CONNECT WITH US  

ಮೌಲ್ಯಯುತ ಜೀವನ ಅಳವಡಿಸಿಕೊಳ್ಳಿ

ತುಮಕೂರು: ಉನ್ನತ ವಿಚಾರಗಳನ್ನು ಸ್ವಾಗತಿಸುವ ಮನೋಧರ್ಮವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ನಗರದ ಶ್ರೀಸಿದ್ಧಗಂಗಾ ಕಲಾ, ವಿಜಾnನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಚ್ಚಿಂತನ ವೇದಿಕೆ ಸಹಯೋಗದಲ್ಲಿ ನಡೆದ ಡಿ.ಸಿ.ಚಿತ್ರಲಿಂಗಯ್ಯ ಅವರ ಮಣೇವು ಕೃತಿ ಲೋಕಾರ್ಪಣೆ ಮತ್ತು ಪೊ›.ಜಿ.ಎಸ್‌.ರೇಣುಕಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಉತ್ತಮ ಚಿಂತನೆಯನ್ನು ಸ್ವೀಕರಿಸುವಲ್ಲಿ ಜಾತಿ, ಧರ್ಮ ಮಾನದಂಡವಾಗಬಾರದು. ಅಲ್ಲದೇ ಪೂರ್ವಾಗ್ರಹ ಪೀಡಿತರಾಗಿ ನಮ್ಮ ದೇಶದ ಬಗ್ಗೆ, ಸಮಾಜದ ಬಗ್ಗೆ, ನಕಾರಾತ್ಮಕವಾಗಿ ಯೋಚಿಸುತ್ತಾ ಹೋದರೆ ನಮಗೆ ನಾವೇ ಅಪರಿಚಿತ ವ್ಯಕ್ತಿಗಳಾಗುತ್ತೇವೆ. ಯಶಸ್ವಿ ಜೀವನಕ್ಕಿಂತ ಮೌಲ್ಯಯುತ ಜೀವನ ಉತ್ತಮ ಎಂದರು.

ಮಂಗನಿಂದ ಮಾನವನೆನ್ನಬಹುದು ಆದರೆ ಮನುಷ್ಯನ ಮುಂದಿನ ಜನ್ಮ ಯಾವುದು ಎಂಬುದನ್ನು ಹೇಳುವುದಕ್ಕೆ ವಿಜಾnನಕ್ಕೆ ಸಾಧ್ಯವಿಲ್ಲ. ಒಬ್ಬನ ಇಂದ್ರಿಯಗಳು ಪ್ರತಿಪಾದಿಸುವ ಸತ್ಯ ಅಲ್ಲ. ನಿಮ್ಮ ಆಲೋಚನೆಯಿಂದ ನೀವು ಪ್ರಚೋದಿಸಲ್ಪಟ್ಟಾಗ ಕಾರ್ಯಗಳು ಹೊರಹೊಮ್ಮುತ್ತವೆ. ನಿಮ್ಮ ಭವಿಷ್ಯ ರೂಪುಗೊಳ್ಳುವುದು ನಿಮ್ಮ ಹವ್ಯಾಸಗಳಿಂದ. ಹೀಗಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಹವ್ಯಾಸಗಳು ಪ್ರಾರಂಭದಲ್ಲಿ ಜೇಡರ ಬಲೆಯಂತೆ ಇರುತ್ತದೆ. ಕಾಲ ಕಳೆದಂತೆ ಅದು ಕಬ್ಬಿಣ ಸರಪಳಿಯಾಗುತ್ತದೆ ಎಂದು ತಿಳಿಸಿದರು.

ಕೃತಿ ಲೋಕಾರ್ಪಣೆ ಮಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಡಾ.ನೀಲಗಿರಿ ತಳವಾರ ಮಾತನಾಡಿ, ಈ ಕೃತಿಯಲ್ಲಿ 12 ಲೇಖನಗಳಿದ್ದು, ಜಾನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಆಲೋಚನೆಗಳಾಗಿವೆ. ಲೇಖಕರು ವಿದ್ಯಾರ್ಥಿ ದಿಸೆಯಲ್ಲಿಯೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮವಾದ ಸಂಗತಿಯಾಗಿದೆ. ಇದಕ್ಕೆ ನಿದರ್ಶನವಾಗಿ ಪುಟ್ಟಪ್ಪ, ಚಂದ್ರಶೇಖರ ಕಂಬಾರ ಇನ್ನೂ ಮುಂತಾದವರನ್ನು ಕಾಣಬಹುದು.

