ್ಯಾತಿ ಗಣ್ಯರೊಬ್ಬರಿಗೆ ಇಂಥದೇ ಅನುಭವದ ತೊಂದರೆ ಆಗಿದ್ದು ಸುದ್ದಿಯಾಗಿತ್ತು. ನಿಮ್ಮ ಜಾತಕದಲ್ಲಿನ ಚಂದ್ರ,ರಾಹು, ಕುಜ, ಮಾಂದಿಗಳ ಸಂಯೋಜನೆ ಅವರ ಜಾತಕದಲ್ಲಿ ಇದ್ದಂತೆಯೇ ಇದೆ. ಆದರೆ ಉಳಿದ ಗ್ರಹಗಳು ಬೇರೆ ರೀತಿಯ ಜೋಡಣೆಯಲ್ಲಿವೆ. ಕ್ಷೀಣ ಚಂದ್ರನ ವಿಷಯ, ದುರ್ಬಲ ಭಾವಕ್ಕೆ, ರಾಹುವಿನ ವಿಷದ ಹೆಡೆ, ಕುಜನ ಮೂಲಕವಾಗಿ ಇಂದ್ರಿಯಾತೀತ ಅನುಭವಗಳಿಗೆ  ಒಯ್ಯುತ್ತಿದೆ. ಆದರೆ ಉಳಿದ ಗ್ರಹಗಳು ಬೇರೆ ರೀತಿಯ ಜೋಡಣೆಯಲ್ಲಿವೆ. ಕ್ಷೀಣ ಚಂದ್ರನ ವಿಷಮ, ದುರ್ಬಲ ಭಾವಕ್ಕೆ, ರಾಹುವಿನ ವಿಷದ ಹೆಡೆ, ಕುಜನ ಮೂಲಕವಾಗಿ ಇಂದ್ರಿಯಾತೀತ ಅನುಭವಗಳಿಗೆ ಒಯ್ಯುತ್ತಿವೆ.  ಆದರೆ ಇಂದ್ರಿಯಗಳ ಮಿತಿಗೆ ಅನುಭವ ಸೆರೆಯಾಗಿದ್ದು ಹೊರದಾಟದಿರುವಾಗ ಎಚ್ಚರಿಕೆಯಾಗಿರುತ್ತದೆ. ಕುಜ ಚಂದ್ರರಿಂದಾಗಿ ಹೌಹಾರುವ ಭಯ ಪದರುಗಟ್ಟುತ್ತಿದೆ. ಶ್ರೀ ಕಾಲಭೈರವ ಅಷ್ಟೋತ್ತರ ಓದಿ. ಶ್ರೀ ಧನ್ವಂತರಿ ಹಾಗೂ ಶಾಕಾಂಬರಿ ಅಷ್ಟೋತ್ತರ ಓದಿ. ತೊಂದರೆಗೆ ತಡೆ ಸಾಧ್ಯ. ಈ ಅನುಭವವನ್ನು ದಾಖಲಿಸಿ. ಭಯ ಪಡದಿರಿ. ಒಳ್ಳೆಯ ಪುಸ್ತಕದಿಂದ ಹೆಸರು, ಕೀರ್ತಿ ಲಭ್ಯ. 

  ಅನುಸೂಯ ಗಜೇಂದ್ರಪ್ಪ, ಮಾನ್ವಿ

  ಸ್ವಾಮಿ, ಜಾತಕ ಕಳಿಸಿದ್ದೇನೆ. ನೋಯುವ, ಬೇಯುವ ಅನುಭವದಾಚೆಗೆ ಬದುಕು ಸುಖದ ಹಳಿಗಳ ಮೇಲೆ ಚಲಿಸಲೇ ಇಲ್ಲ. ಮನೆಯವರು ಒಂದು ದಿನ ದಿವ್ಯ ಅನುಭವ ಒಂದನ್ನು ಪಡೆಯಲು ದೇಶಾಂತರಕ್ಕೆ ಹೋಗಿಬರುತ್ತೇನೆಂದು ಹೋದವರು 14 ವರ್ಷಗಳೇ ಕಳೆದವು. ವಾಪಸು ಬಂದೇ ಇಲ್ಲ. ಮಗಳು ಬೆಳೆದು ನಿಂತಿದ್ದಾಳೆ. ಮದುವೆ ಆಗಬೇಕಿದೆ. ದಾರಿ ಕಾಣದೆ ಒದ್ದಾಡುತ್ತಿದ್ದೇನೆ. ಮನೆಯವರು ವಾಪಸು ಬರಬಹುದೆ?

  ನಿಮ್ಮ ಜಾತಕದಲ್ಲೀಗ ಶುಭ ಯೋಗವನ್ನು, ದುಷ್ಟ ಯೋಗವನ್ನೂ ಬೆಸೆದ ಶನೈಶ್ಚರ, ಶುಕ್ರ, ಕುಜ ಗ್ರಹಗಳ ಪ್ರಭಾವಗಳ ಮಿಶ್ರ ಭಾವದಲ್ಲಿ ಶುಕ್ರ ದಶಾ ನಡೆಯುತ್ತಿದೆ. ಮಗಳ ಮದುವೆಯಾಗುತ್ತದೆ. ಮನೆಯವರು ಬದುಕಿದ್ದಾರೆ. ಆದರೆ ಹಿಂದಿರುಗಿ ಬರುವ ವಿಚಾರ ಸಂದಿಗªವಾಗಿದೆ. ಮಗಳು ನಿಮ್ಮ ಸಂತೋಷಕ್ಕೆ  ಕಾರಣಳಾಗುತ್ತಾಳೆ. ಅರಿಷಿಣ ಕೊಂಬಿಗೆ (ಚಿಕ್ಕದು) ರೇಶಿಮೆ ದಾರ ಕಟ್ಟಿಟ್ಟು ದೇವರ ಪೀಠದಲ್ಲಿ (ಶುಕ್ರವಾರದಂದು) ಇರಿಸಿ ಶ್ರೀ ಐಂದ್ರಿತಾ ಸಹಸ್ರ ನಾಮಾವಳಿ ಓದಿ. ಅರಿಷಿಣ ಕೊಂಬಿನ ದಾರವನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಬದಲಿಸಿ. ಪ್ರತಿ ದಿನ ಶ್ಯಾಮಲಾಷ್ಟೋತ್ತರ ಪಠಿಸಿ. ಇಚ್ಛಿತ ಸಂಕಲ್ಪಗಳು ನಿಮ್ಮ ಜಾತಕದ ಗುರುವಿನ ಬಲದಿಂದ ನೆರವೇರಲು ಸಾಧ್ಯ. 

 ಮಲ್ಲಮ್ಮ ಪೋತೆ, ಸೋಲಾಪುರ

  ಸ್ವಾಮಿ, ನಾನು ವೈಢೂರ್ಯವನ್ನು ಧರಿಸಬಹುದೆ?

 ಇನ್ನು ಮೂರು ತಿಂಗಳ ನಂತರ (22-10-2015) ಕೇತು ದಶಾ ಪ್ರಾರಂಭ. ಅಂದಿನಿಂದ 2-10-2022ರವರೆಗೆ ವೈಢೂರ್ಯವನ್ನು  ಧರಿಸಿ. ಶ್ರೀಗಕಾರಪೂರ್ಣ ಗಣೇಶ ಅಷ್ಟೋತ್ತರ ಪಠಿಸಿ. ಕೇತುವಿನಿಂದ ಸಿದ್ಧಿ. 

Trending videos

Back to Top