CONNECT WITH US  

ಆಟೋ ದುಡಿಮೆ ಬಿಟ್ಟು, ಚಿಕಿತ್ಸೆ ಕೊಡಿಸಿದ ಪುಣ್ಯಾತ್ಮ

ಮೂರೇ ನಿಮಿಷದ ಮನುಷ್ಯ

ಅಂದು ಡಿಗ್ರಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಮುಗಿಸಿ, ಆಟೋಗಾಗಿ ಕಾಯುತ್ತಿದ್ದೆ. ಬಿಸಿಲು ಜೋರಾಗಿತ್ತು. ಗಂಟಲೊಳಗೆ ನೀರಡಿಕೆ ಪಕ್ಕಾವಾದ್ಯ. ನಾನು ಕರೆ ಮಾಡಿದ್ದ ಆಟೋ, ಈಗ ಬರುತ್ತೆ ಅಂತ ಕಾದಿದ್ದೆ. ಆದರೆ, ಯಾಕೋ ತಡವಾಯಿತು. ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾದವು. ಸುತ್ತಲೂ ನೋಡುತ್ತಿದ್ದ ಹಾಗೆ ನಾನು ಎಲ್ಲಿರುವೆ ಎಂಬುದೇ ತಿಳಿಯದಾಯಿತು. ನಿಂತಲ್ಲೇ ನೆಲಕ್ಕುರುಳಿದೆ. ಸ್ವಲ್ಪ ದೂರದಲ್ಲಿ ಇದ್ದಂಥ‌ವರು ನನ್ನನ್ನು ನೋಡಿ, ಕೂಡಲೇ ಮೇಲಕ್ಕೆತ್ತಲು ಬಂದರು. ಆಸ್ಪತ್ರೆಗೆ ಕರೆದೊಯ್ದರು. ಸ್ಥಳಕ್ಕೆ ಬರುತ್ತಿದ್ದಂತೆ ಈ ವಿಚಾರ ತಿಳಿದ ಆಟೋ ಪ್ರಕಾಶ್‌ ಅಂಕಲ್‌, ನೇರವಾಗಿ ಆಸ್ಪತ್ರೆಗೇ ಬಂದುಬಿಟ್ಟರು.

  ತುಂಬಾ ನಿತ್ರಾಣಳಾಗಿದ್ದ ನನ್ನನ್ನು ವೈದ್ಯರು ನಿರ್ಲಕ್ಷಿಸಿ, ಏನೂ ಆಗಿಲ್ಲ ಎಂದು ಚಿಕಿತ್ಸೆಗೆ ಹಿಂದೇಟು ಹಾಕಿದರು. ಆದರೆ, ಆಟೋ ಅಂಕಲ್‌ ನನ್ನ ಪೋಷಕರ ಸ್ಥಾನದಲ್ಲಿ ನಿಂತು, ವೈದ್ಯರೊಂದಿಗೆ ಪ್ರತಿವಾದಿಸಿ, ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ನಮ್ಮ ಮನೆಗೆ 16 ಕಿ.ಮೀ. ದೂರ. ರಸ್ತೆ ಬೇರೆ ಸರಿಯಿಲ್ಲ. ಗುಡುಗು ಮಿಂಚು ಸಹಿತ ಜೋರು ಮಳೆಯ ಆರ್ಭಟ. ಅಮ್ಮ ಆಸ್ಪತ್ರೆಗೆ ಬರುವವರೆಗೂ ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡರು ಅಂಕಲ್‌. ಅಂದು ಅವರು ಯೂನಿಫಾರಂ ಧರಿಸಿರಲಿಲ್ಲ. ಯಾವುದೋ ಮದುವೆಗೆ ಹೋಗಬೇಕೆಂದು ಉಡುಗೊರೆ ಸಹಿತ ಬಂದಿದ್ದರು. ಆಟೋ ಡ್ರೈವರ್‌ಗಳಿಗೆ ನಿತ್ಯದ ದುಡಿಮೆಯೇ ಬದುಕಿಗೆ ಆಸರೆ. ಅದರಲ್ಲೂ ಅಂಕಲ್‌ 4-5 ತಾಸು ಬಾಡಿಗೆ ಮಾಡದೇ, ನನ್ನನ್ನು ನೋಡಿಕೊಂಡರು. ಪ್ರತಿಫ‌ಲಾಪೇಕ್ಷೆ ಇಲ್ಲದೇ, ಮಾನವೀಯತೆ ಮೆರೆದಿದ್ದಕ್ಕೆ ಅವರಿಗೆ ನಾನು ಋಣಿ. 

ನೀತು ಕೆ.ವಿ., ಶಂಕರಘಟ್ಟ

Trending videos

Back to Top