CONNECT WITH US  

​ಜಾತಕ ಫ‌ಲ: ಅಗಸ್ಟ್‌ 8

  ಮಾಧುರಿ ಷಣ್ಮುಗನ್‌, ಗುಂಟೂರ್‌
  ಸ್ವಾಮಿ, ಕಳಿಸಿರುವ ಈ ಜಾತಕವನ್ನು ಪರಿಶೀಲಿಸಿ. ನನ್ನ ಮಗಳ ಜಾತಕವಾಗಿದೆ. ಈ ಆರು ವರ್ಷಗಳಿಂದ ಮದುವೆಗಾಗಿ ಪ್ರಯತ್ನಿಸುತ್ತಿದ್ದೇನೆ. ಕುಜಿ ದೋಷ ಇದೆಯಂದು ತಿಳಿಸುತ್ತ ಮದುವೆಯ ಗಂಡು ತಪ್ಪಿಹೋಗುತ್ತಿದೆ. ಕುಜ ದೋಷಕ್ಕೆ ಪರಿಹಾರವಿದೆಯೇ?

   ಈ ಜಾತಕಕ್ಕೆ ಕುಜ ದೋಷವಿಲ್ಲ. ಚಂದ್ರನ ಜೊತೆ ಇರುವ ಗುರು ಲಗ್ನ ಭಾವದಲ್ಲಿದ್ದು ಗಜಕೇಸರಿ ಯೋಗ ನಿರ್ಮಿಸಿದ್ದಾನೆ.  ಕುಜನು ಉಚ್ಚನಾಗಿದ್ದು, ಗುರು ಹಾಗೂ ಚಂದ್ರನ ಜೊತೆ ಉತ್ತಮವಾದ ಯೋಗಗಳು ಸೃಷ್ಟಿಗೆ ಕಾರಣನಾಗಿದ್ದಾನೆ. ಕುಜ ದೋಷವು ನಿಯಮಗಳ ಪ್ರಕಾರ ಅನೇಕ ಅಪವಾದಗಳ ಹಿನ್ನೆಲಯಲ್ಲಿ ದೂರವಾಗಿರುತ್ತದೆ. ಕೊರಗಲೇ ಬೇಡಿ. ಸದ್ಯ ಗುರು ಬಲವೂ ಇದೆ. ರಾಹು ದಶಾಕಾಲವಾಗಿದ್ದರಿಂದ ವಿಳಂಬವಾಗಿದೆ. ನಿಜ ಹೇಳಬೇಕೆಂದರೆ ರಾಜ ಯೋಗದ ಜಾತಕವಾಗಿದ್ದು ಮಗಳ ಮದುವೆ ಬರುವ ಜನವರಿಯ ಒಳಗೆ ಆಗುತ್ತದೆ. ಸುದೈವವಶಾತ್‌ ರಾಹು ದಶಾ ಮುಗಿಯುತ್ತದೆ. ಗುರು ದಶಾ ಕಾಲ ಉತ್ತಮವಾದುದನ್ನು ನೀಡಲು ಸಶಕ್ತವಾಗಿದೆ. ಶ್ರೀ ಪಾರ್ವತಿ ಸಹಸ್ರ ನಾಮಾವಳಿ ಓದಲಿ. 

   ಅನಂತ ಶೆಟ್ಟಿ, ಕುಂದಾಪುರ

   ಸ್ವಾಮಿ ನನ್ನ ಮತ್ತು ಮಡದಿಯ ಜಾತಕಗಳನ್ನು ಲಗತ್ತಿಸಿದ್ದೇನೆ. ನಮಗೆ ಮದುವೆಯಾಗಿ ಆರು ವರ್ಷಗಳೇ ಕಳೆದವು. ಸಂತಾನವಿಲ್ಲ. ನಮ್ಮ ದಿನ ನಿತ್ಯವೂ ಜಗಳ. ಹೊಂದಾಣಿಕೆ ಇಲ್ಲ. ಮಕ್ಕಳ ಯೋಗ ಇದೆಯೇ? ನಮ್ಮ ಜಗಳಗಳು ನಿಯಂತ್ರಣಕ್ಕೆ  ಬರಲ್ಲವೇ? ಪರಿಹಾರಗಳೇನು?