ವಿದ್ಯಾರ್ಥಿಗಳು ಪ್ರಯತ್ನವನ್ನು ಬಿಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗೌರವದ ತಪಸ್ವಿ ಎಂದು ಕುವೆಂಪು ಹೇಳಿದ್ದಾರೆ. ಹಾಗೆಯೇ ಸಾಹಿತಿಯಾಗಲು ಬಯಸುವವನು ಅನ್ಯರೊಂದಿಗೆ ಬೆರೆತು ವಿಚಾರ ವಿನಿಮಯ ಮಾಡುವುದರ ಜೊತೆಗೆ ತನ್ನ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಕೃತಿ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕೆ.ತಿಮ್ಮಯ್ಯ ಮಾತನಾಡಿ, ಕುವೆಂಪು ಅವರ ಚಿಂತನೆ ವೈಚಾರಿಕಕ್ಕೆ ಪರವಾದದ್ದು. ಅದನ್ನು ಈ ಕೃತಿಯಲ್ಲಿ ಕಾಣಬಹುದು. ಕಲಿಕೆಯ ಆಸಕ್ತಿ ಆರಂಭವಾದರೆ ಅದನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕಾಗುತ್ತದೆ. ಈ ಕೃತಿಯ ಲೇಖನಗಳಲ್ಲಿ ಮಾನವ ಸಂಬಂಧದ ಶೋಧ, ಪ್ರಗತಿಪರ ಚಿಂತನೆ, ಸಂಸ್ಕೃತಿ ಚಿಂತನೆಯನ್ನು ಕಾಣಬಹುದು ಎಂದರು.

ಬದುಕುವುದೆಲ್ಲಾ ಜೀವಂತಿಕೆಯಲ್ಲ, ಪ್ರಜಾnಪೂರ್ವಕವಾಗಿ ಬದುಕುವುದೇ ವಿಶಿಷ್ಠವಾದ ಬದುಕು. ವಿದ್ಯಾರ್ಥಿಗಳಿಗೆ ಆಚರಣೆ ಹಿಂದಿರುವ ಔಚಿತ್ಯವೇನು ಎಂಬುದನ್ನು ತಿಳಿಯಬೇಕು. ಅಲ್ಲದೇ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯರಾದ ಪೊ›.ನಳಿನಾಕ್ಷಿ, ಪೊ›.ಬಿ.ಎಸ್‌.ಮಂಜುಳಾ, ಡಾ.ಆರ್‌.ಆನಂದಕುಮಾರಿ, ಡಿ.ಸಿ.ಚಿತ್ರಲಿಂಗಯ್ಯ, ಸತೀಶ್‌, ಪೊ›.ಸಿ.ವಿ.ಶಕುಂತಲ ಉಪಸ್ಥಿತರಿದ್ದರು.

ಸಮಾಜದಲ್ಲಿ ಯಾವುದು ಪ್ರಿಯವಾದದ್ದು ಮತ್ತು ಯಾವುದು ಹಿತವಾದದ್ದು ಎಂದು ಆಯ್ಕೆ ಮಾಡವ ಪ್ರಜ್ಞೆ ಇರಬೇಕು. ಡಿವಿಜಿಯವರು ಮೈಸೂರುಪಾಕನ್ನು ಪ್ರಿಯವಾದದ್ದು ಮತ್ತು ಹಾಗಲಕಾಯಿ ಗೊಜ್ಜನ್ನು ಹಿತವಾದದ್ದು ಎನ್ನುತ್ತಾರೆ. ಸತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಾಮಾಣಿಕ ಸ್ಥಿತಿ ರೂಢಿಸಿಕೊಳ್ಳಬೇಕು.
ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ
 

Trending videos

Back to Top