CONNECT WITH US  

ಅಪರಿಚಿತರೊಂದಿಗೆ ಎಚ್ಚರದಿಂದಿರಿ: ಜಯಕುಮಾರ್‌

ಹುಳಿಯಾರು: ವಿದ್ಯಾರ್ಥಿನಿಯರು ಶಾಲೆಗೆ ಬಂದು ಮನೆಗಳಿಗೆ ಹಿಂದಿರುಗುವಾಗ ಯಾವುದೇ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡದೆ ಎಚ್ಚರದಿಂದ ತಿರುಗಾಡಬೇಕೆಂದು ಸಿಪಿಐ
ಜಯಕುಮಾರ್‌ ತಿಳಿಸಿದರು.

ಹುಳಿಯಾರಿನ ಪೊಲೀಸ್‌ ಠಾಣೆ ಮತ್ತು ವಿದ್ಯಾ ಎವಾರಿಧಿ ಇಂಟರ್‌ ನ್ಯಾಷನಲ್‌ ಶಾಲೆ ಸಹಯೋಗದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ
ಅಪರಾಧ ತಡೆ ಮಾಸಾಚರಣೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಮಹಿಳೆಯರು ಭಯದಿಂದ ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು ಇವುಗಳನ್ನು ತಡೆ‌ಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ
ವ್ಯಕ್ತಿಯೂ ಇಲಾಖೆ ಸಹಕರಿಸಬೇಕೆಂದು ತಿಳಿಸಿದರು.

ಹೆಣ್ಣು ಮಕ್ಕಳು ಮನೆಗಳಿಂದ ಶಾಲೆಗಳಿಗೆ ತಿರುಗಾಡುವಾಗ ಯಾವುದೇ ಅಪರಿಚಿತ ವ್ಯಕ್ತಿ ಗಳು ಮಾತನಾಡಿಸಲು ಬಂದರೆ ಮಾತನಾಡ ಬಾರದು. ವಿದ್ಯಾರ್ಥಿನಿಯರು ಒಬ್ಬಂಟಿಯಾಗಿ ಶಾಲೆಗಳಿಗೆ
ಹೋಗುವುದಕ್ಕಿಂತ ಇತರೆ ವಿದ್ಯಾರ್ಥಿನಿಯರ ಜೊತೆಯಾಗಿ ತೆರಳುವುದು ಉತ್ತಮ ಎಂದು ತಿಳಿಸಿದರು. ಒಂದು ವೇಳೆ ಅಪರಿಚಿತ ವ್ಯಕ್ತಿಗಳು ತಿರುಗಾಡುವಾಗ ತೊಂದರೆ ನೀಡಿದರೆ ಅಥವಾ ಹಿಂಬಾಲಿಸುವುದು ಕಂಡು ಬಂದರೆ ಹತ್ತಿರದ ಪೊಲೀಸ್‌ ಠಾಣೆ ಅಥವಾ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರ ಗಮನಕ್ಕೆ ತರಬೇಕೆಂದು ಹೇಳಿದರು.

ಅಪರಿಚಿತರಿಂದ ಬರುವ ಮಿಸ್‌ ಕಾಲ್‌ಗೆ ಕಿವಿಕೊಡಬೇಡಿ, ತಮ್ಮ ಶಾಲೆಯ, ಹಾಸ್ಟೆಲ್‌,ಮನೆಯ ಅಕ್ಕಪಕ್ಕದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದರೆ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಎಂದರು. ಪೊಲೀಸ್‌ ಠಾಣೆಯಿಂದ ವಿದ್ಯಾರ್ಥಿಗಳಿ ಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಭಗವದ್ಗೀತೆ ಪುಸ್ತಕ ವಿತರಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್‌ಕುಮಾರ್‌, ಪ್ರಾಚಾರ್ಯ ರವಿ,ಪಿಎಸ್‌ಐ ಘೋರ್ಪಡೆ, ತಾಪಂ ಉಪಾಧ್ಯಕ್ಷವಸಂತ್‌, ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top