CONNECT WITH US  

ಜಾತಕ ಫ‌ಲ : ಅಗಸ್ಟ್‌ 22

    ಟಿ.ಎನ್‌.ರುದ್ರೇಶ, ಯಳಂದೂರು 

  ಸ್ವಾಮಿ, ಜಾತಕ ಕಳಿಸಿದ್ದೇನೆ. ಚೆನ್ನಾಗಿಯೇ ದುಡಿಯುತ್ತಿದ್ದೇನೆ. ಆದರೆ ಅಮಾವಾಸ್ಯೆ, ಹುಣ್ಣಿಮೆಗಳಂದು ನಾನೇ. ಬೆಳೆಸಿದ ಬೆಳೆಯನ್ನು ನಾಶ ಮಾಡುವ ಮನೋ ಸಂಬಂಧಿ ದೌರ್ಬಲ್ಯ ಎದುರಾಗುತ್ತದೆ. ಮಕ್ಕಳಿಗೆ ಹೊಡೆಯಲು ಹೋಗುತ್ತವೆ. ನಮ್ಮ ತಂದೆಗೆ ಕೆಟ್ಟ ಶಬ್ದಗಳಲ್ಲಿ ಬೈಯುತ್ತೇನೆ. ನನಗೆ ತಾಯಿ ಇಲ್ಲ. ತಾಯಿ ನನ್ನ ಮೈಯಲ್ಲಿ ಬಂದಂತೆ ಆಗುವ ಅನುಭವ. ಏನಿದು ಮನಸ್ಸಿನ ಕಾಯಿಲೆಯೋ ಹೇಗೆ? ಏನು ಪರಿಹಾರ?

  ಮನೋ ವೈದ್ಯರನ್ನು ಸಂಪರ್ಕಿಸಿ. ಇದು ಲೌಕಿಕವಾದ್ದು. ಅಲೌಕಿಕತೆಗಾಗಿ ಶ್ರೀ ಚಾಮುಂಡೇಶ್ವರಿಯನ್ನು ಸ್ತುತಿಸಿ. ಸಪ್ತಶತಿ ಪಾರಾಯಣ ನಡೆಯುವಂತಾಗಲಿ ಮನೆಯಲ್ಲಿ. ಚಂದ್ರನು ಬುಧ ಮತ್ತು ರಾಹುಗಳೊಂದಿಗೆ ಕುಳಿತಿದ್ದಾನೆ. ಇದೂ ಅಷ್ಟಮ ಸ್ಥಾನದಲ್ಲಿ ಆಗಿದೆ. ಅಷ್ಟೊಂದು ಒಳ್ಳೆಯ ಮನೆಯಲ್ಲ ಇದು. ಬುಧನ ಉಪಸ್ಥಿತಿ ಚಂದ್ರನೊಟ್ಟಿಗೆ ಸೂಕ್ತವಲ್ಲ. ಇದರಿಂದ ಬುದ್ಧಿಗೆ ಮಂಕು ಕವಿಯಲು ದಾರಿಯಾಗುತ್ತದೆ. ಹುಣ್ಣಿಮೆ ಅಮಾವಾಸ್ಯೆಗಳಂದು ಗೋದಿ, ಅಕ್ಕಿ, ಹೆಸರು ಕಾಳು, ಬೇಳೆಗಳ ನೈವೇದ್ಯ ಒಂದನ್ನು (ಸಿಹಿ ತಿಂಡಿಯ ಮೂಲಕ) ಶಕ್ತಿ ಶಾಲಿನಿಯಾದ ಚಾಮುಂಡಿಗೆ ನೆರವೇರಿಸಿ, ಅದನ್ನು ಸೇವಿಸಿ. ಮನೆಯ ಸನಿಹದಲ್ಲಿರದೆ, ದೇವ ಮಂದಿರದಲ್ಲಿ ಶ್ರೀ ಲಲಿತಾ ಸಹಸ್ರನಾಮಾವಳಿ ಓದಿ. ಕ್ಷೇಮ. ರಾಹು ಕವಚವನ್ನು ಮತ್ತು ಸೂರ್ಯ ಕವಚ ಮಂತ್ರ ಭಾಗವನ್ನು ಪ್ರತಿ ದಿನ ಓದಿ. ಒಳ್ಳೆಯದಾಗಲಿದೆ. 