  ಜಾತಕಗಳ ಪರಿಶೀಲನೆ ನಡೆಸಿದಾಗ ವಿಳಂಬವಾದ ಸಂತಾನ ಭಾಗ್ಯ ಎಂಬುದು ಸ್ಪಷ್ಟ. ಪ್ರತಿ ನಿತ್ಯ ಶ್ರೀ ಸಂತಾನ ಗೋಪಾಲಕೃಷ್ಣ ಜಪ ಮಾಡಿ. ಇಬ್ಬರೂ ಈ ಜಪದಲ್ಲಿ ನಂಬಿಕೆ ಇಡಬೇಕು. ಇನ್ನು ಜಗಳದ ವಿಚಾರದಲ್ಲಿ ರಾಹು ಕೇತುಗಳ ವಿಷಯ ಆವರಣಗಳು ನಿಮ್ಮಿಬ್ಬರನ್ನು ಇಕ್ಕಟ್ಟಿನಲ್ಲಿ ಇಡುತ್ತದವೆ. ಶಾಂತಿ, ಸಮಾಧಾನ, ಹೊಂದಾಣಿಕೆ, ಶ್ರೀ ಗೌರಿ ಅಷ್ಟೋತ್ತರ ಪಠಣ ಕಾರ್ತಿಕೇಯ ಸ್ತೋತ್ರ ಪಠಣಗಳೆಲ್ಲ ಒಗ್ಗೂಡಲಿ. ಅಂತರ್ಗತವಾದ ಅಹಂಗಳನ್ನು ಗೆಲ್ಲಲ್ಲು ಈ ಪಠಣಗಳು ಸಹಾಯ ಮಾಡುತ್ತದೆ. ವೈದ್ಯರ ಬಳಿ ಸಲಹೆ ಕೂಡ ಪಡೆಯಿರಿ. ಭಾಗ್ಯದ ಗುರುವಿಗೆ ಶಕ್ತಿ ಇರುವುದರಿಂದ ಮಕ್ಕಳಾಗದೇ ಇರಲು ಕಾರಣಗಳಿಲ್ಲ. ನಿಮ್ಮಿಬ್ಬರ ಹೊಂದಾಣಿಕೆ ಎಂಬು ಪ್ರಮುಖ ವಿಚಾರ ಸಂತಾನ ಭಾಗ್ಯಕ್ಕೆ ತಂತಾನೆ ಒಂದು ಉತ್ತಮ ತಳಹದಿ ನಿರ್ಮಿಸುತ್ತದೆ. 

  ಶೇಷಪ್ಪ ಬಳವಾಗಿ, ಗದಗ

  ನಮ್ಮ ಮಗನ ಜಾತಕ ಕಳುಹಿಸಿದ್ದೇನೆ. ಓದುತ್ತಲೂ ಇಲ್ಲ. ಸಿಟ್ಟು, ಅಸಹಕಾರ. ಹೇಳಿದ್ದನ್ನು ವಿರುದ್ಧ ದಾಟಿಯಲ್ಲೇ ಗ್ರಹಿಸುವ ಕ್ರಮದಿಂದ ದಿಕ್ಕೆ ತಪ್ಪಿದ್ದಾನೆ. ತಪ್ಪಿಸಿದ್ದಾನೆ. ಪ್ರತಿ ವಿಚಾರಕ್ಕೂ ಕೂಗಾಡುತ್ತಾನೆ. ಸ್ನೇಹಿತರನ್ನು ನಂಬಿ, ಕಷ್ಟ ಎದುರಾದಾಗ ನಮ್ಮನ್ನೂ ಕಂಗೆಡಿಸುತ್ತಾನೆ. ಪರಿಹಾರ ಏನು?

  ನಿಜವಾದ ಪ್ರಾರಬ್ಧ ಇದು. ಹದಿ ಹರೆಯದ ಹುಡುಗನಿಗೆ ಜೀವನಾನುಭವಗಳಿಲ್ಲ. ಹುಡುಗ ಒಳ್ಳೆಯವನಾಗುತ್ತಾನೆ. ಆದರೆ ಸಧ್ಯದ ಸ್ಥಿತಿ ತಲ್ಲಣಮಯವಾದುದು. ಮಗನ ಬಳಿ ಕುಳಿತು ಮಾತನಾಡಿ. ನಿಮ್ಮಿಬ್ಬರ ನಡುವಣ ಜಗಳ ಅವನ ಮುಂದೆ ನಡೆಯಬಾರದು. ಈ ವಿಚಾರ ಅವನ ಜಾತಕದಿಂದ ಸ್ಪಷ್ಟ. ಅವನು ಗೊಂದಲಗಳಿಂದ ತೀವ್ರ ಒತ್ತಡದಲ್ಲಿದ್ದಾನೆ. ಅವನ ಸದ್ಯದ ಪಂಚಮ ಶನಿ ಕಾಟವೂ ವಾಸ್ತವದ ಅಂಶಗಳಿಗೆ ಪೊರೆ ಕಟ್ಟಿದೆ. ಅವನಲ್ಲಿ ಧೈರ್ಯ ತುಂಬಿ. ರಾಮರûಾ ಸ್ತೋತ್ರ ಓದಿಸಿ. ಶನೈಶ್ಚರ ಪೀಡಾ, ಕೇತು ಪೀಡಾ ನಿವಾರಣಾ ಸ್ತೋತ್ರ ಓದಿಸಿ. ಅನುಭವಗಳ ಹಿನ್ನೆಲೆಯೊಂದಿಗೆ ಬುಧನು ಪ್ರಧಾನವಾಗುತ್ತಾನೆ. ಬುದ್ಧಿ ಬಲದ ಗಾಢವಾದ ಪರಿಣಾಮಕಾರಿ ಸಿದ್ಧಿ ಮುಂದೆ ಒದಗಲಿದೆ. 


Trending videos

Back to Top