  ಶ್ರೀದೇವಿ ಎಂ.ಆರ್‌. ದಾವಣಗೆರೆ 

  ವಿಳಂಬದೊಂದಿಗೆ ಮದುವೆಯೇನೋ ಆಯ್ತು. ಜಾತಕ ಜೋಡಣೆಯಾಗುತ್ತದೆ ಎಂದೂ ಅಭಿಪ್ರಾಯ ಪಟ್ಟ ಕಾರಣ ಒಬ್ಬರೊಂದಿಗೆ ಮದುವೆಯೂ ಆಯ್ತು. ಈಗ ವಿಚ್ಛೇದನದ ಹಂತಕ್ಕೆ ಬಂದಿದೆ. ಪತಿರಾಯ ಒಳ್ಳೆಯವರು. ಅತ್ತೆ ಮಾವಂದಿರು ಕಿರಿಕಿರಿ. ಏನು ಪರಿಹಾರ? ನಮ್ಮ ಜಾತಕ ಕುಂಡಲಿಗಳನ್ನು ಕಳಿಸಿದ್ದೇನೆ.  ದಾರಿ ತೋರಿಸಿದರೆ ನಾನು ನಿರಾಳ. 

  ನಿಮ್ಮ ಅತ್ತೆ ಮಾವಂದಿರನ್ನು ನಿಮ್ಮೆದುರಿಗೆ ತಂದುಕೊಂಡು ಯೋಚನೆ ಮಾಡಬೇಡಿ. ಬೇರೆಯ ಮನೆ ಮಾಡಿ. ಅತ್ತೆ ಮಾವಂದಿರ ಬಳಿ ಹೋಗಿ ಬನ್ನಿ. ಮಂಗಳ ಚಂಡಿಕಾ ಸ್ತೋತ್ರಪಠಿಸಿ. ದಿನವೂ 27 ಬಾರಿ ಓದಿದರೆ ಒಳ್ಳೆಯದು. ನಿಮಗೆ ದಾರಿ ತೋರಿಸುವುದು ಎಂದರೆ ನಿರಾಳರಾಗಿ ಇರಿ. ಪ್ರತಿ ದಿನ ಶ್ರೀ ಐಂದ್ರಿತಾ ಸಿದ್ಧಿ ಮಂತ್ರ ಓದಿ. ನಿಮ್ಮ ಮನೆಯವರು ಚಂದ್ರಮೌಳೇಶ್ವರನನ್ನು ಧ್ಯಾನಿಸಲಿ. ವಿಚ್ಛೇದನ ತಡೆಯಲು ಪ್ರತ್ನಿಸಿ. ಸಾಡೇಸಾತಿಯ ಕಾಟ, ತುಸು ಹೋಯ್ದಾಡಿದರೂ ತೊಂದರೆಗೆ ತರಬಹುದು. 

 ರಾಘಣ್ಣ ಸಣ್‌ಹಳ್ಳ, ಶಿರಸಿ

  ಕನಸಿನಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ. ಒಮ್ಮೊಮ್ಮೆ ನಿದ್ದೆಯೇ ಬಾರದು. ನಿದ್ದೆಯಲ್ಲಿ ನಡೆದಾಡುವುದೂ ಇದೆ. ಗೋಡೆ, ಕಂಬಗಳಿಗೆ ಮುಖ ಬಡಿದುಕೊಂಡು ಯಾತನೆ ಅನುಭವಿಸಿದ್ದೇನೆ. ಚೌಡೇಶ್ವರಿಯ ಕಾಟ ಎಂದು ಅನ್ನುತ್ತಿದ್ದಾರೆ. ನಿಜವೆ ಇದು? ಪರಿಹಾರ ಏನು? 

  ಅಪಾಯಕಾರಿಯಾದ ಚಂದ್ರ, ಮತ್ತಿಷ್ಟು ಅಪಾಯಕಾರಿಯಾದ ಶನೈಶ್ಚರನ ಜೊತೆ ನಷ್ಟ ಭಾವದಲ್ಲಿದ್ದಾನೆ. ಪ್ರತಿ ದಿನ ಚಂದ್ರ ಮತ್ತು ಶನೈಶ್ಚರ ಅಷ್ಟೋತ್ತರ ನಾಮಾವಳಿ ಓದಿ. ಶ್ರೀದತ್ತಾತ್ರೇಯ ಸ್ತೋತ್ರ ಪಠಿಸಿ. ಆರಾಧನೆ ಮಾಡಿ. ದತ್ತಾನುಗ್ರಹ ಒಂದು ತಾಂತ್ರಿಕ ಸಂಪನ್ನ ಶಕ್ತಿಯಾಗಿ ಹೊರ ಹೊಮ್ಮಲು ಇದರಿಂದ ದಾರಿ ಸುಸೂತ್ರ. ನಿಶ್ಯಕ್ತಿಯನ್ನು ತರುವ ಚಂದ್ರನಿಂದ ಮುಕ್ತಿಗೆ ದೊಡ್ಡ ದಾರಿ. 


Trending videos

Back to Top